ಚನ್ನಪಟ್ಟಣ ಟಿಕೆಟ್‌ಗಾಗಿ ಸಾಕಷ್ಟು ಲಾಬಿ ನಡೆಸಿದ್ದ ಯೋಗೇಶ್ವರ್!
ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಭೆ
ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಪಿ ಯೋಗೇಶ್ವರ್‌ಗೆ HDK ಬಿಗ್ ಶಾಕ್!
ಬೆಂಗಳೂರು: ರಣ, ರಣ ಚನ್ನಪಟ್ಟಣ ಉಪಚುನಾವಣೆಗೆ ಇನ್ನೂ ಮುಹೂರ್ತವೇ ನಿಗದಿಯಾಗಿಲ್ಲ. ರಾಜ್ಯ ರಾಜಕೀಯದಲ್ಲಿ ಬೈಎಲೆಕ್ಷನ್ ಕಾವು ಈಗಾಗಲೇ ಜೋರಾಗಿದ್ದು, ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ನಾಯಕರ ಲೆಕ್ಕಾಚಾರಗಳು ಭರ್ಜರಿಯಾಗಿವೆ.
ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಅವರು ಚನ್ನಪಟ್ಟಣ ಟಿಕೆಟ್‌ಗಾಗಿ ಸಾಕಷ್ಟು ಲಾಬಿ ನಡೆಸಿದ್ದರು. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದ ಸಿಪಿವೈ ಕೊನೇ ಹಂತದವರೆಗೂ ಟಿಕೆಟ್‌ಗಾಗಿ ಸರ್ಕಸ್ ಮಾಡಿದ್ದಾರೆ. ಇದೀಗ ನ್ಯೂಸ್ ಫಸ್ಟ್‌ಗೆ ಸಿಕ್ಕ ಮಾಹಿತಿ ಪ್ರಕಾರ ಚನ್ನಪಟ್ಟಣ ಜೆಡಿಎಸ್ ಟಿಕೆಟ್ ರೇಸ್ನಿಂದಲೂ ಯೋಗೇಶ್ವರ್ ಔಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಬಿಸಿ ತುಪ್ಪವಾದ ಚನ್ನಪಟ್ಟಣ ಬೈ ಎಲೆಕ್ಷನ್; ದೋಸ್ತಿಗಳ ನಿದ್ದೆಗೆಡಿಸಿದ ಸೈನಿಕ ಎಸೆದ ಆ ಬಾಣ..!
ಉಪಚುನಾವಣೆಯಲ್ಲಿ ಚನ್ನಪಟ್ಟಣ ಸೀಟ್ ಸಿಗದಿದ್ರೆ 2028ಕ್ಕೆ ರಾಮನಗರದಿಂದ ಸ್ಪರ್ಧೆ ಮಾಡಲು ಸಿ.ಪಿ ಯೋಗೇಶ್ವರ್ ಚಿಂತನೆ ನಡೆಸಿದ್ದರು. ಯೋಗೇಶ್ವರ್ ಅವರ ಈ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಗರಂ ಆಗಿದ್ದಾರೆ. ಚನ್ನಪಟ್ಟಣ, ರಾಮನಗರ ಎರಡು ಕ್ಷೇತ್ರಗಳನ್ನೂ ಬಿಜೆಪಿಗೆ ಬಿಟ್ಟು ಕೊಡಲು ಹೆಚ್‌ಡಿಕೆ ನಕಾರ ವ್ಯಕ್ತಪಡಿಸಿದ್ದು, ಸಿಪಿ ಯೋಗೇಶ್ವರ್ ಅವರ ಹೇಳಿಕೆಯಿಂದ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಸೈನಿಕನಿಗೆ ಹೆಚ್‌ಡಿಕೆ ಬಿಗ್ ಶಾಕ್!
ರಾಮನಗರದ ಬಗ್ಗೆ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಕುಮಾರಸ್ವಾಮಿ ಅವರು ತಮ್ಮ ಆಪ್ತರ ಬಳಿ ಆಕ್ರೋಶ ಹೊರಹಾಕಿದ್ದಾರೆ. ಅಸಮಾಧಾನಗೊಂಡಿರುವ ಹೆಚ್‌ಡಿಕೆ ಯಾವುದೇ ಕಾರಣಕ್ಕೂ CPYಗೆ ಟಿಕೆಟ್ ನೀಡಬಾರದೆಂದು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಚನ್ನಪಟ್ಟಣ ಬೈಎಲೆಕ್ಷನ್ಗೆ ರೆಡಿಯಾದ್ರಾ ನಿಖಿಲ್ ಕುಮಾಸ್ವಾಮಿ..? ‘ಸೈನಿಕ’ ಬಿಗಿ ಪಟ್ಟು, ದಳಪತಿ ದಂಡಯಾತ್ರೆ
ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಕೈತಪ್ಪುವ ಮುನ್ಸೂಚನೆ ಸಿಗುತ್ತಿದ್ದಂತೆ ಸಿ.ಪಿ ಯೋಗೇಶ್ವರ್ ಅವರು ರಾಮನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಇದೇ ಟಿಕೆಟ್ ವಿಚಾರಕ್ಕೆ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆಮೇಲೆ ಜೆಡಿಎಸ್ ಪಕ್ಷದಿಂದಲೂ ಸ್ಪರ್ಧೆಗೆ ರೆಡಿ ಎಂಬ ಸಂದೇಶ ನೀಡಿದರು.
ಇದೇ ವೇಳೆ ಸಿ.ಪಿ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಟಿಕೆಟ್ ಸಿಗದಿದ್ರೆ ರಾಮನಗರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದಿದ್ದರಂತೆ. ಯೋಗೇಶ್ವರ್ ಹೇಳಿಕೆ ಕುರಿತು ಮಾಹಿತಿ ಸಂಗ್ರಹಿಸಿರುವ ಹೆಚ್‌ಡಿಕೆ, ಚನ್ನಪಟ್ಟಣ, ರಾಮನಗರ ಕ್ಷೇತ್ರ ಕೇಸರಿ ಪಡೆಗೆ ಬಿಟ್ಟುಕೊಡದಿರಲು ನಿರ್ಧಾರ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಈ ನಿರ್ಧಾರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಪಿವೈ ರಾಜಕೀಯಕ್ಕೆ ಬಹುದೊಡ್ಡ ನಿರಾಸೆ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ