newsfirstkannada.com

ಪ್ರಜ್ವಲ್ ರೇವಣ್ಣ ಅನರ್ಹ; ಈ ಬಗ್ಗೆ ಮಾಜಿ ಸಚಿವ HD ರೇವಣ್ಣ ಏನಂದ್ರು ಗೊತ್ತಾ..?

Share :

Published September 1, 2023 at 4:27pm

    ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ

    ಪ್ರಜ್ವಲ್​​ ಅನರ್ಹಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

    ಹೈಕೋರ್ಟ್​ ತೀರ್ಪಿಗೆ ತಲೆ ಬಾಗುತ್ತೇವೆ ಎಂದ ರೇವಣ್ಣ..!

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಮಾತಾಡಿದ ಮಾಜಿ ಸಚಿವ ಹೆಚ್​​.ಡಿ ರೇವಣ್ಣ, ಯಾರೇ ಆಗಲಿ ಕಾನೂನಿಗೆ ತಲೆ ಬಾಗಲೇಬೇಕು. ನಾವು ಹೈಕೋರ್ಟ್​ ತೀರ್ಪಿಗೆ ತಲೆ ಬಾಗುತ್ತೇವೆ ಎಂದರು.

ನನಗೆ ಇನ್ನೂ ತೀರ್ಪಿನ ಪ್ರತಿ ಸಿಕ್ಕಿಲ್ಲ. ಹೈಕೋರ್ಟ್​ ತೀರ್ಪಿಗೆ ಯಾವುದೇ ವಿರೋಧ ಇಲ್ಲ. ಕಾನೂನಿಗೆ ಗೌರವ ನೀಡುವುದು ನಮ್ಮ ಕೆಲಸ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸರಿಯಾದ ಮಾಹಿತಿ ಕಲೆ ಹಾಕಿ ಮಾತಾಡುತ್ತೇನೆ ಎಂದರು.

ಇನ್ನು, ಜೆಡಿಎಸ್​ ಶಾಸಕ ಎ. ಮಂಜು ಏನು ಹೇಳಿದ್ದಾರೋ ಗೊತ್ತಿಲ್ಲ. ಯಾರು ಯಾವ ವಿಚಾರಕ್ಕೆ ಏನು ಮಾಡಿದ್ರೋ ಎಂದು ಗೊತ್ತಿಲ್ಲ. ಪ್ರಜ್ವಲ್​​ ರೇವಣ್ಣ ವಕೀಲರು ಇದ್ದಾರೆ. ಅವರೇ ಹೈಕೋರ್ಟ್​​​ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದರು.

ಏನಿದು ಆರೋಪ..?

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದ್ದರು. ಈ ವೇಳೆ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಮಾಡಿರೋ ಆರೋಪ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿ ಬಂದಿತ್ತು. ಆದಾಯ ತೆರಿಗೆ ವಿವರಗಳ ಸಂಬಂಧ ನಕಲಿ ದಾಖಲೆ ಸಲ್ಲಿಸಿರೋ ಗಂಭೀರ ಆರೋಪ ಮಾಡಿದ್ದರು.

ಹೈಕೋರ್ಟ್​​ ಕೊಟ್ಟ ತೀರ್ಪೇನು?

ಇನ್ನು, ಪ್ರಜ್ವಲ್‌ ಆಯ್ಕೆಯನ್ನು ಅಸಿಂಧು ಮಾಡಿ ಎಂದು ಹೈಕೋರ್ಟ್​​ನಲ್ಲಿ ಎ. ಮಂಜು ಮತ್ತು ದೇವರಾಜೇಗೌಡ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಮುಂದಿನ 6 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದಂತೆ ಆದೇಶ ಹೊರಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣ ಅನರ್ಹ; ಈ ಬಗ್ಗೆ ಮಾಜಿ ಸಚಿವ HD ರೇವಣ್ಣ ಏನಂದ್ರು ಗೊತ್ತಾ..?

https://newsfirstlive.com/wp-content/uploads/2023/09/HD-Revanna.jpg

Load More