ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆಯೊಂದರ ಮೇಷ್ಟ್ರು
ಹಳೆಯ ವಿದ್ಯಾರ್ಥಿ ಮತ್ತು SDMC ಸಮ್ಮುಖದಲ್ಲಿ ವಾಹನ ಖರೀದಿಸಿದ ಹೆಡ್ ಮಾಸ್ಟರ್
ಮಕ್ಕಳನ್ನು ಮನೆಗೆ ಸುರಕ್ಷಿತವಾಗಿ ಬಿಡುವ ಕೆಲಸ ಮಾಡುತ್ತಿರುವ ಮುಖ್ಯೋಪಾಧ್ಯಾಯರು
ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗೆ ಸೆಡ್ಡು ಹೊಡೆದಿದೆ. ತಮ್ಮ ಶಾಲೆಯಲ್ಲೂ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಸಿಗುವ ಕೆಲವು ವ್ಯವಸ್ಥೆಯನ್ನ ಜಾರಿ ಮಾಡಿದ್ದಾರೆ. ಮಕ್ಕಳನ್ನ ಶಾಲೆಗೆ ಕರೆತರಲು ಬೈಂದೂರು ತಾಲೂಕಿನ ಹೇರೂರು ಯರುಕೋಣೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹೊಸ ಕಾರ್ಯಕ್ಕೆ ಕೈಹಾಕಿದೆ.
ಶಾಲೆಯ ಹೆಡ್ಮಾಸ್ಟರ್ ನಾರಾಯಣ್ ದೇವಾಡಿಗ ಹಳೆಯ ವಿದ್ಯಾರ್ಥಿ ಮತ್ತು ಎಸ್ಡಿಎಂಸಿ ಸಮ್ಮುಖದಲ್ಲಿ ಓಮ್ನಿ ವಾಹನ ಖರೀದಿಸಿದ್ದಾರೆ. ಮಕ್ಕಳನ್ನ ಮನೆಯಿಂದ ಶಾಲೆಗೆ ಶಾಲೆಯಿಂದ ಮನೆಗೆ ಉಚಿತವಾಗಿ ಹಾಗೂ ಸುರಕ್ಷಿತವಾಗಿ ಬಿಡುವ ಕಾರ್ಯವನ್ನೂ ಮಾಡ್ತಿದ್ದಾರೆ.
ಶಾಲೆಯ ಸುತ್ತಮುತ್ತ ಹಾಗೂ ಶಾಲೆಯ ಎದುರು ಆಕರ್ಷಕ ಕಲಾಪ್ರಕಾರಗಳು ಮಕ್ಕಳನ್ನ ಗಮನ ಸೆಳೆಯುವ ಜೊತೆಗೆ ಉಚಿತ ವಾಹನ ವ್ಯವಸ್ಥೆಯಿಂದ ಖಾಸಗಿ ಶಾಲೆಯ ಬದಲು ಈ ಸರ್ಕಾರ ಶಾಲೆಯಲ್ಲೇ ಮಕ್ಕಳು ಆಸಕ್ತಿಯಿಂದ ಕಲಿಯುವಂತಾಗಿದೆ. ಇನ್ನು, ಸರ್ಕಾರಿ ಶಾಲೆಯನ್ನ ಉಳಿಸಲು ಶಿಕ್ಷಕರ ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ