newsfirstkannada.com

ವಿದೇಶ ಪ್ರವಾಸ ಮುಗಿಸಿ ಕುಮಾರಸ್ವಾಮಿ ವಾಪಸ್; ಬರ್ತಿದ್ದಂತೆಯೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

Share :

14-08-2023

    ಸ್ನೇಹಿತರ ಆಹ್ವಾನದ ಮೇರೆಗೆ ಕಾಂಬೋಡಿಯಾ ಪ್ರವಾಸ

    ಇಂದು ಮಧ್ಯರಾತ್ರಿ ಬೆಂಗಳೂರಿಗೆ ಬಂದಿರುವ ಕುಮಾರಸ್ವಾಮಿ

    ದೇಶ ಸುತ್ತು, ಕೋಶ ಓದು ಎಂಬ ಗಾದೆ ಹೇಳಿದ ಮಾಜಿ ಸಿಎಂ

ಕಾಂಬೋಡಿಯಾ ಪ್ರವಾಸ ಮುಗಿಸಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ತಡರಾತ್ರಿ ತಾಯ್ನಾಡಿಗೆ ವಾಪಾಸ್ಸಾಗಿದ್ದಾರೆ. ವಾಪಸ್​ ಬರುತ್ತಿದ್ದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಅಲ್ಲೆ ಇದ್ದು ಬಿಡಿ ಅಂದ್ರಲ್ಲ’ ನಾನು ನಿಮ್ಮ ಕೇಳಿ ಎಲ್ಲಿಗಾದ್ರು ಹೋಗಬೇಕಾ? ಇಲ್ಲ ಅವರಿಂದ ವ್ಯವಸ್ಥೆ ಮಾಡಿಕೊಂಡು ವಿದೇಶಕ್ಕೆ ಹೋಗ್ಬೇಕಾ ಅಂತ ಕಿಡಿಕಾರಿದ್ರು. ಕಾಂಬೋಡಿಯದಲ್ಲಿ ಸ್ನೇಹಿತರ ಆಹ್ವಾನ ಇತ್ತು, ಹೋಗಿದ್ದೆ. ಕೆಲವು ಸಚಿವರು, ನೀವು ವಿದೇಶದಲ್ಲಿ ಇದ್ಬಿಡಿ ಎಲ್ಲ ವ್ಯವಸ್ಥೆ ಮಾಡಿ ಕೊಡ್ತೀವಿ ಅಂದ್ರಲ್ಲಾ ಯಾಕೆ ನೀವು ಇಲ್ಲಿ ರಾಜ್ಯವನ್ನ ಲೂಟಿ ಹೊಡೆಯೋಕೆ ನಮ್ಮನ್ನ ಬಿಟ್ಬಿಡಿ, ನೀವು ವಿದೇಶದಲ್ಲಿ ಇರಿ ಅಂತ ಸಲಹೆ ಕೊಟ್ಟಿದ್ರಲ್ಲಾ ಅಂತ ಕಿಡಿಕಾರಿದ್ರು. ಅಧಿಕಾರಿಗಳ ಸಹಿ ಮಾಡಿದ್ದಾರೆ ಅನ್ನೋ ಸಚಿವ ಚಲುವರಾಯಸ್ವಾಮಿ ಆರೋಪಕ್ಕೆ ಹೆಚ್​ಡಿಕೆ ಗರಂ ಆದ್ರು. ಹೌದಪ್ಪ ನಾನೇ ಸಹಿ ಮಾಡಿದ್ದೀನಿ, ಹಾಗಾದ್ರೆ ರಾಜ್ಯಪಾಲರ ಹತ್ರ ಯಾಕ್ ಹೋದ್ರು ಅಂತ ಪ್ರಶ್ನಿಸಿದ್ದಾರೆ.

ಕಳೆದ 12 ವರ್ಷದಿಂದ ಪಕ್ಷ ಸಂಘಟನೆಗೆ ಸಮಯ ಇಟ್ಟಿದ್ದೆ. ದೇಶ ಸುತ್ತು, ಕೋಶ ಓದು ಅಂತಾ ಹಿರಿಯರ ಗಾದೆ ಮಾತಿದೆ. ಯಾವ ದೇಶದಲ್ಲಿ ಏನೇನಿದೆ ಅಂತಾ ತಿಳಿದುಕೊಳ್ಳಬೇಕಲ್ಲ. ಅಲ್ಲಿ ಯಾವ ರೀತಿ ಇದೆ, ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕಲ್ವಾ. ಅದ್ದರಿಂದ ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನ ಇತ್ತು, ಹೋಗಿದ್ದೆ. ಅಲ್ಲಿ 18-20 ಎಕರೆಯಲ್ಲಿ ಕಟ್ಟಿರುವ ಅದ್ಭುತವಾದ ದೇವಸ್ಥಾನ ಇದೆ. ನಮ್ಮ ದೇಶದಲ್ಲೂ ಇಲ್ಲ, ಅಂಥ ದೇವಸ್ಥಾನ. ಬ್ರಹ್ಮ, ವಿಷ್ಣು, ಮಹೇಶ್ವರ ದೇವಸ್ಥಾನ ಅದು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದೇಶ ಪ್ರವಾಸ ಮುಗಿಸಿ ಕುಮಾರಸ್ವಾಮಿ ವಾಪಸ್; ಬರ್ತಿದ್ದಂತೆಯೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

https://newsfirstlive.com/wp-content/uploads/2023/08/HDK-3.jpg

Load More