newsfirstkannada.com

ದೆಹಲಿಯಲ್ಲಿ ಪ್ರಾಣವಾಯು ಕಲುಷಿತ.. ಮಕ್ಕಳ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರುತ್ತಿದೆ ಮಾಲಿನ್ಯ..! 

Share :

07-11-2023

    ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗೆ ರಜೆ ಘೋಷಣೆ

    ವಾಯು ಗುಣಮಟ್ಟ ಸೂಚ್ಯಂಕ ಎಕ್ಯೂಐ 411ರಷ್ಟು ದಾಖಲು

    ದೀಪಾವಳಿಯಲ್ಲಿ ಪಟಾಕಿ ಖರೀದಿ, ಮಾರಾಟದ ಮೇಲೆ ಹದ್ದಿನ ಕಣ್ಣು

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಪ್ರಾಣ ವಾಯುವೇ ಪ್ರಾಣ ತೆಗೆಯುತ್ತಿದೆ. ಜೀವ ಸಂಕುಲಕ್ಕೆ ಪ್ರಕೃತಿ ಮಾತೆ ಕರುಣಿಸಿರೋ ವರವೇ ಸದ್ಯ ಶಾಪವಾಗುತ್ತಿದೆ. ದೆಹಲಿಯಲ್ಲಿ ಪ್ರಾಣವಾಯು ಜನರ ಜೀವಕ್ಕೆ ವಿಷವಾಗುವ ಹಂತಕ್ಕೆ ತಲುಪಿದೆ. ಹೀಗಾಗಿ ದೆಹಲಿಯಲ್ಲಿ ಮುನ್ನೆಚ್ಚರಿಕೆಯಾಗಿ ಹಲವು ಕ್ರಮಗಳನ್ನ ಕೈಗೊಳ್ಳಲಾಗಿದೆ.

ರಾಷ್ಟ್ರರಾಜಧಾನಿ ದೆಹಲಿಗೆ ಪದೇ ಪದೇ ಕಾಡುವ ಸಮಸ್ಯೆ ವಾಯು ಮಾಲಿನ್ಯ. ಉಸಿರಾಡುವ ಗಾಳಿಯೇ ಮಲಿನವಾಗಿ ರಾಷ್ಟ್ರ ರಾಜಧಾನಿ ಜನರ ಜೀವವನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ಅಪಾಯ ಮಟ್ಟ ಮೀರಿ ಕಲುಷಿತಗೊಂಡಿರೋ ಪ್ರಾಣವಾಯು ಜನರ ಉಸಿರನ್ನೇ ನಿಲ್ಲಿಸುವ ಹಂತಕ್ಕೆ ಬಂದು ತಲುಪಿದೆ.

ರಾಷ್ಟ್ರರಾಜಧಾನಿಯ ಶಾಲೆಗಳಿಗೆ ರಜೆ ಘೋಷಣೆ!

ದೆಹಲಿ ವಾಯುಗುಣಮಟ್ಟ ಗಂಭೀರ ಪರಿಸ್ಥಿತಿಗೆ ತಲುಪಿದ್ದು ಜನರು ಪರಿತಪಿಸುತ್ತಿದ್ದಾರೆ. ದೆಹಲಿಯಲ್ಲಿ ನಿನ್ನೆ ವಾಯು ಗುಣಮಟ್ಟ ಸೂಚ್ಯಂಕ 411ರಷ್ಟು ದಾಖಲಾಗಿದೆ. ಈ ಮೂಲಕ ಪ್ರಾಣವಾಯು ತೀವ್ರವಾಗಿ ಮಲಿನಗೊಂಡಿದೆ. ದೆಹಲಿ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ದಟ್ಟ ಹಾಗೂ ಕಪ್ಪುಹೊಗೆ ಆವರಿಸಿದ್ದು ಜನರನ್ನ ಆತಂಕಕ್ಕೆ ತಳ್ಳಿದೆ. ದೆಹಲಿಯ ಸಫ್ದರ್ಜಂಗ್, ಇಂಡಿಯಾಗೇಟ್, ರೋಹಿಣಿ, ಮಮಯೂರ್ ವಿಹಾರ್, ನೋಯ್ಡಾ, ಗುರುಗ್ರಾಮ ಸೇರಿದಂತೆ ಬಹುತೇಕ ಕಡೆ ತೀರ ಕಳಪೆ ಮಟ್ಟದ ವಾಯುಮಾಲಿನ್ಯ ದಾಖಲಾಗಿದೆ.

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿರೋದ್ರಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹೈಯರ್ ಸೆಕೆಂಡರಿವರೆಗಿನ ಶಾಲೆಗಳಿಗೆ ರಜೆಯನ್ನ ವಿಸ್ತರಿಸಲಾಗಿದೆ. ನವೆಂಬರ್ 10ರವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಆದೇಶ ಹೊರಡಿಸಿದೆ. ಇನ್ನೂ ದೆಹಲಿಯಲ್ಲಿ ಉಸಿರಾಟದ ತೊಂದರೆ ಇರೋ ರೋಗಿಗಳ‌ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಅಂತ ದೆಹಲಿಯ ಏಮ್ಸ್ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಪಟಾಕಿ ಖರೀದಿ, ಮಾರಾಟದ ಮೇಲೆ ಹದ್ದಿನ ಕಣ್ಣು

ದೆಹಲಿಯಲ್ಲಿ ಪಟಾಕಿಗಳ ಖರೀದಿ ಮತ್ತು ಮಾರಾಟವನ್ನು ತಡೆಯಲು ದೆಹಲಿ ಸರ್ಕಾರವು 210 ಪೊಲೀಸ್ ತಂಡಗಳನ್ನು ರಚಿಸಿದೆ. ಜೊತೆಗೆ ಮಾಲಿನ್ಯ ಉಂಟು ಮಾಡುವ ವಾಹನಗಳಿಗೆ ನಿಷೇಧ ಏರಲಾಗಿದೆ. ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ಹಾಕಲಾಗುತ್ತಿದೆ. ಈವರೆಗೆ ಒಟ್ಟು 74 ಲಕ್ಷ ರೂಪಾಯಿ ದಂಡವನ್ನ ವಸೂಲಿ ಮಾಡಲಾಗಿದೆ. ವಾಯು ಮಾಲಿನ್ಯ ನಿಯಂತ್ರಿಸುವ ಬಗ್ಗೆ ಕೇಜ್ರಿವಾಲ್ ಸರ್ಕಾರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

ದೀಪಾವಳಿ ನಂತರ ಒಂದು ವಾರದವರೆಗೆ ಬೆಸ-ಸಮ ವಾಹನ ಸಂಖ್ಯೆ ಸಾರಿಗೆ ವ್ಯವಸ್ಥೆ ಜಾರಿಗೆ ತರಲು ಕೇಜ್ರಿವಾಲ್ ಸರ್ಕಾರ ನಿರ್ಧರಿಸಿದೆ. ನವೆಂಬರ್ 13 ರಿಂದ ನವೆಂಬರ್ 20ರವರೆಗೆ ಈ ವ್ಯವಸ್ಥೆ ಜಾರಿಯಲ್ಲಿರಲಿದೆ. ದೆಹಲಿ ಒಳಗೆ ಭಾರೀ ಸರಕು ಸಾಗಣೆ ವಾಹನ ಸೇರಿದಂತೆ ಬಿಎಸ್​4 ಡೀಸೆಲ್​ ವಾಹನಗಳಿಗೂ ನಿಷೇಧ ಹೇರಲಾಗಿದೆ. ಆದರೆ, ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಒಟ್ಟಾರೆ, ಮಾನವನ ಉಸಿರಿಗೆ ಆಸರೆಯಾಗಿದ್ದ ಪ್ರಾಣವಾಯುವೇ ಕಲುಷಿತಗೊಂಡಿರೋದು ದೆಹಲಿ ಮುಂದಿನ ದಿನಗಳ ಕರಾಳತೆಯನ್ನ ಯೋಚಿಸಲು ಸಾಧ್ಯವಾಗದ ಹಂತಕ್ಕೆ ತಂದಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿಯಲ್ಲಿ ಪ್ರಾಣವಾಯು ಕಲುಷಿತ.. ಮಕ್ಕಳ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರುತ್ತಿದೆ ಮಾಲಿನ್ಯ..! 

https://newsfirstlive.com/wp-content/uploads/2023/11/Delhi-Pollution-1.jpg

Load More