ಹೆಚ್ಡಿಕೆ ಸಿಡಿಸಿದ ಬಾಂಬ್ಗೆ ಹಸ್ತ ಪಡೆ ಕಂಗಾಲು
ಸದನದಲ್ಲಿ ಸದ್ದು ಮಾಡಿದ ‘ಪೆನ್ಡ್ರೈವ್’ ಪಾಲಿಟಿಕ್ಸ್
ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿದ ಹೆಚ್ಡಿಕೆ ಪೆನ್ಡ್ರೈವ್
ಬೆಂಗಳೂರು: ವರ್ಗಾವಣೆ ದಂಧೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿದೆ. ಪೆನ್ಡ್ರೈವ್ ತೋರಿಸಿ ಟೀಸರ್ ಬಿಟ್ಟಿರುವ ಮಾಜಿ ಸಿಎಂ ಹೆಚ್ಡಿಕೆ ಪಿಕ್ಚರ್ ಬಿಡಲು ತಯಾರಿ ನಡೆಸಿದ್ದಾರೆ. ಆದ್ರೆ ಅದಕ್ಕೂ ಮುನ್ನವೇ ಸಿಎಂ ಹಾಗೂ ಮಾಜಿ ಸಿಎಂಗಳ ನಡುವೆ ಮಾತಿನ ಮಲ್ಲಯುದ್ಧ ನಡೆದುಹೋಗಿದೆ. ಈ ವಾಗ್ಯುದ್ಧ ಅವರವರ ಪುತ್ರರವರೆಗೂ ಹೋಗಿದೆ.
ವರ್ಗಾವಣೆ ದಂಧೆ.. ನೂತನ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸಿಡಿಸಿರುವ ಮಿಸೈಲ್ ಬಾಂಬ್. ಸದ್ಯ ಈ ಬಾಂಬ್ಗೆ ಹಸ್ತ ಪಡೆ ಕಂಗಾಲಾಗಿದೆ. ಸಿಎಂ ಆದಿಯಾಗಿ ಸಚಿವರ ಪಡೆ ಸದನದ ಒಳಗೆ ಹಾಗೂ ಹೊರಗೆ ನಿರುತ್ತರವಾಗಿದ್ದಾರೆ. ಯಕಶ್ಚಿತ್ ಪೆನ್ಡ್ರೈವ್ ಚಿಪ್ವೊಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ಬೆವರಿಳಿಸುವಂತೆ ಮಾಡಿದೆ. ಈ ಪೆನ್ಡ್ರೈವ್ ಆರೋಪ ಮಾಡಿದ ಹೆಚ್ಡಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
‘ಕುಮಾರಸ್ವಾಮಿ ಅವರದ್ದು ಬರೀ ಹಿಟ್ ಅಂಡ್ ರನ್’
ಆಡಳಿತದಲ್ಲಿ ಟ್ರಾನ್ಸಫರ್ಗಳು ಸ್ವಾಭಾವಿಕ ಅಂತ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ. ಅವರದ್ದು ಬರೀ ಹಿಟ್ ಆ್ಯಂಡ್ ರನ್ ಆರೋಪಗಳೇ. ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ ಅಂತ ಹೇಳಿದ್ದಾರೆ.
ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ
ಇನ್ನು ಹಾಲಿ ಸಿಎಂ ಸಿದ್ದರಾಮಯ್ಯ ವರ್ಸಸ್ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಪೆನ್ಡ್ರೈವ್ ಸಮರ ಜೋರಾಗಿದೆ. ಪೆನ್ಡ್ರೈವ್ ಹಿಡಿದು ಹೆಚ್ಡಿಕೆ ಕಾಂಗ್ರೆಸ್ಗೆ ರಣವೀಳ್ಯ ಕೊಟ್ಟಿದ್ದಾರೆ. ಎಲ್ಲಾ ವರ್ಗಾವಣೆ ದಂಧೆ ಸಿಎಂ ನೇತೃತ್ವದಲ್ಲೇ ನಡೆಯುತ್ತಿದೆ ಅನ್ನೋ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ನಂಗೆ ಹಿಟ್ ಆ್ಯಂಡ್ ರನ್ ಅಂತಾರೆ, ಏನಾದರೂ ಹೇಳಿಕೊಳ್ಳಲಿ. ಆತುರ ಇಲ್ಲ, ಸೂಕ್ತ ಸಮಯದಲ್ಲಿ ಸರಿಯಾಗಿ ಪೆನ್ಡ್ರೈವ್ ಬಿಡುಗಡೆ ಮಾಡ್ತೀನಿ ಅಂತ ಗುಡುಗಿದ್ದಾರೆ.
ಮಗನ ಮೇಲಿನ ಆರೋಪಕ್ಕೆ ಕುಮಾರಸ್ವಾಮಿ ಸವಾಲು
ಇನ್ನು ಸದನಕ್ಕೂ ಮೊದಲು ಮಾತನಾಡಿದ ಕುಮಾರಸ್ವಾಮಿ, ನಾನು ಪೆನ್ಡ್ರೈವ್ ರಿಲೀಸ್ ಮಾಡಿದ್ರೆ ದಂಧೆ ನಿಲ್ಲಿಸುವ ತಾಕತ್ತು ಸಿಎಂಗೆ ಇದೆಯಾ ಅಂತ ಪ್ರಶ್ನಿಸಿದ್ರು. ಅಲ್ಲದೇ ನನ್ನ ಮಗ ಯಾವುದಾದ್ರೂ ವರ್ಗಾವಣೆ ಮಾಡಿದ್ರೆ ಫ್ರೂವ್ ಮಾಡಲಿ. ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಅಂತ ಸಿಎಂಗೆ ಸವಾಲು ಹಾಕಿದ್ದಾರೆ.
ಇನ್ನು ಯತೀಂದ್ರ ಅವರನ್ನು ಬಿಜೆಪಿ ಶಾಡೋ ಸಿಎಂ ಅಂತ ಹೇಳಿ ಟ್ವೀಟ್ ಮಾಡಿ ಕಾಲೆಳೆದಿದೆ. ಒಟ್ಟಾರೆ ವರ್ಗಾವಣೆ ದಂಧೆ ಎಂಬ ಬಾಂಬ್ ಸಿಡಿಸಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸಂಚಲನ ಸೃಷ್ಟಿಸಿದ್ದಾರೆ. ಸದನದ ಹೊರಗೂ ಒಳಗೂ ಗದ್ದಲವೇಳುವಂತೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ