newsfirstkannada.com

ಪುತ್ತೂರಿನಲ್ಲಿ ಬರ್ಬರ ಕೃತ್ಯ; ಹುಲಿವೇಷ ತಂಡದ ಮುಖ್ಯಸ್ಥನ ಕೊಚ್ಚಿ ಕೊಚ್ಚಿ ಸಾಯಿಸಿದ ಹಂತಕರು

Share :

07-11-2023

  ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಗಲಾಟೆ!

  ಮೂರಕ್ಕೂ ಹೆಚ್ಚು ದುಷ್ಟರು ಸೇರಿ ಅಕ್ಷಯ್ ಕಲ್ಲೇಗನ ಬರ್ಬರ ಕೊಲೆ

  ಕೊಲೆ ಮಾಡಿದ ಬಳಿಕ ಪೊಲೀಸ್​ ಠಾಣೆಗೆ ಬಂದು ಶರಣಾದ ಆರೋಪಿಗಳು

ಮಂಗಳೂರು: ಹುಲಿವೇಷ ತಂಡದ ಮುಖ್ಯಸ್ಥನನ್ನು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಅಕ್ಷಯ್ ಕಲ್ಲೇಗ (26) ಕೊಲೆಯಾದ ದುರ್ದೈವಿ.

ಮೃತ ವ್ಯಕ್ತಿ ಹುಲಿವೇಷ ತಂಡದ ನೇತೃತ್ವ ವಹಿಸಿಕೊಂಡಿದ್ದರು. ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಗಲಾಟೆ ನಡೆದಿದೆ. ರಾಜಿ ಮಾತುಕತೆ ವೇಳೆ ಎರಡು ಸಾವಿರ ನೀಡುವಂತೆ ಮಾತುಕತೆ ನಡೆದಿದೆ. ಬಸ್ ಚಾಲಕ ಚೇತು ಬೆಂಬಲಿಗನಿಗೆ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೊನೆಗೆ ಮೂರಕ್ಕೂ ಹೆಚ್ಚು ಜನರು ಸೇರಿ ಅಕ್ಷಯ್​​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಬಳಿಕ ಮನೀಷ್ ಮತ್ತು ಚೇತು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಮತ್ತೋರ್ವ ಆರೋಪಿ ತಲೆಮಲೆಸಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುತ್ತೂರಿನಲ್ಲಿ ಬರ್ಬರ ಕೃತ್ಯ; ಹುಲಿವೇಷ ತಂಡದ ಮುಖ್ಯಸ್ಥನ ಕೊಚ್ಚಿ ಕೊಚ್ಚಿ ಸಾಯಿಸಿದ ಹಂತಕರು

https://newsfirstlive.com/wp-content/uploads/2023/11/death.jpg

Load More