newsfirstkannada.com

EXCLUSIVE: ಪ್ರಬಲ ಹಿಂದುತ್ವದ ಅಸ್ತ್ರ ಪ್ರಯೋಗಿಸಲು ಮುಂದಾದ ಕುಮಾರಸ್ವಾಮಿ; BJP-JDS ಮಾಸ್ಟರ್ ಪ್ಲಾನ್ ಏನು?

Share :

14-11-2023

    ಲೋಕಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಮಾತ್ರ ಬಾಕಿ

    ಬಿಜೆಪಿ-ಜೆಡಿಎಸ್ ಮೈತ್ರಿ ರಾಜಕಾರಣದಲ್ಲಿ ಹೊಸದೊಂದು ಪ್ರಯೋಗ

    ಕರಾವಳಿ, ಮಲೆನಾಡು ಭಾಗದ ಮತಗಳ ಮೇಲೆ ಕಮಲ-ದಳ ನಾಯಕರ ಕಣ್ಣು

ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಆಯ್ಕೆಯಾದ ಬಳಿಕ ಜೆಡಿಎಸ್‌ ಕೂಡ ಪ್ರಬಲ ರಾಜಕೀಯ ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ರಾಜಕಾರಣದಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಹಿಂದುತ್ವದ ಅಜೆಂಡಾ ಕಡೆಗೆ ಮುಖ ಮಾಡಲಿದ್ದಾರೆ ಎನ್ನಲಾಗಿದೆ. ಮುಂದಿನ ಡಿಸೆಂಬರ್ ತಿಂಗಳಲ್ಲಿ ಹೆಚ್​ಡಿಕೆ ದತ್ತಮಾಲೆ ಧಾರಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ನ್ಯೂಸ್ ಫಸ್ಟ್‌ಗೆ EXCLUSIVE ಮಾಹಿತಿ ಲಭ್ಯವಾಗಿದೆ.

ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಶಕೆ ಆರಂಭಿಸುತ್ತಿದ್ದಾರೆ. ಈ ಕುಮಾರವಿಜಯ ಪರ್ವದ ಭಾಗವಾಗಿ ದಳಪತಿ ಪ್ರಬಲ ಹಿಂದುತ್ವ ಅಜೆಂಡಾ ಕಡೆ ಮುಖ ಮಾಡಿದ್ದಾರೆ.

ದತ್ತಾತ್ರೇಯ ಗುರುಗಳಿಂದ ದತ್ತಮಾಲೆ ಸ್ವೀಕಾರ!

ಈಗಾಗಲೇ ಹಿಂದುತ್ವದ ಕಡೆ ವಾಲಿರುವ ಜಾತ್ಯಾತೀತ ಜನತಾ ದಳ ಮತ್ತಷ್ಟು ಪ್ರಬಲ ಹಿಂದುತ್ವದ ಅಜೆಂಡಾ ಕಡೆ ಮುಖ ಮಾಡಲು ಮುಂದಾಗಿದೆ. ಮುಂದಿನ ಡಿಸೆಂಬರ್​​ನಲ್ಲಿ ಕುಮಾರಸ್ವಾಮಿ ಅವರು ಬಾಬಬುಡನ್ ಗಿರಿಯ ದತ್ತಾತ್ರೇಯ ಗುರುಗಳಿಂದ ದತ್ತಮಾಲೆ ಸ್ವೀಕರಿಸುವ ಸಾಧ್ಯತೆ ಇದೆ. ಚಿಕ್ಕಮಗಳೂರು ಜೆಡಿಎಸ್ ಮುಖಂಡರ ಜೊತೆ ಈ ಕುರಿತು ಮಾಜಿ ಸಿಎಂ ಮಾತುಕತೆ ನಡೆಸಿದ್ದಾರೆ. ಅವಶ್ಯಕತೆ ಬಿದ್ದರೆ ದತ್ತಮಾಲೆ ಧಾರಣೆ ಮಾಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಬಾಬಬುಡನ್ ಗಿರಿಯ ದತ್ತಾತ್ರೇಯ ಪೀಠದಲ್ಲಿ ಕುಮಾರಸ್ವಾಮಿ ಅವರ ದತ್ತಮಾಲೆ ಧಾರಣೆಗೆ ಚಿಕ್ಕಮಗಳೂರು ಜೆಡಿಎಸ್ ಘಟಕ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದೆ.

ಏನಿದು ಕುಮಾರಪರ್ವ ಪ್ಲಾನ್?

ದತ್ತಮಾಲೆ ಧಾರಣೆ ಮೂಲಕ ಹಿಂದುತ್ವದ ‌ಕಡೆ ವಾಲಿರುವ ಜೆಡಿಎಸ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಕಡ ಬೆಂಬಲಿಸುವ ಸಾಧ್ಯತೆ ಇದೆ. ಕುಮಾರಸ್ವಾಮಿ ಅವರು ದತ್ತಮಾಲೆ ಧಾರಣೆ ಮಾಡಿದ್ರೆ ವಿಜಯೇಂದ್ರ ಅವರು ಸಹ ಮಾಲೆ ಹಾಕುವ ಸಾಧ್ಯತೆ ಇದೆ. ಕರಾವಳಿ, ಮಲೆನಾಡು ಭಾಗದ ಮತಗಳ ಮೇಲೆ ಕಮಲ-ದಳ ಕಣ್ಣಿಟ್ಟಿದ್ದು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ತಂತ್ರಗಾರಿಕೆ ಮಾಡಿದೆ. ಒಕ್ಕಲಿಗ + ಲಿಂಗಾಯತ ಅಸ್ತ್ರದ ಮೂಲಕ ಕಾಂಗ್ರೆಸ್​ಗೆ ಟಕ್ಕರ್ ನೀಡಲು ಕುಮಾರವಿಜಯ ಎಂಟ್ರಿಗೆ ಸಿದ್ಧತೆ ನಡೆದಿರೋ ಮಾಹಿತಿ ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXCLUSIVE: ಪ್ರಬಲ ಹಿಂದುತ್ವದ ಅಸ್ತ್ರ ಪ್ರಯೋಗಿಸಲು ಮುಂದಾದ ಕುಮಾರಸ್ವಾಮಿ; BJP-JDS ಮಾಸ್ಟರ್ ಪ್ಲಾನ್ ಏನು?

https://newsfirstlive.com/wp-content/uploads/2023/11/Byvijayendra-1.jpg

Load More