newsfirstkannada.com

ಸಿದ್ದು ಸರ್ಕಾರದ ಬುಡಕ್ಕೆ ಬೆಂಕಿ ಇಟ್ಟ HDK; ಸದನದಲ್ಲೂ ಸದ್ದು ಮಾಡುತ್ತಾ ವರ್ಗಾವಣೆ ಬಾಂಬ್?

Share :

03-07-2023

    ಸಿದ್ದು ಸರ್ಕಾರದ ವಿರುದ್ಧ ಸಿಡಿದ ಮಾಜಿ ಸಿಎಂ ಹೆಚ್​ಡಿಕೆ

    ಅಧಿವೇಶನಕ್ಕೂ ಮುನ್ನ ಹೆಚ್​ಡಿಕೆ ‘ವರ್ಗಾವಣೆ’ ಬಾಂಬ್

    ಯತೀಂದ್ರ ಹೆಸರೇಳದೇ ಹೆಚ್​​ಡಿಕೆ ಪರೋಕ್ಷ ಆರೋಪ!

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 3 ದಿನಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ಬಾಂಬ್ ಸಿಡಿಸಿದ್ದರು. ಈಗ ಮತ್ತೆ ಸಾಲು ಸಾಲು ಆರೋಪಗಳ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ಏಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನವೇ ಆರೋಪಗಳ ಸಿಡಿಗುಂಡು ಹಾರಿಸಿರೋದು ಮಹತ್ವ ಪಡೆದುಕೊಂಡಿದೆ.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಗಿದೆ. ಇಂದಿನಿಂದ ಬಜೆಟ್​ ಅಧಿವೇಶನ ಕೂಡ ಆರಂಭ ಆಗಲಿದೆ. ಈ ವೇಳೆ ಸರ್ಕಾರಕ್ಕೆ ವರ್ಗಾವಣೆಯ ಮಸಿ ಮೆತ್ತಿಕೊಂಡಿದೆ. ಮಾಜಿ ಸಿಎಂ ಹೆಚ್​​ಡಿಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.

ಸರ್ಕಾರದ ವಿರುದ್ಧ ‘ದಳಪತಿ’ ಸಾಲು ಸಾಲು ಆರೋಪ!

ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ದಿನಕ್ಕೊಂದು ಆದೇಶ ಹೊರ ಬೀಳುತ್ತಿದ್ದ, ವಿಪಕ್ಷಗಳ ಕಣ್ಣು ಕೆಂಪಗಾಗಿಸಿದೆ. ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್​​ಡಿಕೆ ಸಾಲು ಸಾಲು ಆರೋಪ ಮಾಡಿದ್ದಾರೆ.

ಮೊನ್ನೆ ಸಿಎಂ ಪುತ್ರ ಡಾ.ಯತೀಂದ್ರ ವಿರುದ್ಧ ಮಾಜಿ ಸಿಎಂ ಹೆಚ್​​ಡಿಕೆ ವರ್ಗಾವಣೆ ದಂಧೆಯ ಬಾಣ ಬಿಟ್ಟಿದ್ದರು. ಈಗ ಮುಂದುವರಿದು ಮತ್ತೊಂದಷ್ಟು ಆರೋಪಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಜಿಎಸ್​ಟಿ ರೀತಿ ವೈಎಸ್​ಟಿ ಜಾರಿಯಾಗಿದೆ. ಈ ಸರ್ಕಾರದಲ್ಲಿ ಎಷ್ಟು ಮಂದಿ ಸಿಎಂಗಳಿದ್ದಾರೆ ಅಂತ ನೇರಾನೇರ ಪ್ರಶ್ನೆ ಹಾಕಿದ್ದಾರೆ.

ಹೆಚ್​ಡಿಕೆ ಚಾರ್ಜ್​ಶೀಟ್ ಹೀಗಿದೆ!

  • ರಾಜ್ಯದಲ್ಲಿ ವೈಎಸ್​ಟಿ ತೆರಿಗೆ ಜಾರಿ ಮಾಡಿದ್ದಾರಂತೆ
  • ರಾತ್ರಿ ಅಧಿಕಾರಿಗಳ ಜೊತೆ ಸಭೆ ನಡೆಸೋದು ಯಾಕೆ?
  • ರಾತ್ರಿ 1 ಗಂಟೆವರೆಗೆ ಮನೆಯಲ್ಲಿ ಅಧಿಕಾರಿಗಳ ಸಭೆ ಏಕೆ?
  • ಈಗಿನ ಸರ್ಕಾರದಲ್ಲಿ ಹಲವಾರು ಸಿಎಂಗಳು ಇದ್ದಾರೆ
  • ಪಾರದರ್ಶಕ ಸರ್ಕಾರ ಅಲ್ಲ, ಅನ್ನೋದು ಜಗಜ್ಜಾಹೀರು
  • ಟ್ರಾನ್ಸ್​ಫರ್ ಮಾಡದೇ ವಸೂಲಿಗಳು ಶುರುವಾಗಿದೆ
  • ಟ್ರಾನ್ಸ್​​​ಫರ್ ಶುರುವಾದ್ರೆ ಇನ್ನೆಷ್ಟು ವಸೂಲಿಯಾಗುತ್ತೋ?

ಇನ್ನು ಇವತ್ತು ಜೆಡಿಎಸ್​​ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಗ್ಯಾರಂಟಿಗಳ ಜಾರಿಯಲ್ಲಿ ಆಗ್ತಿರುವ ಗೊಂದಲಗಳ ಬಗ್ಗೆಯೂ ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ಆರಂಭ ಆಗಲಿದ್ದು ಸರ್ಕಾರದ ಮುಗಿಬೀಳಲು ವಿಪಕ್ಷಗಳೂ ಸಜ್ಜಾಗಿವೆ. ಹೆಚ್​ಡಿಕೆ ಸಿಡಿಸಿರುವ ವರ್ಗಾವಣೆ ಬಾಂಬ್ ಬಗ್ಗೆ ಸದನದಲ್ಲಿ ಗಲಾಟೆ, ಗದ್ದಲಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕುಮಾರಸ್ವಾಮಿ ಆರೋಪಗಳಿಗೆ ಆಡಳಿತ ಪಕ್ಷದ ನಾಯಕರು ಯಾವ ರೀತಿ ತಿರುಗೇಟು ನೀಡಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದು ಸರ್ಕಾರದ ಬುಡಕ್ಕೆ ಬೆಂಕಿ ಇಟ್ಟ HDK; ಸದನದಲ್ಲೂ ಸದ್ದು ಮಾಡುತ್ತಾ ವರ್ಗಾವಣೆ ಬಾಂಬ್?

https://newsfirstlive.com/wp-content/uploads/2023/07/HDK_2.jpg

Load More