newsfirstkannada.com

ಮಂಡ್ಯ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು; ರಾಜ್ಯ ಸರ್ಕಾರದ ಮೇಲೆ ಸಿಡಿದೆದ್ದ HDK; ಹೇಳಿದ್ದೇನು?

Share :

Published July 5, 2024 at 1:24pm

  ಅಧಿಕಾರಿಗಳಿಲ್ಲದೇ ನಡೆದ ಹೆಚ್‌.ಡಿ ಕುಮಾರಸ್ವಾಮಿ ಜನತಾ ದರ್ಶನ

  ಸಚಿವ ಸಂಪುಟ ಸಭೆಯಲ್ಲಿ ಜನತಾ ದರ್ಶನದ ಬಗ್ಗೆ ಮಹತ್ವದ ಚರ್ಚೆ?

  ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸಚಿವರಿಂದ ಹಿಗ್ಗಾಮುಗ್ಗ ತರಾಟೆ

ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರ ಮೊದಲ ಜನತಾ ದರ್ಶನ ರಾಜಕೀಯದ ಜಿದ್ದಾಜಿದ್ದಿಯ ಯುದ್ಧಕ್ಕೆ ಕಾರಣವಾಗಿದೆ. ಹೆಚ್‌ಡಿಕೆ ಜನತಾ ದರ್ಶನಕ್ಕೆ ಡಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಗೈರಾಗಿದ್ದಾರೆ. ಜನತಾ ದರ್ಶನ ವಿಚಾರದಲ್ಲಿ ದ್ವೇಷದ ರಾಜಕಾರಣ ನಡೀತಿದ್ಯಾ ಎಂದು ಕುಮಾರಸ್ವಾಮಿ ಅವರು ಗರಂ ಆಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ವಿರುದ್ಧ ಗಂಭೀರ ಆರೋಪ; ಸರ್ಕಾರ ತನ್ನ ವಿರುದ್ಧದ ಆರೋಪ ಮರೆಮಾಚಲು ದರ್ಶನ್​ ಕೇಸ್​ಗೆ ಒತ್ತು ನೀಡುತ್ತಿದೆಯಾ? 

ಅಧಿಕಾರಿಗಳಿಗೆ ಮೌಖಿಕ ಆದೇಶ?
ಹೆಚ್​.ಡಿ ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ಎಲ್ಲಾ ಅಧಿಕಾರಿಗಳು ಗೈರಾಗಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಮೌಖಿಕ ಆದೇಶ ನೀಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಜನತಾ ದರ್ಶನಕ್ಕೆ ಹೋಗದಂತೆ ಡಿಸಿ, ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಸೇರಿ ಇತರ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಸುದೀರ್ಘವಾಗಿ ಸಚಿವರು ಚರ್ಚೆ ನಡೆಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಡೆಸುತ್ತಿರುವ ಜನತಾ ದರ್ಶನ ಸರ್ಕಾರದ ಕಾರ್ಯಕ್ರಮವಲ್ಲ. ಕೇಂದ್ರ ಸಚಿವರು ಜನತಾ ದರ್ಶನ ನಡೆಸುವುದು ಸರ್ಕಾರದಲ್ಲಿ ಅವಕಾಶವಿಲ್ಲ. ರಾಜ್ಯ ಸರ್ಕಾರದಿಂದ ಹೆಚ್.​ಡಿ ಕುಮಾರಸ್ವಾಮಿ ಜನತಾ ದರ್ಶನಕ್ಕೆ ಅಸಹಕಾರ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯನವರ ಮುಖೇನವಾಗಿ ಮುಖ್ಯಕಾರ್ಯದರ್ಶಿಗಳು ಮಂಡ್ಯ ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮುಡಾ ಸೈಟ್‌ ಅಕ್ರಮ ಆರೋಪ; ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಬಿಚ್ಚಿಟ್ರು ಅಸಲಿ ವಿಷ್ಯ; ಏನದು? 

ಸರ್ಕಾರಕ್ಕೆ ಕುಮಾರಸ್ವಾಮಿ ತರಾಟೆ!
ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗಿದ್ದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೆಂಡಾಮಂಡಲರಾಗಿದ್ದಾರೆ. ಜನತಾ ದರ್ಶನ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ. ಜನತಾ ದರ್ಶನದ ಬಗ್ಗೆನೇ ಸಚಿವ ಸಂಪುಟದ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನೀವು ಅಧಿಕಾರಿಗಳನ್ನು ದೂರ ಇಡಬಹುದು. ಆದರೆ ನನ್ನಿಂದ ಜನರನ್ನ ದೂರ ಮಾಡಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅಧಿಕಾರಿಗಳು ಕಾರ್ಯಕ್ರಮಕ್ಕೆ ಬರದೇ ರೀತಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಅಧಿಕಾರಿಗಳ ವಿರುದ್ಧ ದೂಷಿಸುವುದಿಲ್ಲ, ಸರ್ಕಾರ ಸಣ್ಣತನವನ್ನ ತೋರುತ್ತಿದೆ. ಇದು ನನ್ನ ಮನೆಯ ಕಾರ್ಯಕ್ರಮವಲ್ಲ ಅಂತಾ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು; ರಾಜ್ಯ ಸರ್ಕಾರದ ಮೇಲೆ ಸಿಡಿದೆದ್ದ HDK; ಹೇಳಿದ್ದೇನು?

https://newsfirstlive.com/wp-content/uploads/2024/07/HDK-Mandya.jpg

Load More