newsfirstkannada.com

ಬಿಜೆಪಿ, ಜೆಡಿಎಸ್​​​​ ಸೀಟ್​ ಶೇರಿಂಗ್​ ಎಷ್ಟು..? ಮೋದಿಗೆ ದೇವೇಗೌಡ್ರು ಕೊಟ್ಟ ಸಲಹೆಯೇನು..?

Share :

19-09-2023

    ಸೀಟು ಹಂಚಿಕೆ ವೇಳೆ ದೋಸ್ತಿಗಳ ಸೈಲೆಂಟ್‌ ಮೋಡ್!

    ಮೈತ್ರಿ ಮಂಥನಕ್ಕೆ ಮರು ಚಾಲನೆ ಕೊಟ್ಟ ದೇವೇಗೌಡ್ರು

    ಪ್ರಧಾನಿ ಮೋದಿಗೆ ಹೆಚ್.ಡಿ. ದೇವೇಗೌಡರಿಂದ ಸಲಹೆ

ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಷ್ಟೇ ಬಾಕಿ. ರಾಜ್ಯದಲ್ಲಿ ಮೈತ್ರಿಯುಗ ಆರಂಭಕ್ಕೆ ಕಮಲ-ದಳ ಮುನ್ನುಡಿ ಬರೆಯುತ್ತಿವೆ. ಆದ್ರೆ, ಸೀಟು ಹಂಚಿಕೆಯೆ ಕಗ್ಗಂಟಾಗಿದೆ. ಈ ಕಗ್ಗಂಟು ಬಿಡಿಸಲು ಸ್ವತಃ ಗೌಡರೇ ಅಖಾಡಕ್ಕಿಳಿದು ಮೋದಿಗೆ ಸಲಹೆ ಕೊಟ್ಟಿದ್ದು, ಮೋದಿ ಸಹ ಸಲಹೆ ಸ್ವೀಕರಿಸಿದ್ದಾರೆ. ಹಾಗಾದ್ರೆ ಏನದು ಗೌಡರ ಸಲಹೆ? ಅಷ್ಟಕ್ಕೂ ಬೆಳ್​ ಬೆಳಗ್ಗೆ ಕುಮಾರಸ್ವಾಮಿ ನಿವಾಸಕ್ಕೆ ಸಾಹುಕಾರ್​​​ ಆಗಮಿಸಿದ್ದೇಕೆ? ರಾಜ್ಯ ರಾಜಕಾರಣದ ಈ ಇಂಟ್ರಸ್ಟಿಂಗ್​ ಇನ್​ಸೈಡ್​ ಏನು? ಸ್ಟೋರಿ ಓದಿ!

ಡೆಲ್ಲಿಯಲ್ಲಿ ನಡೆದ ಗೌಡರನ್ನ ಸಂಪರ್ಕಿಸಿದ್ದ ಬಿಜೆಪಿ ಎಲೆಕ್ಷನ್​​ ಮಾಸ್ಟರ್​​ ಮೈಂಡ್​​​ ಅಮಿತ್​​​ ಶಾ ರಾಜ್ಯ ರಾಜಕಾರಣದಲ್ಲಿ ಮೈತ್ರಿ ಕ್ರಾಂತಿಗೆ ಮುನ್ನುಡಿ ಬರೆದಿದ್ರು. ಆದ್ರೆ, ಸೀಟು ಹಂಚಿಕೆ ವಿಚಾರವಾಗಿ ದೋಸ್ತಿ ಮೀಟಿಂಗ್​​​ ಸೈಲೆಂಟ್​ಗೆ ಜಾರಿದೆ. ಮೂರು ಮತ್ತೊಂದು ಸೀಟ್​​ಗೆ ಕಮಲ ಆಫರ್​​ ಕೊಟ್ಟಿದೆ. ದಳ ಮಾತ್ರ 5 ರಿಂದ 6 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿ ಧಾರಾಳತೆ ಬದಲಿಗೆ ಒತ್ತಡ ತಂತ್ರದ ಮೊರೆ ಹೋಗಿದೆ. ಈ ಮಧ್ಯೆ ಮಾಜಿ ಪ್ರಧಾನಿ ಗೌಡ್ರು, ನೇರವಾಗಿ ಮೋದಿಗೆ ಸಲಹೆಯೊಂದನ್ನ ನೀಡಿದ್ದಾರೆ.

ಸೀಟ್​ ಶೇರಿಂಗ್​ ಕಗ್ಗಂಟು, ಸದ್ಯಕ್ಕೆ ದೋಸ್ತಿ ಸೈಲೆಂಟು!
ಮೈತ್ರಿ ಮಂಥನಕ್ಕೆ ಮರು ಚಾಲನೆ ಕೊಟ್ಟ ದೇವೇಗೌಡ್ರು!

ಡೆಲ್ಲಿ ಡೈರಿಯಲ್ಲಿನ ಈ ಮೈತ್ರಿ ಮೀಟಿಂಗ್​​​ ಬಗ್ಗೆ ಮೊದಲ ಬಾರಿ ವರದಿ ಮಾಡಿದ್ದ ನ್ಯೂಸ್​​ಫಸ್ಟ್​, ಪೊಲಿಟಿಕಲ್​ ಕವರೇಜ್​ನ ನಂಬರ್​​ ಒನ್​​ ​ಅಂತ ನಿರೂಪಿಸಿದೆ. ಈಗ ದೋಸ್ತಿಯ ಫಾಲೋವಪ್​​ ಮಾಡ್ತಿರುವ ನ್ಯೂಸ್​ಫಸ್ಟ್​​, ಮತ್ತೊಂದು ಎಕ್ಸ್​ಕ್ಲೂಸಿವ್​ ಸುದ್ದಿ ಸಿಕ್ಕಿದೆ. ಮೊನ್ನೆಯಷ್ಟೇ ಡೆಲ್ಲಿಗೆ ತೆರಳಿರುವ ಗೌಡ್ರು, ಲೋಕ ಮೈತ್ರಿಗೆ ಹೊಸ ದಾಳ ಉರುಳಿಸಿದ್ದಾರೆ. ದೇವೇಗೌಡರಿಂದ ಸಲಹೆ ಸ್ವೀಕರಿಸಿದ ಪ್ರಧಾನಿ ಮೋದಿ, ಪಕ್ಷದ ನಾಯಕರಿಗೆ ರವಾನಿಸಿದ್ದಾರೆ.

ಪ್ರಧಾನಿ ಮೋದಿಗೆ ಗೌಡರು ಕೊಟ್ಟ ಸಲಹೆ ಏನು?

ಲೋಕಸಭೆ ಅಖಾಡಕ್ಕೆ ಕಮಲ-ದಳ ನಡುವೆ ಮೈತ್ರಿ ಆಗೋದು ಪಕ್ಕಾ.. ಆದ್ರೆ, ಸೀಟ್​​ ಹಂಚಿಕೆ ಮಾತ್ರ ಕಗ್ಗಂಟಾಗಿದೆ.. ಈ ಕಗ್ಗಂಟು ಬಿಡಿಸಲು ದಳಪತಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.. ಸೀಟು ಹಂಚಿಕೆಗೂ ಮುನ್ನವೇ ಸರ್ವೇ ನಡೆಸಲು ದೇವೇಗೌಡರ ಸಲಹೆ ನೀಡಿದ್ದಾರೆ..

ಮೈತ್ರಿ ಮಂತ್ರ.. ಸರ್ವೇ ಸೂತ್ರ

ಪ್ರಧಾನಿ ಮೋದಿಗೆ ಸಲಹೆ ನೀಡಿರೋ ಹೆಚ್​.ಡಿ ದೇವೇಗೌಡರು, ಜೆಡಿಎಸ್ ಗೆಲ್ಲುವ ಕ್ಷೇತ್ರಗಳಲ್ಲಿ ನಾನು ಸಮೀಕ್ಷೆ ಮಾಡಿಸುತ್ತೇನೆ. ಬಿಜೆಪಿ ಗೆಲ್ಲುವ ಕ್ಷೇತ್ರಗಳಲ್ಲಿ ನೀವು ಸರ್ವೇ ಮಾಡಿಸಿ ಅಂತ ಸಲಹೆ‌ ನೀಡಿದ್ದಾರೆ. ಈ ಸರ್ವೇ ಬಳಿಕ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಮಾಡೋಣ ಅಂತ ಗೌಡರು ಸಜೆಸ್ಟ್​​ ಮಾಡಿದ್ದಾರೆ. ಈ ಮಾತಿಗೆ ಒಪ್ಪಿಗೆ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ನಾಯಕರಿಗೆ ಸರ್ವೇ ಮಾಡಿಸಲು ಆರ್ಡರ್​​​ ಮಾಡಿದ್ದಾರೆ. ಇಬ್ಬರೂ ನಾಯಕರ ಸಲಹೆಯಂತೆ ಸರ್ವೇ ವರದಿ ಪಡೆಯಲು ಬಿಜೆಪಿ ಪ್ಲಾನ್ ಮಾಡಿದೆ ಎಂದು ಗೊತ್ತಾಗಿದೆ.

ಕುಮಾರಸ್ವಾಮಿ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ!

ಇತ್ತ, ಬೆಳ್ಳಂ ಬೆಳಗ್ಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಿಎಂ ಹೆಚ್​​ಡಿಕೆ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ ಸಾಹುಕಾರ್​​​, ಗಣೇಶ ಹಬ್ಬದ ಶುಭಾಶಯ ವಿನಿಮಯ ಮಾಡ್ಕೊಂಡಿದ್ದಾರೆ. ಅಲ್ದೇ ಮೈತ್ರಿ ರಾಜಕಾರಣ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.

ಕಮಲ – ದಳ ಮೈತ್ರಿ ಬಗ್ಗೆ ಜಾರಕಿಹೊಳಿ ಅಚ್ಚರಿ ಮಾತು!

ಈ ಭೇಟಿ ಬಳಿಕ ರಮೇಶ್ ಜಾರಕಿಹೊಳಿ ಮೈತ್ರಿ ಕುರಿತು ಅಚ್ಚರಿ ಹೇಳಿಕೆ ನೀಡಿದ್ರು. ಲೋಕಸಭೆ ಚುನಾವಣೆಯಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ನನ್ನ ಪ್ರಕಾರ ಕಮಲ-ದಳ ಮೈತ್ರಿಯಾದ್ರೆ ಒಳ್ಳೆಯದು ಅಂತ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಆಪರೇಷನ್​ ಬಗ್ಗೆ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಾರೆ, ಲೋಕಸಭೆ ಎಲೆಕ್ಷನ್​​​ಗೆ 7 ತಿಂಗಳು ಬಾಕಿ ಇದ್ದು, ಚುನಾವಣೆ ಪೂರ್ವ ಮೈತ್ರಿಗೆ ಬಿಜೆಪಿ-ಜೆಡಿಎಸ್​​ ಅಂಕಿತ ಹಾಕುವ ಸಾಧ್ಯತೆ ಇದೆ. ಈಗಾಗಲೇ ಗೌಡರು ಸರ್ವೇಗೆ ಸಲಹೆ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಸೀಟ್​ ಶೇರಿಂಗ್​​ ಅನುಪಾತ ಹೇಗಿರಲಿದೆ ಅನ್ನೋದಷ್ಟೇ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ, ಜೆಡಿಎಸ್​​​​ ಸೀಟ್​ ಶೇರಿಂಗ್​ ಎಷ್ಟು..? ಮೋದಿಗೆ ದೇವೇಗೌಡ್ರು ಕೊಟ್ಟ ಸಲಹೆಯೇನು..?

https://newsfirstlive.com/wp-content/uploads/2023/09/MODI_HDD.jpg

Load More