newsfirstkannada.com

ರೊಟ್ಟಿ ಮಾರಿ ಜೀವನ, ನಿಪ್ಪಟ್ಟು ಮಾರಿ ಬದುಕು.. ಭೀಕರ ಅಪಘಾತದಲ್ಲಿ ಸಾವಿಗೀಡಾದ 3 ಕುಟುಂಬಗಳ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

Share :

30-05-2023

  ಬಸ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ

  ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೃತದೇಹಗಳು

  ಅಪಘಾತದ ಭೀಕರತೆಗೆ ಸಾಕ್ಷಿಯಾಗಿರುವ ಬಸ್​, ಕಾರು

ಆ ಕುಟುಂಬಗಳು ಬಡತನದ ನಡುವೆ ಮಕ್ಕಳ ನಗು ಮಖಗಳಲ್ಲಿ ಕಷ್ಟ ಮರೆತಿದ್ರು. ಬೇಸಿಗೆ ಬಂತು ಅಂತ ಮಕ್ಕಳ ಜೊತೆಗೆ ಕುಟುಂಬ ಸಮೇತ ಟ್ರಿಪ್‌ಗೆ ತೆರಳಿದ್ರು. ಆದ್ರೆ, ವಿಧಿ ಮಾತ್ರ ಅವರ ಬೆನ್ನುಬಿದ್ದಿತ್ತು. ದೇವರ ದರ್ಶನ ಮುಗಿಸಿ ಮನೆಗೆ ವಾಪಸ್ ಆಗಬೇಕು ಅನ್ನೋವಷ್ಟರಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಇಡೀ ಕುಟುಂಬವೇ ದುರಂತ ಅಂತ್ಯ ಕಂಡಿದೆ. ಇದೀಗ ಅವರ ಸಂಬಂಧಿಕರ ಜೊತೆ ಉಳಿದಿರೋದು ಕಂಬನಿ. ಸೂತಕದ ಛಾಯೆ ಮಾತ್ರ.

ಇದು ಮೈಸೂರು-ಕೊಳ್ಳೇಗಾಲ ರಸ್ತೆಯ ಕುರುಬೂರು ಗ್ರಾಮದ ಬಳಿ ನಡೆದಿದ್ದ ಅಪಘಾತದ ದೃಶ್ಯ. ಖಾಸಗಿ ಬಸ್​​ ಮತ್ತು ಇನೋವಾ ಕಾರ್​​ ನಡುವೆ ನಡೆದಿದ್ದ ಭೀಕರ ಅಪಘಾತದಲ್ಲಿ 10 ಮಂದಿ ದಾರುಣವಾಗಿ ಉಸಿರು ಚೆಲ್ಲಿದ್ದಾರೆ. ಇದೀಗ ತಮ್ಮವರನ್ನ ಕಳೆದುಕೊಂಡು ಮೂರು ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ನಮ್ಮ ಕುಟುಂಬಕ್ಕೆ ಎಂಥಾ ಗತಿ ತಂದೆಯಲ್ಲಾ ಭಗವಂತ ಅಂತಾ ಸಂಬಂಧಿಗಳ ಆಕ್ರಂದನ ಮುಗಿಲುಮುಟ್ಟಿದೆ.

ನಿನ್ನೆ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸ್ವಗ್ರಾಮ ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಭಗವಂತನ ದರ್ಶನಕ್ಕಾಗಿ ಪುಟ್ಟ ಪುಟ್ಟ ಮಕ್ಕಳೊಂದಿಗೆ ಸಂಸಾರದ ಸಮೇತ ಬಳ್ಳಾರಿಯಿಂದ ತೆರಳಿದ್ದ ಮೂರು ಕುಟುಂಬಗಳ ದಾರುಣ ಅಂತ್ಯ ಕಂಡಿವೆ. ಇದ್ರಿಂದ ಸಂಗನಕಲ್ಲು ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. 10 ಮಂದಿ ಸಾವನ್ನಪ್ಪಿದ್ದು, ಅಪಘಾತದಲ್ಲಿ ಗಾಯಗೊಂಡಿರೋ ತಂದೆ ಜನಾರ್ದನ್,  ಮಗ ಪುನೀತ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇಬ್ಬರೂ ಸುರಕ್ಷಿತವಾಗಿ ಬದುಕಿ ಬರಲೆಂದು ಇಡೀ ಗ್ರಾಮವೇ ದೇವರ ಮೊರೆ ಹೋಗಿದೆ.

ಅಂದಹಾಗೆಯೇ ಅಪಘಾತದಲ್ಲಿ ಮೃತಪಟ್ಟ ಒಂದೊಂದು ಕುಟುಂಬದ ಹಿಂದೆ ಒಂದೊಂದು ಕಥೆಗಳಿವೆ. ಮಂಜುನಾಥ್ ಪತ್ನಿ ಪೂರ್ಣಿಮಾ, 10 ವರ್ಷದ ಮಗ ಪವನ್, 08 ವರ್ಷದ ಕಾರ್ತಿಕ್ ಈ ಕುಟುಂಬ ಡೆಡ್ಲಿ ಅಪಘಾತದಲ್ಲಿ ಸಾವನಪ್ಪಿದೆ.

ರೊಟ್ಟಿ ಮಾರಿ ಜೀವನ

ಅಪಘಾತದಲ್ಲಿ ಮೃತಪಟ್ಟ ಮಂಜುನಾಥ್ ಮೂಲತಃ ಮೊಳಕಾಲ್ಮೂರು ತಾಲೂಕಿನವರು. ಸದ್ಯ ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ರೊಟ್ಟಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸ್ತಿದ್ರು. ಪತಿ ಮಂಜುನಾಥ್ ರೊಟ್ಟಿ ವ್ಯಾಪಾರಕ್ಕೆ ಪತ್ನಿ ಪೂರ್ಣಿಮಾ ಕೂಡ ಸಾತ್ ನೀಡ್ತಿದ್ರು.. ಅಕ್ಕಪಕ್ಕದ ಖಾನಾವಳಿಗಳಿಗೆ ರೊಟ್ಟಿ ಮಾರಿ ಈ ಕುಟುಂಬ ಜೀವನ ಸಾಗಿಸುತ್ತಿತ್ತು.

ಹೀಗೆ ರೊಟ್ಟಿ ಮಾರುತ್ತ ಮಕ್ಕಳ ಭವಿಷ್ಯದ ಬಗ್ಗೆ ನಾನಾನ ಕನಸು ಕಂಡವರು ಇದೀಗ ಮಸಣ ಸೇರಿದ್ದಾರೆ.. ಇದು ಮಂಜುನಾಥ್ ಕುಟುಂಬದ ಕಥೆಯಾದ್ರೆ ಜನಾರ್ದನ್ ಕುಟುಂಬದ ವ್ಯಥೆಯೇ ಕಣ್ಣಿಗೆ ಕಟ್ಟುವಂತಿದೆ.

ನಿಪ್ಪಟ್ಟು ಮಾರಿ ಬದುಕು

ಇತ್ತ ಗಾಯಗೊಂಡು ಆಸ್ಪತ್ರೆ ಸೇರಿರೋ ಜನಾರ್ದನ ಕುಟುಂಬ ನಿಪ್ಪಟ್ಟು-ಚಕ್ಕಲಿ ತಯಾರಿಸಿ ಅದನ್ನ ಮಾರಾಟ ಮಾಡಿದ ಹಣದಲ್ಲಿ ಜೀವನ ಸಾಗಿಸ್ತಿದ್ರು. ಇದೀಗ ಅಪಘಾತದಲ್ಲಿ ಜನಾರ್ದನ್ ಪತ್ನಿ ಗಾಯತ್ರಿ, 3 ವರ್ಷದ ಪುತ್ರಿ ಶ್ರಾವ್ಯ ಸಾವನ್ನಪ್ಪಿದ್ದಾರೆ.. ಇದೀಗ ಜನಾರ್ದನ, ಮಗ ಪುನೀತ್ ಸಾವು ಬದುಕಿನ ಮಧ್ಯೆ ಮೈಸೂರಿನ ಆಸ್ಪತ್ರೆಯಲ್ಲಿ ಹೋರಾಟ ನಡೆಸ್ತಿದ್ದಾರೆ.

ಇನ್ನೂ ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 2 ಲಕ್ಷ ಪರಿಹಾರ ಘೋಷಿಸಲಾಗಿದೆ.. ಕೇಂದ್ರ ಸರ್ಕಾರ ಕೂಡಾ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನೂ ಈ ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡುತ್ತಾ ಸಚಿವ ಬಿ. ನಾಗೇಂದ್ರ ಗದ್ಗದಿತರಾಗಿದ್ರು.

ಒಟ್ಟಿನಲ್ಲಿ ಭಗವಂತನ ದರ್ಶನಕ್ಕೆ ಬಳ್ಳಾರಿ ಬಿಟ್ಟವರು, ನಡು ರಸ್ತೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ದೇವರ ದರ್ಶನಕ್ಕೆ ಹೋದವರು ದೇವರ ಪಾದ ಸೇರಿದ್ದಾರೆ.. ಇದೀಗ ಮೃತರ ಕುಟುಂಬಸ್ಥರಿಗೆ ದುಃಖವನ್ನು ಬರಿಸುವ ಶಕ್ತಿ ಆ ದೇವರು ನೀಡಲಿ ಅಂತ ಬಳ್ಳಾರಿ ಜನತೆ ಪ್ರಾರ್ಥಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೊಟ್ಟಿ ಮಾರಿ ಜೀವನ, ನಿಪ್ಪಟ್ಟು ಮಾರಿ ಬದುಕು.. ಭೀಕರ ಅಪಘಾತದಲ್ಲಿ ಸಾವಿಗೀಡಾದ 3 ಕುಟುಂಬಗಳ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

https://newsfirstlive.com/wp-content/uploads/2023/05/MYSore-Accident.jpg

Load More