ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮುಂದುವರಿದ ಮಳೆ
ಭಾರೀ ಮಳೆಗೆ ಮತ್ತೆ ತತ್ತರಿಸಿದ ಬೆಂಗಳೂರಿನ ಜನ
ಬಿಬಿಎಂಪಿ ಅಧಿಕಾರಿಗಳಿಗೆ ಆತಂಕ, ವರುಣನ ಆರ್ಭಟ!
ಬೆಂಗಳೂರು: ಇಷ್ಟು ದಿನ ಸೈಲೆಂಟ್ ಆಗಿ ಇದ್ದ ವರುಣ ಮೊನ್ನೆ ರಾತ್ರಿಯಿಂದ ಸಿಲಿಕಾನ್ ಸಿಟಿಯಲ್ಲಿ ಆರ್ಭಟಿಸುತ್ತಿದ್ದಾನೆ. ಹೇಳದೇ ಕೇಳದೇ ಬಂದ ಮಳೆರಾಯ ಸಾಕಷ್ಟು ಸಮಸ್ಯೆಗಳನ್ನೇ ಸೃಷ್ಟಿಸಿದ್ದ. ಕೆಲಸ ಮುಗಿಸಿ ಮನೆಕಡೆ ಹೊರಟಿದ್ದ ಜನರಿಗೆ ಕಾಡಿದ್ದ. ಈಗ ಮತ್ತೆ ನಗರದಲ್ಲಿ ಮಳೆ ಮುಂದುವರಿದೆ.
ಭಾರೀ ಮಳೆಯಿಂದ ಎಂದಿನಂತೆ ಇಂದು ಕೂಡ ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿದೆ. ಹೀಗಾಗಿ ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲೂ ಎಷ್ಟೋ ರಸ್ತೆಗಳು ಮುಳುಗಡೆ ಆಗಿವೆ.
ಡಾಲರ್ಸ್ ಕಾಲೋನಿ, ಪ್ಯಾಲೇಸ್ ಗುಟ್ಟಹಳ್ಳಿ, ಚಲ್ಲಘಟ್ಟದ ಮುಖ್ಯರಸ್ತೆ, ಪರಪ್ಪನ ಅಗ್ರಹಾರದ ರಾಯಲ್ ಕಂಟ್ರಿ ಲೇಜೌಟ್, ಕೋಡಿ ಚಿಕ್ಕನಹಳ್ಳಿ, ಮಲ್ಲೇಶ್ವರ, ಮೆಜೆಸ್ಟಿಕ್, ರಾಜಾಜಿನಗರ, ಬನಶಂಕರಿ, ಜಯನಗರ, ಆರ್.ಆರ್ ನಗರ, ವಿಜಯನಗರ ಸೇರಿದಂತೆ ಹಲವೆಡೆ ಜೋರು ಮಳೆಯಾಗುತ್ತಿದೆ.
ಬಿಬಿಎಂಪಿ ಅಧಿಕಾರಿಗಳಿಗೆ ಶಾಕ್
ಮೊನ್ನೆ ರಾತ್ರಿ ಸುರಿದ ಒಂದು ಗಂಟೆಯ ಮಳೆಗೆ ರಾಜಧಾನಿ ಸಂಪೂರ್ಣ ತತ್ತರಿಸಿ ಹೋಗಿತ್ತು. ಸಾಕಷ್ಟು ಅವಾಂತರ ಆಗಿತ್ತು. ದಿಢೀರ್ ಮಳೆ ಜನರಿಗೆ ತೊಂದರೆ ಕೊಟ್ಟಿದ್ದಲ್ಲದೇ ಬಿಬಿಎಂಪಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿತ್ತು.