newsfirstkannada.com

ಭಾರತದ ಮೊದಲ ಕೋಟ್ಯಾಧಿಪತಿ ಈತ! 50 ರೋಲ್ಸ್​ ರಾಯ್ಸ್​ ಕಾರಿನ ಒಡೆಯ

Share :

27-07-2023

    ಈತ ಸ್ವಂತ ವಿಮಾನಯಾನ ಸಂಸ್ಥೆಯನ್ನು ಹೊಂದಿದ್ದನು

    ವಜ್ರದ ಗಣಿಯನ್ನೇ ಹೊಂದಿದ್ದರು, ಸರಳವಾದ ಬಟ್ಟೆ ಧರಿಸುತ್ತಿದ್ದನು

    ಆ ಕಾಲದಲ್ಲಿ ಸುಮಾರು 1700 ಕೋಟಿ ರೂಪಾಯಿ ಆಸ್ತಿ ಎಂದರೆ ನಂಬ್ತೀರಾ?

ಪ್ರಸ್ತುತ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಎಂದರೆ ಅದು ಮುಖೇಶ್​​ ಅಂಬಾನಿ. ಇವರ ಉದ್ಯಮ, ಮನೆ, ಕಾರು, ಆಸ್ತಿ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಇವರ ಹಿನ್ನಲೆ ಗೊತ್ತೇ ಇದೆ. ಆದರೆ ಭಾರತದ ಮೊದಲ ಕೋಟ್ಯಾಧಿಪತಿ ಯಾರು ಎಂಬ ಬಗ್ಗೆ ಗೊತ್ತಿದ್ಯಾ? ಆ ಕೋಟ್ಯಾಧಿಪತಿಯ ಬಳಿ ವಜ್ರದ ಗಣಿ, ರೋಲ್ಸ್ ​ರಾಯ್ಸ್​ ಕಾರು ಇತ್ತು ಎಂದರೆ ನಂಬ್ತೀರಾ?. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹೈದರಾಬಾದ್​ನ ನಿಜಾಮ ಮೀರ್​ ಒಸ್ಮಾನ್​ ಅಲಿ ಖಾನ್​ ಬಗ್ಗೆ ಗೊತ್ತಿದ್ಯಾ?. ಇವರೇ ಭಾರತದ ಮೊದಲ ಕೋಟ್ಯಾಧಿಪತಿಯಾಗಿ ಮೆರೆದವರು. 25ನೇ ವಯಸ್ಸಿಗೆ ಸಿಂಹಾಸನವೇರುವ ಮೂಲಕ ತಮ್ಮದೇ ರಾಜ್ಯಭಾರ ಮಾಡಿದ್ದರು.

ಕುಟುಂಬದ ಜೊತೆಗೆ ಮೀರ್​ ಒಸ್ಮಾನ್​ ಅಲಿ ಖಾನ್ (Pic Credit: The Nizam's - Hyderabad)
ಕುಟುಂಬದ ಜೊತೆಗೆ ಮೀರ್​ ಒಸ್ಮಾನ್​ ಅಲಿ ಖಾನ್ (Pic Credit: The Nizam’s – Hyderabad)

230 ಬಿಲಿಯನ್​ ಡಾಲರ್

ಹೈದರಾಬಾದಿನ ನಿಜಾಮರು 1724-1948ರವರೆಗೆ ಆಳ್ವಿಕೆ ಮಾಡಿದ್ದಾರೆ. ಸುಮಾರು 224 ವರ್ಷಗಳ ಕಾಲ ರಾಜ್ಯ ಆಳಿದ್ದಾರೆ. ಈ ನಿಜಾಮರ ಜೀವನೇ ವಿಚಿತ್ರ. ಅಪಾರ ಸಂಪತ್ತು ಹೊಂದಿದ್ದ ಈ ನಿಜಾಮರು ವಿಲಾಸಿ ಜೀವನ ಬದುಕುತ್ತಿದ್ದರು. ಅದರಲ್ಲಿ ಆಳ್ವಿಕೆ ನಡೆಸಿದ ಮೀರ್​ ಒಸ್ಮಾನ್​ ಅಲಿ ಖಾನ್ ಜೀವನವೇ ಕೊಂಚ ಡಿಫರೆಂಟ್​. ಈಸ್ಟ್​ ಇಂಡಿಯಾ ಕಂಪನಿ ಪ್ರಕಾರ, ಭಾರತದ ಮೊದಲ ಮತ್ತು ಶ್ರೀಮಂತ ಕೋಟ್ಯಾಧಿಪತಿ ಎಂಬ ಹೆಗ್ಗಳಿಕೆಗೆ ಈತ ಪಾತ್ರನಾಗಿದ್ದ. ಯಾಕೆಂದರೆ  ಈತ 230 ಬಿಲಿಯನ್​ ಡಾಲರ್​ನಷ್ಟು ಆಸ್ತಿ ಹೊಂದಿದ್ದ.

ಮೀರ್​ ಒಸ್ಮಾನ್​ ಅಲಿ ಖಾನ್ (Pic Credit: The Nizam's - Hyderabad)
ಮೀರ್​ ಒಸ್ಮಾನ್​ ಅಲಿ ಖಾನ್ (Pic Credit: The Nizam’s – Hyderabad)

ಬ್ರಿಟಿಷರಿಗೆ ಸಹಾಯ

ಅಂದಹಾಗೆಯೇ  ಮೀರ್​ ಒಸ್ಮಾನ್​ ಅಲಿ ಖಾನ್ ಅಷ್ಟು ದೊಡ್ಡ ಶ್ರೀಮಂತನಾಗಲು ಕಾರಣವೇ ಗೋಲ್ಕೊಂಡದ ಗಣಿಗಳು. ಆ ಸಮಯದಲ್ಲಿ ವಜ್ರಗಳನ್ನು ಈತ ಪೂರೈಕೆ ಮಾಡುತ್ತಿದ್ದ. ಮೀರ್​ ಒಸ್ಮಾನ್​ ಅಲಿ ಖಾನ್ ಅಧಿಕಾರಕ್ಕೆ ಬಂದ 3 ವರ್ಷದ ಬಳಿಕ ಮಹಾಯುದ್ಧ ಪ್ರಾರಂಭವಾಯಿತು. 1914ರಲ್ಲಿ ಪ್ರಾರಂಭವಾದ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರಿಗೆ ಆರ್ಥಿಕ ಸಹಾಯವನ್ನು ಈತ ನೀಡಿದ್ದ. ಅಷ್ಟು ಮಾತ್ರವಲ್ಲ, 1917ರಲ್ಲಿ ಹೈದರಾಬಾದ್​ನಲ್ಲಿ ಉಸ್ಮಾನಿಯಾ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದ್ದನು.

ಸ್ವಂತ ವಿಮಾನಯಾನ ಸಂಸ್ಥೆ

ಇವಿಷ್ಟು ಮಾತ್ರವಲ್ಲದೆ, ಮೀರ್​ ಒಸ್ಮಾನ್​ ಅಲಿ ಖಾನ್ ಸರಳವಾದ ಬಟ್ಟೆ ಧರಿಸುತ್ತಿದ್ದನು, ಆತನ ಬಳಿ 100 ಮಲಿಯನ್​ ಪೌಂಡ್​​ ಚಿನ್ನ, 400 ಮಿಲಿಯನ್​ ಪೌಂಡ್​​ ಆಭರಣ ಮಾತ್ರವಲ್ಲದೆ, ಸ್ವಂತ ವಿಮಾನಯಾನ ಸಂಸ್ಥೆಯನ್ನು ಹೊಂದಿದ್ದನು.

50 ರೋಲ್ಸ್​ ರಾಯ್ಸ್​ ಕಾರು

ರಾಣಿ ಎಲಿಜಬೆತ್​ 2 ಮದುವೆಗೆ 300 ವಜ್ರಗಳಿಂದ ಕೂಡಿದ ನೆಕ್ಲೇಸ್​​ ಅನ್ನು ಉಡುಗೊರೆಯಾಗಿ ನೀಡಿದ್ದನು. ಇವೆಲ್ಲದರ ಹೊರತಾಗಿ ದುಬಾರಿ 50 ರೋಲ್ಸ್​ ರಾಯ್ಸ್​ ಕಾರನ್ನು ಈತನ ಬಳಿ ಇತ್ತು. 1940ರ ದಶಕದಲ್ಲಿ ಮೀರ್​ ಒಸ್ಮಾನ್​ ಅಲಿ ಖಾನ್ ಸಂಪತ್ತು ಸುಮಾರು 1700 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ 2023ಕ್ಕೆ ಹೋಲಿಸಿದರೆ 2,95,770 ಕೋಟಿ ರೂಪಾಯಿಯಷ್ಟಾಗಿದೆ.

ಮೀರ್​ ಒಸ್ಮಾನ್​ ಅಲಿ ಖಾನ್ ಮತ್ತು ರೋಲ್ಸ್​ ರಾಯ್ಸ್​ ಕಾರು (Pic Credit: The Nizam's - Hyderabad)
ಮೀರ್​ ಒಸ್ಮಾನ್​ ಅಲಿ ಖಾನ್ ಮತ್ತು ರೋಲ್ಸ್​ ರಾಯ್ಸ್​ ಕಾರು (Pic Credit: The Nizam’s – Hyderabad)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಮೊದಲ ಕೋಟ್ಯಾಧಿಪತಿ ಈತ! 50 ರೋಲ್ಸ್​ ರಾಯ್ಸ್​ ಕಾರಿನ ಒಡೆಯ

https://newsfirstlive.com/wp-content/uploads/2023/07/Rolls-Roys-1.jpg

Load More