newsfirstkannada.com

ಇವರು ರಾಜ್ಯದ ಟಾಪ್​ ಶ್ರೀಮಂತ ಶಾಸಕರು.. ಅಷ್ಟು ಮಾತ್ರವಲ್ಲ, ದೇಶದಲ್ಲೇ ಅತ್ಯಂತ ಸಿರಿವಂತರು!

Share :

Published July 16, 2023 at 9:26am

Update July 16, 2023 at 10:50am

    ಕರ್ನಾಟಕದ ಶಾಸಕರು ದೇಶದಲ್ಲೇ ಅತ್ಯಂತ ಶ್ರೀಮಂತರು

    ಶಾಸಕರ ಆಸ್ತಿ ಪ್ರಮಾಣದ ಬಗ್ಗೆ ಅಧ್ಯಯನ; ಪ್ರಿಯಕೃಷ್ಣ ಆಸ್ತಿ ಎಷ್ಟು?

    32 ಶಾಸಕರು 100 ಕೋಟಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ

ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು ದೇಶದಲ್ಲೇ ಅತ್ಯಂತ ಶ್ರೀಮಂತರು ಎಂಬ ವರದಿಯೊಂದು ಹೊರಬಿದ್ದಿದೆ. ಅದರಲ್ಲಿ ಕನಕಪುರ ಕ್ಷೇತ್ರದ ಡಿ ಕೆ ಶಿವಕುಮಾರ್​, ಗೌರಿಬಿದನೂರು ಕ್ಷೇತ್ರ ಪುಟ್ಟಸ್ವಾಮಿಗೌಡ, ಗೋವಿಂದರಾಜನಗರದ ಪ್ರಿಯಕೃಷ್ಣ ರಾಜ್ಯದ 3 ಶ್ರೀಮಂತ ಶಾಸಕರು ಎಂದು ಗುರುತಿಸಿಕೊಂಡಿದ್ದಾರೆ.

ಅಸೋಸಿಯೇಷನ್​ ಫಾರ್​ ಡೆಮಾಕ್ರೆಟಿಕ್​ ರಿಫರ್ಮ್ಸ್​ ಮತ್ತು ನ್ಯಾಷನಲ್​ ಎಲೆಕ್ಷನ್​ ವಾಚ್​ ಎಂಬ ಎರಡು ಸಂಸ್ಥೆಗಳು ಅಧ್ಯಯನ ನಡೆಸಿದ್ದು, ದೇಶದ ವಿವಿಧ ರಾಜ್ಯಗಳ ಶಾಸಕರ ಆಸ್ತಿ ಪ್ರಮಾಣದ ಬಗ್ಗೆ ಅಧ್ಯಯನ ನಡೆಸಿದೆ. ಅದರಲ್ಲಿ ಒಟ್ಟಾರೆ 64.39 ಕೋಟಿಯಷ್ಟಿದೆ ಎಂದು ತಿಳಿದುಬಂದಿದೆ. ಇನ್ನು ಕರ್ನಾಟಕ ಶಾಸಕರ ಆಸ್ತಿ ಪ್ರಮಾಣದ 64.39 ಕೋಟಿಯಷ್ಟಿದೆ ಎಂದು ವರದಿ ಹೇಳಿದೆ.

28 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶ 4033 ಶಾಸಕರು ಕುರಿತಾಗಿ ಅಧ್ಯಯನಕ್ಕಿಳಿದ ಅಸೋಸಿಯೇಷನ್​ ಫಾರ್​ ಡೆಮಾಕ್ರೆಟಿಕ್​ ರಿಫರ್ಮ್ಸ್​ ಮತ್ತು ನ್ಯಾಷನಲ್​ ಎಲೆಕ್ಷನ್​ ವಾಚ್ ಸಂಸ್ಥೆ 4001 ಶಾಸಕರು ಅಫಿಡವಿಟ್​​ನಲ್ಲಿ ನೀಡಿರುವ ಮಾಹಿತಿ ಆಧರಿಸಿ ಅಧ್ಯಯನ ಮಾಡಿದೆ.

ಇನ್ನು ಕರ್ನಾಟಕದ 223 ಶಾಸಕರ ಪೈಕಿ 32 ಶಾಸಕರು 100 ಕೋಟಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ಆ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಬಳಿಕ ಅರುಣಾಚಲಪ್ರದೇಶ, ಆಂಧ್ರಪ್ರದೇಶ ನಂತರದ ಸ್ಥಾನಗಳಲ್ಲಿವೆ.

ಅಂದಹಾಗೆಯೇ ಡಿ ಕೆ ಶಿವಕುಮಾರ್​ 1413 ಕೋಟಿ, ಪುಟ್ಟಸ್ವಾಮಿಗೌಡ 1267 ಕೋಟಿ, ಪ್ರಿಯಕೃಷ್ಣ 1156 ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ.

ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್​, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶಗಳಲ್ಲೂ ಕೂಡ ಅತಿ ಹೆಚ್ಚು ಆಸ್ತಿಯನ್ನು ಹೊಂದಿರುವ ಶಾಸಕರು ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇವರು ರಾಜ್ಯದ ಟಾಪ್​ ಶ್ರೀಮಂತ ಶಾಸಕರು.. ಅಷ್ಟು ಮಾತ್ರವಲ್ಲ, ದೇಶದಲ್ಲೇ ಅತ್ಯಂತ ಸಿರಿವಂತರು!

https://newsfirstlive.com/wp-content/uploads/2023/07/Top-3-Rich-MLA.jpg

Load More