newsfirstkannada.com

ಮತ್ತೆ ಜೆಡಿಎಸ್ ಪಕ್ಷ ಪುಟಿದೇಳಲು ವಕ್ತಾರರಿಗೆ ಟಾಸ್ಕ್: HD ಕುಮಾರಸ್ವಾಮಿ ಕೊಟ್ಟ ಸೂಚನೆ​ ಏನು..?

Share :

30-06-2023

    ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ವಕ್ತಾರರ ಸಭೆ

    ತಳಹದಿಯಿಂದ ಪಕ್ಷ ಸಂಘಟಿಸಲು ಹೆಚ್​ಡಿಕೆ ಸೂಚನೆ

    ಜೆಡಿಎಸ್ ವಕ್ತಾರರಿಗೆ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದೇನು..?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ರಾಜ್ಯ ಮಟ್ಟದ ವಕ್ತಾರರ ಸಭೆ ಸೇರಲಾಯಿತು. ಜೆಡಿಎಸ್ ಪಕ್ಷ ಮತ್ತೆ ತಳಹದಿಯಿಂದ ಸಂಘಟಿಸಲು ಸರ್ವ ಸನ್ನದ್ಧರಾಗಲು ಕುಮಾರಸ್ವಾಮಿ ರಾಜ್ಯದ ಎಲ್ಲಾ ಜೆಡಿಎಸ್ ವಕ್ತಾರರಿಗೆ ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ರಾಜ್ಯಮಟ್ಟದ ವಕ್ತಾರರ ಸಭೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ ಡಿ ದೇವೇಗೌಡ ರಾಜ್ಯಕ್ಕೆ ಕೊಟ್ಟ ಕೊಡುಗೆ, ಸೇವೆಗಳ ಬಗ್ಗೆ ಮತ್ತಷ್ಟು ಜನರಿಗೆ ತಲುಪಿಸಬೇಕು. ಜೊತೆಗೆ ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನ ಹಾಗೂ ಇನ್ನಿತರ ಎಲ್ಲಾ ವಿಚಾರಗಳು ಪ್ರಚಾರ ಮಾಡಿ. ಹಾಗೂ ಜೆಡಿಎಸ್ ಪಕ್ಷದ ಮುಂದಿನ ನಿಲುವುಗಳು ಸ್ಪಷ್ಟತೆಯಿಂದ ಜನರ ಮನಸ್ಸಿಗೆ ತಲುಪಿಸಿ ಎಂದು ಸಭೆಯಲ್ಲಿ ಸೂಚನೆ ಕೊಟ್ಟಿದ್ದಾರೆ. ಇಂದು ನಡೆದ ಸಭೆಯಲ್ಲಿ ಜೆಡಿಎಸ್ ಎಂಎಲ್​ಸಿ ಟಿ.ಎ ಶರವಣ, ಮಾಜಿ ಎಂಎಲ್​ಸಿ ಶ್ರೀಕಂಠೇಗೌಡ, ವಕ್ತಾರರಾದ ಚರಣ್​​ಗೌಡ, ನಸ್ಮಾ, ದೇವರಾಜು, ಅಶ್ವಿನ್​​​ ಕುಮಾರ್, ಶ್ವೇತಯಾದವ್ ಸೇರಿದಂತೆ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಜೆಡಿಎಸ್ ಪಕ್ಷ ಪುಟಿದೇಳಲು ವಕ್ತಾರರಿಗೆ ಟಾಸ್ಕ್: HD ಕುಮಾರಸ್ವಾಮಿ ಕೊಟ್ಟ ಸೂಚನೆ​ ಏನು..?

https://newsfirstlive.com/wp-content/uploads/2023/06/hd.jpg

Load More