newsfirstkannada.com

×

ನಾಟಕ ಪ್ರದರ್ಶನದ ವೇಳೆ ಹೃದಯಾಘಾತ.. ವೀಕ್ಷಕರೆದುರೇ ಕುಸಿದು ಬಿದ್ದು ಪೋಸ್ಟ್​ಮ್ಯಾನ್​​ ಸಾವು

Share :

Published September 15, 2023 at 11:32am

Update September 15, 2023 at 11:43am

    ಹೃದಯಾಘಾತಕ್ಕೆ ಬಲಿಯಾದ ಪೋಸ್ಟ್​ಮ್ಯಾನ್​​

    ಡ್ಯಾನ್ಸ್ ಮಾಡಲು ವೇದಿಕೆ ಏರಿದವನು ಅಲ್ಲೇ ಸತ್ತ

    ‘ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ’ ನಾಟಕ ಪ್ರದರ್ಶನ ವೇಳೆ ಅವಘಡ

ವಿಜಯಪುರ: ನಾಟಕ ಪ್ರದರ್ಶನದ ವೇಳೆ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ. ಶರಣು ಬಾಗಲಕೋಟೆ (24) ಎಂಬ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿದ್ದು, ವೃತ್ತಿಯಲ್ಲಿ ಪೋಸ್ಟ್ ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದನು ಎಂದು ತಿಳಿದುಬಂದಿದೆ.

ಶರಣು ಕೊಟ್ಯಾಳ್ ನಾಟಕ ಪ್ರದರ್ಶನ ವೇಳೆ ಡ್ಯಾನ್ಸ್ ಮಾಡಲು ವೇದಿಕೆ ಏರಿದ್ದ. ‘ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ’ ನಾಟಕ ಪ್ರದರ್ಶನ ವೇಳೆ ಡ್ಯಾನ್ಸ್​ ಮಾಡಲು ಮುಂದಾಗಿದ್ದ. ಈ ವೇಳೆ ಆತನಿಗೆ ವೇದಿಕೆ ಮೇಲೆಯೇ ಹೃದಯಾಘಾತವಾಗಿದೆ.

ಸಾವನ್ನಪ್ಪಿದ ಶರಣು ಕೊಟ್ಯಾಳ್ ಇತ್ತೀಚೆಗೆ ಪೋಸ್ಟ್ ಮ್ಯಾನ್ ಆಗಿ ನೇಮಕಗೊಂಡಿದ್ದ. ಗ್ರಾಮ ದೇವರ ಜಾತ್ರೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ. ತಾನು ಸಹ ನಾಟಕದಲ್ಲಿ ಡ್ಯಾನ್ಸ್ ಮಾಡಲು ವೇದಿಕೆ ಏರಿದ್ದ. ಈ ವೇಳೆ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದಿದ್ದಾನೆ. ಇದನ್ನು ಕಂಡು ಆತನ ಬಳಿ ಕಲಾವಿದೆ ಶಾಕ್​ಗೆ ಒಳಗಾಗಿದ್ದಾಳೆ. ಅತ್ತ ವೇದಿಕೆ ಕೆಳಗೆ ಕುಳಿತು ನಾಟಕ ನೋಡುತ್ತಿದ್ದ ಗ್ರಾಮಸ್ಥರಲ್ಲೂ ಆತಂಕ ಸೃಷ್ಟಿಸಿದೆ.

ಇನ್ನು ಶರಣು ಕೊಟ್ಯಾಳ್​ಗೆ ಹೃದಯಾಘಾತವಾಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಟಕ ಪ್ರದರ್ಶನದ ವೇಳೆ ಹೃದಯಾಘಾತ.. ವೀಕ್ಷಕರೆದುರೇ ಕುಸಿದು ಬಿದ್ದು ಪೋಸ್ಟ್​ಮ್ಯಾನ್​​ ಸಾವು

https://newsfirstlive.com/wp-content/uploads/2023/09/Heart-Attack.jpg

Load More