newsfirstkannada.com

ಬೆಂಗಳೂರಿಗೆ ಬಿಗ್ ಶಾಕ್! ಮತ್ತೆ ಹೆಚ್ಚಾಗುತ್ತಿದೆ ಬಿರು ಬಿಸಿಲು; ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Share :

Published April 27, 2024 at 5:59pm

Update April 27, 2024 at 6:10pm

  ರಾಜ್ಯದ ಹಲವು ಭಾಗಗಳಲ್ಲಿ ಭಯಾನಕ ಬಿಸಿಲಿನಿಂದ ಜನರು ಹೈರಾಣು

  ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚಾಗುವ ಸೂರ್ಯನ ಬಿಸಿ ಶಾಖ

  ಬಿಸಿ ಶಾಖದಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೇಗೆ ವಹಿಸಬೇಕು?

ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿರು ಬಿಸಿಲಿನ ತಾಪಮಾನ ಜಾಸ್ತಿಯಾಗುತ್ತಿದೆ. ಮಧ್ಯಾಹ್ನಕ್ಕೆ ಜನರು ಮನೆಯಿಂದ ಹೊರ ಬರೋದಕ್ಕೂ ಭಯ ಪಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಇಂದು ರಾಜ್ಯ ರಾಜಧಾನಿ ಬೆಂಗಳೂರಲ್ಲಿ 36 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ನಾಳೆ, ನಾಡಿದ್ದು 37, 38 ಡಿಗ್ರಿ ಉಷ್ಣಾಂಶ ದಾಖಲಾಗುವ ಮುನ್ಸೂಚನೆಗಳಿವೆ.

ಬಿಸಿಲಿನ ಶಾಖ ಹೆಚ್ಚಾಗುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ವಿಶೇಷ ಕಾಳಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಜಾಗೃತಿ ಮೂಡಿಸಿದೆ. ಹೀಗಾಗಿ ಜನ ಮುಂಜಾಗ್ರತಾ ಕ್ರಮವಾಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಜಾಗೃತಿ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದೆ.

ಇದನ್ನೂ ಓದಿ: Heatwave: ಬೆಂಗಳೂರಿಗೆ ಮತ್ತೊಂದು ಶಾಕಿಂಗ್ ಸುದ್ದಿ.. 15 ವರ್ಷಗಳಲ್ಲೇ ಬಿಸಿಲಲ್ಲಿ ಹೊಸ ದಾಖಲೆ; ಮುಂದೇನು?

ಇದನ್ನೂ ಓದಿ: ಬ್ರೇಕ್ ಬದಲಾಗಿ ಎಕ್ಸಲೇಟರ್ ಒತ್ತಿದ ಡ್ರೈವರ್; ಬೆಂಗಳೂರಲ್ಲಿ ಸರಣಿ ಅಪಘಾತ, ಅಸಲಿಗೆ ಆಗಿದ್ದೇನು?

 • ಬಿಸಿಲಿನಲ್ಲಿ ಹೆಚ್ಚು ಕಾಲ ಕಳೆಯುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು ಸುಡು ಬಿಸಿಲಿನಲ್ಲಿ ಆಗಾಗ ನೆರಳಿನಡಿ ಆಶ್ರಯ, ನಿಮ್ಮ ಆರೋಗ್ಯಕ್ಕೆ ಅಭಯ ಪಡೆಯಿರಿ.
 • ಮಧ್ಯಾಹ್ನ 12ರಿಂದ 4ರವರೆಗೆ ಬಿಸಿಲಿನಿಂದ, ದೈಹಿಕ ಒತ್ತಡ ಮತ್ತು ದಣಿವಾಗಿ ಆರೋಗ್ಯಕ್ಕೆ ಮಾರಕವಾಗಬಹುದು ಬಿರು ಬಿಸಿಲಿನಲ್ಲಿ ನಿಮ್ಮ ಕೆಲಸಗಳಿಗೆ ವಿರಾಮ ನೀಡಿ, ನಿಮ್ಮ ಆರೋಗ್ಯ ರಕ್ಷಿಸಿ.
 • ಬಿರು ಬಿಸಿಲಿನಲ್ಲಿ ದೇಹದ ಉಷ್ಣಾಂಶ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು ಛತ್ರಿಯಿಂದ ಸೂರ್ಯನ ಶಾಖಕ್ಕೆ ಕತ್ರಿ ಹಾಕಿ.
 • ಬೇಸಿಗೆಯಲ್ಲಿ ಮನೆ ವಾತಾವರಣ ತಂಪಾಗಿರಿಸಿ, ಕುಟುಂಬದ ಅರೋಗ್ಯ ರಕ್ಷಿಸಿ. ಕಿಟಕಿ ಪರದೆ, ಮೇಲ್ಟಾವಣಿಗೆ ನೀರು, ತಂಪಾಗುವುದು ಸೂರು.
 • ಸೂರ್ಯನ ಶಾಖ, ಬಳಲಿಕೆ, ಬೆವರು ಮತ್ತು ದುರ್ಬಲ ನಾಡಿಗೆ ಕಾರಣವಾಗಿ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು. ತಿಳಿ ಬಣ್ಣದ ಸಡಿಲವಾದ ಬಟ್ಟೆ ಧರಿಸಿ, ನಿಮ್ಮ ದೇಹಕ್ಕೆ ತಗಲುವ ಶಾಖ ಕಡಿತಗೊಳಿಸಿ.

ಇಂತಹ ಬಿಸಿಲಿನ ವಾತಾವರಣ ಆರೋಗ್ಯಕ್ಕೆ ಒಳ್ಳೆಯದಲ್ಲ. ಉರಿ ಬಿಸಿಲು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರವು ಎಚ್ಚರಿಕೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗೆ ಬಿಗ್ ಶಾಕ್! ಮತ್ತೆ ಹೆಚ್ಚಾಗುತ್ತಿದೆ ಬಿರು ಬಿಸಿಲು; ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

https://newsfirstlive.com/wp-content/uploads/2024/02/HEAT-WAVES.jpg

Load More