ಕಾಂಗ್ರೆಸ್‌ನವರಂತೆ ನಾನು ಲೂಟಿ ಹೊಡೆಯುವ ಕೆಲಸ ಮಾಡಿಲ್ಲ
ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ನಾವು ಹೇಳಿದ್ದೀವಾ?
ಬೆಸ್ಕಾಂನವರು ದಂಡ ಹಾಕಿದ್ರೆ ನಾನು ಕಟ್ಟುತ್ತೇನೆ ಎಂದ ಕುಮಾರಸ್ವಾಮಿ
ಬೆಂಗಳೂರು: ಜೆ.ಪಿ ನಗರ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿದ ಕಾಂಗ್ರೆಸ್ ಆರೋಪಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.
ನಾನೇನು ದೇಶವನ್ನ ಲೂಟಿ ಹೊಡೆದಿಲ್ಲ. 1000 ರೂಪಾಯಿ ಕರೆಂಟ್ ಕದಿಯುವಂತಹ ಪ್ರಮೇಯ ನಂಗೆ ಬಂದಿಲ್ಲ. ಕಾಂಗ್ರೆಸ್‌ಗೆ ಬೇರೆ ಕೆಲಸ ಇಲ್ಲ. ಅದಕ್ಕೆ ಈ ವಿಚಾರವನ್ನ ಇಟ್ಟುಕೊಂಡು ಚರ್ಚೆ ಮಾಡುತ್ತಾ ಇದ್ದಾರೆ. ಅಚಾತುರ್ಯದಿಂದ ಈ ಘಟನೆ ಆಗಿದೆ. ದೇಶ- ರಾಜ್ಯ ಮುಳುಗಿ ಹೋಗುವ ಕೆಲಸ ಮಾಡಿಲ್ಲ. ವಿದ್ಯುತ್ ಕಳ್ಳತನ ಮಾಡುವಂತಹ ದರಿದ್ರ ನಂಗೆ ಬಂದಿಲ್ಲ ಎಂದು ಹೆಚ್‌ಡಿಕೆ ಗುಡುಗಿದ್ದಾರೆ.
ನನ್ನ ಎಲ್ಲಾ ವಿಚಾರಗಳು ತೆರೆದ ಪುಸ್ತಕ. ಕಾಂಗ್ರೆಸ್‌ನವರಂತೆ ನಾನು ಲೂಟಿ ಹೊಡೆಯುವ ಕೆಲಸ ಮಾಡಿಲ್ಲ. ಬಿಡದಿ ತೋಟದಿಂದ ಬಂದ ಕೂಡಲೇ ವಿಚಾರ ಗೊತ್ತಾಗಿದೆ. ಕೂಡಲೇ ಕನೆಕ್ಷನ್ ತೆಗೆಯಿರಿ ಅಂತ ಹೇಳಿದ್ದೇನೆ. ಲೈನ್ ಮ್ಯಾನ್‌ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ನಾವು ಹೇಳಿದ್ದೀವಾ? ಏನೇ ಅಚಾತುರ್ಯ ಆದ್ರೂ ಅದಕ್ಕೆ ನಾನೇ ಹೊಣೆ. ಬೆಸ್ಕಾಂನವರು ದಂಡ ಹಾಕಿದ್ರೆ ನಾನು ಕಟ್ಟುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ