ರಾಜಕೀಯ ಮೇಲಾಟಕ್ಕೆ ಕಾರಣವಾದ ‘ಆತ್ಮಹತ್ಯೆ’
ಸದನದಲ್ಲಿ ಸದ್ದು ಮಾಡಿದ ನೌಕರನ ಆತ್ಮಹತ್ಯೆ ಯತ್ನ
ಸಚಿವ ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ
ಬೆಂಗಳೂರು: ವರ್ಗಾವಣೆ ಮಾಡಿದ್ರು ಎಂದು ಮಂಡ್ಯದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆಗೆ ಯತ್ನಿಸಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರವನ್ನಿಟ್ಟುಕೊಂಡು ವಿಪಕ್ಷಗಳು ಅದರಲ್ಲೂ ಮಾಜಿ ಸಿಎಂ ಹೆಚ್ಡಿಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತ ಚಾಲಕನ ಪತ್ನಿ ಬೇರೆಯದೇ ಮಾತನ್ನ ಹೇಳಿದ್ದಾರೆ.
ವರ್ಗಾವಣೆ ಮಾಡಿದ್ದಕ್ಕೆ ಬಸ್ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಗದ್ದಲವೆಬ್ಬಿಸಿದೆ. ವರ್ಗಾವಣೆ ದಂಧೆ ಎಂಬ ಬಾಂಬ್ ಸಿಡಿಸಿರುವ ಹೆಚ್ಡಿಕೆ ಆರೋಪದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಮಹತ್ವ ಪಡೆದಿದೆ. ಇದೇ ಆತ್ಮಹತ್ಯೆ ಯತ್ನ ಇದೀಗ ರಾಜಕೀಯ ಕಚ್ಚಾಟಕ್ಕೆ ಎಡೆಮಾಡಿಕೊಟ್ಟಿದೆ. ರಾಜಕೀಯ ದ್ವೇಷವೆಂಬ ಮಾತು ರಂಗಪ್ರವೇಶ ಮಾಡಿದೆ. ವಿಷ ಕುಡಿದ ಜಗದೀಶ್ ಪತ್ನಿ ಪಾವನ ಸಚಿವರ ಕಿರುಕುಳದಿಂದ ಹೀಗಾಗಿದೆ ಎಂದಿದ್ದಾರೆ.
ನಾವು ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತಿರುವುದರಿಂದ ಕಿರುಕುಳ
ನಾನು, ನನ್ನ ಮಾವ ಜೆಡಿಎಸ್ ಪಕ್ಷಕ್ಕೆ ದುಡಿಯುತ್ತಿದ್ದೇವೆ. ಹೀಗಾಗಿ ಚಲುವರಾಯಸ್ವಾಮಿ ಕಿರುಕುಳ ನೀಡಿರಬಹುದು ಅಂತ ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಜಗದೀಶ್ ಪತ್ನಿ ಪಾವನ ಆರೋಪಿಸಿದ್ದಾರೆ. ಚಲುವರಾಯಸ್ವಾಮಿ ವರ್ಗಾವಣೆ ಮಾಡಿಸಿದ್ದರಿಂದ ನನ್ನ ಪತಿ ಆತ್ಮಹತ್ಯೆಗೆ ಯತ್ನಿಸಿರಬಹುದು ಅಂತ ಹೇಳಿದ್ದಾರೆ.
ಅನಾವಶ್ಯಕ ರಾಜಕೀಯ.. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲವೆಂದ ಸಚಿವ
ಜಗದೀಶ್ ಆತ್ಮಹತ್ಯೆ ವಿಚಾರಕ್ಕೆ ಅನಾವಶ್ಯಕ ರಾಜಕೀಯ ಮಾಡಲಾಗ್ತಿದೆ ಅಂತ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ನಾನು ಚಾಲಕನ ವರ್ಗಾವಣೆಗೆ ಲೆಟರ್ನ ಕೊಟ್ಟಿಲ್ಲ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಇನ್ನು ಆತ್ಮಹತ್ಯೆ ಯತ್ನದ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇದರಲ್ಲಿ ರಾಜಕೀಯ ಇರಬಹುದು. ವಿಚಾರಿಸುತ್ತೇನೆ ಅಂತ ಹೇಳಿದ್ದಾರೆ.
ಇನ್ನು ಸದನದಲ್ಲೂ ಬಸ್ ಚಾಲಕನ ಆತ್ಮಹತ್ಯೆ ಯತ್ನ ಸಂಬಂಧ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಆತ್ಮಹತ್ಯೆ ಯತ್ನದ ಬಗ್ಗೆ ಯಾವುದೇ ಎಫ್ಐಆರ್ ಆಗಿಲ್ಲ. ಪ್ರಕರಣ ಮುಚ್ಚಿ ಹಾಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಸದನದಲ್ಲೂ ಆತ್ಮಹತ್ಯೆ ಯತ್ನ ಕೇಸ್ ಚರ್ಚಿಸಿದ ಹೆಚ್ಡಿಕೆ
ಅಧಿವೇಶನದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ. ಈ ವೇಳೆ ಚಾಲಕ ಜಗದೀಶ್ ಡಿಪೋ ಮ್ಯಾನೇಜರ್ಗೆ ಬರೆದಿರುವ ಪತ್ರವನ್ನ ಹೆಚ್ಡಿಕೆ ಸದನದಲ್ಲಿ ಓದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಾರೆ ವರ್ಗಾವಣೆ ದಂಧೆ ಎಂಬ ಬಾಂಬ್ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಆದ್ರೆ ರಾಜಕೀಯ ಮೇಲಾಟದಲ್ಲಿ ಕೆಎಸ್ಆರ್ಟಿಸಿ ಚಾಲಕ ತಪ್ಪು ಹಾದಿ ತುಳಿಯಬಾರದಾಗಿತ್ತು. ಸದ್ಯ ಅವರು ಐಸಿಯುನಲ್ಲಿದ್ದು ಪ್ರಜ್ಞೆ ಬಂದ ಬಳಿಕ ಏನು ಹೇಳ್ತಾರೆ ಅಂತ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ