ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಕಂಡಿರುವ ನಿಖಿಲ್
5000 ಕೂಪನ್ ನೀಡಿದ್ದಾರೆ, ಅಷ್ಟೊಂದು ಹಣ ಎಲ್ಲಿಂದ ಬರುತ್ತೆ -ಕುಮಾರಸ್ವಾಮಿ ಪ್ರಶ್ನೆ
ಮಗನನ್ನು ನ್ಯಾಯಯುತವಾಗಿ ಸೋಲಿಸಿದ್ರೆ ಒಪ್ಪಿಕೊಳ್ತಿದೆ ಎಂದ HDK
ಬೆಂಗಳೂರು: ರಾಮನಗರದಲ್ಲಿ ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನ ನ್ಯಾಯಯುತವಾಗಿ ಸೋಲಿಸಿಲ್ಲ. ಇದೇ ಕೂಪನ್ ಕಾರ್ಡ್ ಹಂಚಿ ಸೋಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಕುಮಾರಸ್ವಾಮಿ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಎಂದ್ರಿ. ಆದರೆ ನೀವು ಈ ಕೂಪನ್ಗೆ ಎಷ್ಟು ಪರ್ಸಂಟೇಜ್ ಫಿಕ್ಸ್ ಮಾಡ್ತಿರೀ. ನೀವು ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನ ನ್ಯಾಯಯುತವಾಗಿ ಸೋಲಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಸೋಲಲು ಕಾರಣ ಇದು
ಮತದಾನ ಆರಂಭ ಆಗುವುದಕ್ಕಿಂತ ಮೊದಲು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಂಚಿರುವ ಕೂಪನ್ ಇದು. ನನಗೆ ಇದು ಸಿಕ್ಕಿದ್ದು, ಚುನಾವಣೆ ನಡೆದು ಎರಡು ದಿನ ಕಳೆದ ಮೇಲೆ. ನಮ್ಮ ಕಾರ್ಯಕರ್ತರು ನನ್ನ ಬಳಿ ಬಂದು, ಕಾಂಗ್ರೆಸ್ನವರು ಈ ರೀತಿಯ ಕೂಪನ್ಗಳನ್ನು ಹಂಚಿಕೆ ಮಾಡಿದ್ದಾರೆ ಎಂದರು. ಇದಿರಿಂದ ನಮಗೆ ಭಾರೀ ಹಿನ್ನಡೆಯಾಗಿದೆ ಎಂದು ನೋವು ಹೇಳಿಕೊಂಡರು. ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣ ಇದು ಎಂದು ಆರೋಪಿಸಿದರು.
ಅದು ಐದು ಸಾವಿರದ ಕೂಪನ್ ಆಗಿದೆ. ಗೆದ್ದ ಮೇಲೆ ಕೊಡ್ತೀವಿ ಎಂದು ಹೇಳಿ ನಂಬಿಸಿದ್ದಾರೆ. ಇವರು ನ್ಯಾಯಯುತವಾಗಿ ಸೋಲಿಸಿಲ್ಲ. ಜನರಿಗೆ ಆಮೀಷವೊಡ್ಡಿ ಗೆಲ್ಲಿಸಿಕೊಂಡಿದ್ದಾರೆ. ಈ ಕೂಪನ್ಗಳಿಗೆ 20 ಕೋಟಿ ಬೇಕು. ಇಷ್ಟು ಹಣವನ್ನು ಎಲ್ಲಿಂದ ತರುತ್ತೀರಿ. ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಬೇಕು ಅಂತಾ ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ