ಹಾರ್ಟ್ ಚೆಕಪ್ ಮಾಡಿಕೊಳ್ಳವವರ ಸಂಖ್ಯೆ ಏಕಾಏಕಿ ಏರಿಕೆ
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಹೊರ ರೋಗಿಗಳ ಸಂಖ್ಯೆ
ಸ್ಪಂದನಾ ಹಾರ್ಟ್ ಅಟ್ಯಾಕ್ ನಂತರ ಆಸ್ಪತ್ರೆಯತ್ತ ಜನ..!
ಬೆಂಗಳೂರು: ಚಿನ್ನಾರಿಮುತ್ತನ ಹೃದಯವಂತೆಗೆ ಹೃದಯಾಘಾತವಾಗಿ ವಾರ ಕಳೆದಿದೆ. ಬ್ಯಾಂಕಾಕ್ಗೆ ಪ್ರಯಾಣ ಬೆಳೆಸಿದ್ದ ಸ್ಪಂದನಾ, ಅಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದರು. ಚಿರಂಜೀವಿ ಸರ್ಜಾ, ಪುನೀತ್ ರಾಜ್ ಕುಮಾರ್, ಈಗ ಸ್ಪಂದನಾ. ಕಣ್ಣು ಮುಚ್ಚಿದ ಸ್ಪಂದನಾ ಹಲವರ ಕಣ್ಣನ್ನು ತೆರೆಸುವ ಕೆಲಸ ಮಾಡಿ ಬಿಟ್ಟಿದ್ದಾರೆ. ಸ್ಪಂದನಾ ಹಾರ್ಟ್ ಅಟ್ಯಾಕ್ ಇದೀಗ ಯುವ ಜನರ ಹಾರ್ಟ್ ಬೀಟ್ ಹೆಚ್ಚು ಮಾಡಿದೆ.
ಸ್ಪಂದನಾ ಹಾರ್ಟ್ ಅಟ್ಯಾಕ್ ನಂತರ ಇದೀಗ ಹೃದ್ರೋಗ ಆಸ್ಪತ್ರೆಯತ್ತ ಬರುವ ಜನರ ಸಂಖ್ಯೆ ಏಕಏಕಿ ಏರಿಕೆಯಾಗಿದೆ. ಹಿಂದಿನ ಸರಾಸರಿಗಿಂತಲೂ ಮೂರು 30% ಅಧಿಕ ಜನರು ಬಂದು ಚೆಕಪ್ ಮಾಡಿಸ್ಕೊತ್ತಿದ್ದಾರೆ. ಬೆಂಗಳೂರಿನ ಜಯನಗದಲ್ಲಿರುವ ಜಯದೇವ ಆಸ್ಪತ್ರೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನರು ಹಾರ್ಟ್ ಚೆಕಪ್ ಮಾಡಿಸುತ್ತಿದ್ದಾರೆ. ಸ್ಪಂದನಾರ ಹಾರ್ಟ್ ಅಟ್ಯಾಕ್ಗಿಂತ ಮೊದ್ಲು ದಿನಕ್ಕೆ 1000-1200 ಜನರು ಬಂದು ಹಾರ್ಟ್ ಚೆಕಪ್ ಮಾಡುತ್ತಿದ್ದಾರೆ.
ಆದರೆ ಇದೀಗ ಆಸ್ಪತ್ರೆಗೆ ಬರುತ್ತಿರುವ ಹೊರ ರೋಗಿಗಳ ಸಂಖ್ಯೆ 30% ಏರಿಕೆಯಾಗಿದೆ. ಅಂದರೆ ದಿನಕ್ಕೆ ಚೆಕಪ್ಗೆ ಬರುವ ಹೊರ ರೋಗಿಗಳ ಸಂಖ್ಯೆ 2 ಸಾವಿರಕ್ಕೆ ಏರಿಕೆಯಾಗಿದೆ. ಅದರಲ್ಲೂ 25-32 ವರ್ಷದ ವಯೋಮಾನದವರೇ ಹೆಚ್ಚಿನ ಜನರು ಚೆಕಪ್ ಮಾಡಿಸ್ತಿದ್ದಾರೆ. ಒಟ್ಟಿನಲ್ಲಿ ಸ್ಪಂದನಾ ಘಟನೆಯ ಬಳಿಕ ಹಲವರು ಎಚ್ಚೆತ್ತುಕೊಂಡಿದ್ದಾರೆ. ಜನರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಚೆಕಪ್ ಮಾಡಿಸ್ತಿದ್ದಾರೆ. ಜನರು ಆತಂಕ ಪಡುವ ಬದಲು, ಆಸ್ಪತ್ರೆಗೆ ಬಂದು ಚೆಕಪ್ ಮಾಡಿಸ್ತಿರೋದು ಒಳ್ಳೆಯ ಬೆಳವಣಿಗೆ ಅನ್ನೋದು ಹೃದ್ರೋಗ ತಜ್ಞರ ಅಭಿಪ್ರಾಯ ಕೂಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ