newsfirstkannada.com

Video: ಕುಡಿದ ಅಮಲಿನಲ್ಲಿ ಹಾವು ಹಿಡಿದು ಸತ್ತ.. ಅಂತ್ಯಕ್ರಿಯೆಗೆ ಸಿದ್ಧತೆ ಮಾಡುವಾಗ ಎದ್ದು ಕುಳಿತ!

Share :

01-07-2023

    ಕುಡಿದು ಹಾವು ಹಿಡಿಯುವ ಸಾಹಸ ಮಾಡಿದ ವ್ಯಕ್ತಿ

    ಕೈಯಲ್ಲಿ ಗರುಡ ರೇಖೆ ಇದೆ ಎಂದು ಹಾವು ಹಿಡಿದ ವ್ಯಕ್ತಿ

    ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳುವಾಗ ಎದ್ದು ಕುಳಿತ

ಗದಗ: ಕುಡಿದ ಮತ್ತಿನಲ್ಲಿ ಕೆಲವರು ಸಾಹಸ ಮೆರೆಯಲು ಹೋಗುತ್ತಾರೆ. ಹೀಗೆ ಸಾಹಸ ಮೆರೆಯಲು ಹೋಗಿ ಸಾವಿನ ಮನೆ ಸೇರಿದವರು ಇದ್ದಾರೆ. ಅದರಂತೆಯೇ ಇಲ್ಲೊಂದು ಸ್ಟೋರಿ ವಿಚಿತ್ರವಾಗಿದೆ. ಕುಡಿದ ಅಮಲಿನಲ್ಲಿ ನಾಗರಹಾವು ಹಿಡಿಯಲು ಹೋಗಿ ಕಚ್ಚಿಸಿಗೊಂಡ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ಕೈಯಲ್ಲಿ ಗರುಡ ರೇಖೆ ಇದೆ ಎಂದು ನಾಗರಹಾವು ಹಿಡಿಯಲು ಹೋಗಿ ಹಾವು ಕಡಿದಿದೆ.

ಸಿದ್ದಪ್ಪ ಬಳಗಾನೂರು ಹಾವು ಕಡಿತಕ್ಕೆ ಒಳಗಾದವರು. ಕುಡಿದ ಅಮಲಿನಲ್ಲಿ ಹಾವು ಹಿಡಿದಿದ್ದಲ್ಲದೆ 4 ಬಾರಿ ಅದರಿಂದ ಕಚ್ಚಿಸಿಕೊಂಡಿದ್ದಾರೆ. ಯಾವುದೇ ಸುರಕ್ಷಿತ ಪರಿಕರಗಳು ಇಲ್ಲದೆ ಹಾವು ಹಿಡಿಯಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ.

ಅಂದಹಾಗೆಯೇ ಸಿದ್ದಪ್ಪ ಬಳಗಾನೂರು ಗ್ರಾಮದ ಮನೆಯೊಂದರಲ್ಲಿ ಬರಿಗೈಯಲ್ಲಿ ಹಿಡಿಯಲು ಹೋಗಿದ್ದಾರೆ. ಈ ವೇಳೆ ಹಾವು ಕಡಿದಿದೆ. ಕೊಂಚ ಹೊತ್ತಿನ ಬಳಿಕ ಅಸ್ವಸ್ಥಗೊಂಡ ಸಿದ್ದಪ್ಪನನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಾಗಲೇ ವಿಷ ಏರಿ ಸಿದ್ದಪ್ಪ ಬಳಗಾನೂರು ಸಾವನ್ನಪ್ಪಿದ್ದಾರೆ ಎಂದು ಗ್ರಾಮದಲ್ಲಿ ಸುದ್ದಿ ಹಬ್ಬಿದೆ. ಮತ್ತೊಂದೆಡೆ ಸಿದ್ದಪ್ಪ ಅವರ ಅಂತ್ಯಕ್ರಿಯೆಗೆ ಊರಿನವರು ತಯಾರಿ ನಡೆಸಿದ್ದಾರೆ.

ಸತ್ತವ ಮತ್ತೆ ಬದುಕಿ ಬಂದ

ಅತ್ತ ಸಿದ್ದಪ್ಪ ಸಾವನ್ನಪ್ಪಿದ್ದಾರೆ ಎಂದು ಊರವರು ಅಂತ್ಯಕ್ರಿಯೆ ಸಿದ್ಧತೆ ಮಾಡಿಕೊಳ್ಳುವಾಗ, ಇತ್ತ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಾ ಆಸ್ಪತ್ರೆಯಲ್ಲಿ ಎದ್ದು ಕುಳಿತಿದ್ದಾರೆ. ನಾಗರಹಾವಿನಿಂದ ಕಚ್ಚಿಸಿಕೊಂಡ ಸಿದ್ದಪ್ಪ ಸಾವಿನ ದವಡೆಯಿಂದ ಪಾರಾಗಿರುವುದು ಗ್ರಾಮದ ಜನರ ಅಚ್ಚರಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕುಡಿದ ಅಮಲಿನಲ್ಲಿ ಹಾವು ಹಿಡಿದು ಸತ್ತ.. ಅಂತ್ಯಕ್ರಿಯೆಗೆ ಸಿದ್ಧತೆ ಮಾಡುವಾಗ ಎದ್ದು ಕುಳಿತ!

https://newsfirstlive.com/wp-content/uploads/2023/07/gadag-Snake-Bite.jpg

Load More