newsfirstkannada.com

ವಿಪಕ್ಷ ನಾಯಕರನ್ನು ಆದಷ್ಟು ಬೇಗ ಆಯ್ಕೆ ಮಾಡಿ- ಬಿಜೆಪಿ ವರಿಷ್ಠರಿಗೆ ಹೆಚ್​​ಡಿಕೆ ಮನವಿ

Share :

17-07-2023

  ಇನ್ನೂ ಬಗೆಹರಿಯದ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು

  ವಿಪಕ್ಷ ನಾಯಕರನ್ನು ಆಯ್ಕೆ ಮಾಡಿ ಎಂದ ಹೆಚ್​ಡಿಕೆ..!

  ಬಿಜೆಪಿ ವರಿಷ್ಠರಿಗೆ ಹೆಚ್​​.ಡಿ ಕುಮಾರಸ್ವಾಮಿ ಮನವಿ

ಬೆಂಗಳೂರು: ಆದಷ್ಟು ಬೇಗ ವಿಧಾನಸಭೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವರಿಷ್ಠ ನಾಯಕರಿಗೆ ಮನವಿ ಮಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಬಿಜೆಪಿ ವರಿಷ್ಠರಿಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಆದರೆ, ಈ ಸರಕಾರದ ವಿರುದ್ಧ ಸದನದಲ್ಲಿ ದೊಡ್ಡ ಹೋರಾಟದ ಅಗತ್ಯ. ನಾವೆಲ್ಲ ಪ್ರತಿಪಕ್ಷದಲ್ಲಿ ಇರುವುದರಿಂದ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.

ಬಿಜೆಪಿ 65 ಸ್ಥಾನ ಗೆದ್ದಿದೆ. ಆ ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪ ಮುಖ್ಯಮಂತ್ರಿಗಳು, ಮಾಜಿ ಸಚಿವರು ಇದ್ದಾರೆ. ಯಾರಾದರೂ ಇಬ್ಬರನ್ನು ನೇಮಕ ಮಾಡಿ. ಇಷ್ಟು ದಿನ ಪ್ರತಿಪಕ್ಷ ಸ್ಥಾನವನ್ನು ಖಾಲಿ ಬಿಡುವುದು ಒಳ್ಳೆಯದಲ್ಲ ಎಂದರು.

ಕೇಂದ್ರದ ಮಂತ್ರಿಗಿರಿಗೆ ಟವೆಲ್

ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಆಗ್ತಾರಂತೆ. ಕೇಂದ್ರದ ಮಂತ್ರಿಗಿರಿಗೆ ಟವೆಲ್ ಹಾಕಿದ್ದಾರಂತೆ. ಹೀಗೆಲ್ಲಾ ಮಾಧ್ಯಮದಲ್ಲಿ ಬರ್ತಿದೆ. ನಮ್ಮ ಪಕ್ಷದಲ್ಲಿ 19 ಶಾಸಕರಿದ್ದಾರೆ. ನಾನು ಅವರ ಜೊತೆಯಲ್ಲೇ ಹೋರಾಟ ಮಾಡ್ತೀನಿ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಜೆಡಿಎಸ್‌ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು; 12 ಜನ ಹೋಗ್ತಾರಂತೆ, 7 ಸೀಟು ಕೇಳಿದ್ದಾರಂತೆ ಎಂದು ಕೆಲ ಮಾಧ್ಠಮಗಳಲ್ಲಿ ಸುದ್ದಿ ಬರುತ್ತಿದೆ. ಇದ್ಯಾವುದು ಸತ್ಯ ಅಲ್ಲ. ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ. ಎಲ್ಲರೂ ಒಟ್ಟಾಗಿ ಕುಟುಂಬದ ರೀತಿ ಇದ್ದೇವೆ ಎಂದರು.

ಎರಡು ಮೂರು ಕ್ಷೇತ್ರ ಗೆದ್ದಾಗಲೇ ಧೃತಿಗೆಡಲಿಲ್ಲ

ನಾವು ಎಲ್ಲರೂ ಸೋತು ಎರಡು ಮೂರು ಕ್ಷೇತ್ರ ಗೆದ್ದಾಗಲೇ ಧೃತಿಗೆಡಲಿಲ್ಲ. ಈಗ 19 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ, ಈಗ ಹೆದರುತ್ತೇವೆಯಾ? ನಮ್ಮ ಮುಂದಿನ ನಡೆ ಏನು? ಯಾರ ಜತೆ ಸೇರಬೇಕು, ಬಿಡಬೇಕು ಎನ್ನುವ ಬಗ್ಗೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು ಮಾಜಿ ಮುಖ್ಯಮಂತ್ರಿಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಪಕ್ಷ ನಾಯಕರನ್ನು ಆದಷ್ಟು ಬೇಗ ಆಯ್ಕೆ ಮಾಡಿ- ಬಿಜೆಪಿ ವರಿಷ್ಠರಿಗೆ ಹೆಚ್​​ಡಿಕೆ ಮನವಿ

https://newsfirstlive.com/wp-content/uploads/2023/07/HDK_2-2.jpg

Load More