ಕೆರಿಬಿಯನ್ ಪ್ರೀಮಿಯರ್ ಲೀಗ್ನ ರಕೀಮ್ ರಣಾರ್ಭಟ ಬ್ಯಾಟಿಂಗ್
ಹಂಗಿಸಿದವರಿಗೆ ಬ್ಯಾಟ್ನಿಂದ ಖಡಕ್ ಆಗಿ ಉತ್ತರ ನೀಡಿದ ರಕೀಮ್
ಶತಕದ ಮೂಲಕ ಹೊರ ಬಿತ್ತು ರಕೀಮ್ ಮನದಾಳದ ನೋವುಗಳು
ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳ ಪಾಲಿಗೆ ಬ್ಯಾಟ್ ಅನ್ನೋದು ಅಸ್ತ್ರ. ಈ ಬ್ಯಾಟ್ನಿಂದ ಬೌಂಡರಿ, ಸಿಕ್ಸರ್ಗಳ ಸುರಿಮಳೆಯನ್ನೇ ಸುರಿಸ್ತಾರೆ. ತಂಡದ ಗೆಲುವಿಗೂ ಕಾರಣರಾಗ್ತಾರೆ. ಅದ್ರ ಜೊತೆಗೆ ಕೆಣಕಿ, ಟೀಕಿಸಿ, ಹಂಗಸಿದವರಿಗೆ.. ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಡ್ತಾರೆ.
ಅಂದು ಕ್ರಿಕೆಟ್ ಮೈದಾನದಲ್ಲಿ ಹೊತ್ತಿ ಉರಿದಿದ್ದು, ಆಕ್ರೋಶದ ಜ್ವಾಲೆ. ಒಂದೊಂದು ಸಿಕ್ಸರ್ಗಳ ಹಿಂದಿದಿದ್ದು, ನಿಂದಿಸಿ-ಅವಮಾನಿಸಿದವರ ಮೇಲಿದ್ದ ಅಗಾಧವಾದ ಸಿಟ್ಟು. ಹಂಗಿಸಿ ಕಿಚಾಯಿಸಿದವರಿಗೆ ಉತ್ತರವಾಗಿ ಸಿಕ್ಕಿದ್ದು, ಶಾಂದಾರ್ ಶತಕ. ಇದೆಲ್ಲದರ ರೂವಾರಿ ವಿಂಡೀಸ್ ಆಲ್ರೌಂಡರ್ ರಕೀಮ್ ಕಾರ್ನವಾಲ್.
ರಕೀಮ್ ಕಾರ್ನವಾಲ್ ಆಟಕ್ಕೆ ಉಘೇ.. ಉಘೇ..!
ನಿನ್ನೆಯಿಂದ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ವಿಂಡೀಸ್ ಬ್ಯಾಟ್ಸ್ಮನ್ ರಕೀಮ್ ಕಾರ್ನ್ವಾಲ್ದ್ದೇ ಹವಾ. ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಧೂಳಿಬ್ಬಿಸಿದ ರಕೀಮ್ ಕಾರ್ನ್ವಾಲ್, ಎಲ್ಲೆಡೆ ಬಿರುಗಾಳಿ ಎಬ್ಬಿಸಿದ್ದಾರೆ. ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟಿಗರು, ಫ್ಯಾನ್ಸ್ ಎಲ್ಲರೂ ಕಾರ್ನವಾಲ್ ಆಟಕ್ಕೆ ಉಘೇ.. ಉಘೇ ಹೇಳ್ತಿದ್ದಾರೆ.
4 ಬೌಂಡರಿ, 12 ಸಿಕ್ಸರ್, ಅಬ್ಬಬ್ಬಾ.. ಏನ್ ಆಟ.!
ಕೆರಿಬಿಯನ್ ಪ್ರೀಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ರಕೀಮ್ ಕಾರ್ನವಾಲ್ ಸಿಕ್ಸರ್ಗಳ ಸುನಾಮಿಯನ್ನೇ ಸೃಷ್ಟಿಸಿದ್ರು. ಸೇಂಟ್ ಕಿಟ್ಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ ಕಾರ್ನವಾಲ್ ಚಚ್ಚಿದ್ದು ಬರೋಬ್ಬರಿ 12 ಸಿಕ್ಸರ್ಗಳನ್ನ. 221 ರನ್ಗಳ ಟಾರ್ಗೆಟ್ ಬೆನ್ನತ್ತಿದ ತಂಡದ ವಿಸ್ಫೋಟಕ ಆರಂಭ ಒದಗಿಸಿದ ಕಾರ್ನ್ವಾಲ್ ಜಸ್ಟ್ 45 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಘರ್ಜಿಸಿದ್ರು.
212.50ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಕಾರ್ನ್ವಾಲ್ ಫ್ಯಾನ್ಸ್ ಫುಲ್ ಟ್ರೀಟ್ ನೀಡಿದ್ರು. ಇಷ್ಟೇ ಅಲ್ಲ, ಬಾರ್ಬೋಡೋಸ್ ರಾಯಲ್ ತಂಡದ ರಾಯಲ್ ವಿಜಯದ ರೂವಾರಿಯಾದ್ರು.
ಸೆಂಚುರಿ ಇನ್ನಿಂಗ್ಸ್ ಹಿಂದೆ ಧಗಧಗಿಸುತ್ತಿತ್ತು ಕಿಚ್ಚು.!
ಮೊನ್ನೆ ಬಾರ್ಬಡೋಸ್ ಅಂಗಳದಲ್ಲಿ ಕಾರ್ನ್ವಾಲ್ ಬ್ಯಾಟ್ನಿಂದ ಸಿಡಿದ ಒಂದೊಂದು ಸಿಕ್ಸರ್ ಹಿಂದೆ ಆರದ ಕಿಚ್ಚಿತ್ತು. ಮನದಾಳದ ನೋವು, ಆಕ್ರೋಶ ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ರೂಪದಲ್ಲಿ ಸಿಡಿದಿತ್ತು. ಕೆಲವೇ ದಿನಗಳ ಹಿಂದಾದ ಅವಮಾನ ಕಾರ್ನ್ವಾಲ್ ಮನದಾಳದಲ್ಲಿ ಜ್ವಾಲೆಯನ್ನ ಹೊತ್ತಿಸಿತ್ತು.
It was never in doubt, the Republic Bank Play of the Day is Rahkeem Cornwall's sensational century.#CPL23 #BRvSKNP #RepublicBank #CricketPlayedLouder #BiggestPartyInSport #Cornwall pic.twitter.com/ELvirLOtZk
— CPL T20 (@CPL) September 4, 2023
ಅದು ಟೂರ್ನಿಯ ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧದ ಪಂದ್ಯ. ಆ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ಸ್ 202 ರನ್ಗಳ ಬಿಗ್ ಟಾರ್ಗೆಟ್ ಚೇಸ್ ಮಾಡ್ಬೇಕಿತ್ತು. ಆದ್ರೆ, ಆರಂಭದಲ್ಲೇ ಕಾರ್ನ್ವಾಲ್ ರನೌಟ್ ಆದ್ರು.
ಹೀಗೆ ರನೌಟ್ ಆಗಿದ್ದೇ ಆಗಿದ್ದು, ಕಾರ್ನ್ವಾಲ್ರ ದೇಹದ ತೂಕವನ್ನ ಗುರಿಯಾಗಿಸಿಕೊಂಡು ಟೀಕೆಗಳು ಸುರಿಮಳೆ ಸುರಿಯಿತು. ಕಾರ್ನ್ವಾಲ್ರನ್ನ ತೆಗುಳುವ ಭರದಲ್ಲಿ ದೇಹದ ತೂಕವನ್ನ ಎಳೆದು ತಂದು ಹಂಗಿಸಿದ್ರು. ಇದ್ರಿಂದ, ರಕೀಮ್ ಕಾರ್ನ್ವಾಲ್ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.
2019ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾರ್ನ್ವಾಲ್ ಡೆಬ್ಯೂ ಮಾಡಿದ ದಿನದಿಂದಲೂ ಈ ರೀತಿಯ ಅವಮಾನಗಳನ್ನ, ನಿಂದನೆಗಳನ್ನ ಅನುಭವಿಸಿದ್ದಾರೆ. ಇದೇ ಕಾರಣದಿಂದ ಹಲವು ಬಾರಿ ತಂಡದಲ್ಲಿ ಸ್ಥಾನ ವಂಚಿತರಾದ ಉದಾಹರಣೆ ಇದೆ. ಈ ತರಹದ ಕಾರ್ನ್ವಾಲ್ರಲ್ಲಿರೋ ಕ್ರಿಕೆಟ್ ಆಡೋ ಕಿಚ್ಚು ಹೆಚ್ಚಾಗಿದ್ಯೂ ಹೊರತು ಕಡಿಮೆಯಾಗಿಲ್ಲ. ಅದಕ್ಕೆ ಈ ಸೆಂಚುರಿ ಇನ್ನಿಂಗ್ಸ್ ಒಂದು ಎಕ್ಸಾಂಪಲ್ ಅಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ