ದೆಹಲಿಯಲ್ಲಿ ಯಮನ ರೂಪ ತಾಳಿದ ಯಮುನೆ
ಸಿಕ್ಕ ಸಿಕ್ಕ ಜಾಗವನ್ನ ಚೊಕ್ಕ ಮಾಡುತ್ತಿರುವ ಪ್ರವಾಹ
ಪ್ರವಾಹಕ್ಕೆ ಸಿಲುಕಿ 22 ಗಂಟೆ ಮರದ ಮೇಲೆ ಕಳೆದ ವ್ಯಕ್ತಿ
ದೆಹಲಿ: ಹಳೇ ದೆಹಲಿ ಭಾಗದಲ್ಲಿ ಅಧಿಪತ್ಯ ಸಾಧಿಸಿದ್ದ ಯಮುನೆ ಈಗ ನ್ಯೂಡೆಲ್ಲಿ ಭಾಗವನ್ನೂ ಮುಳುಗಿಸಿದ್ದಾಳೆ. ದೆಹಲಿಯ ಪ್ರಮುಖ ಪ್ರದೇಶಗಳಿಗೆ ಜಲದಿಗ್ಭಂಧನ ವಿಧಿಸಿದ್ದಾಳೆ. ಯಮುನಾ ನದಿ ತೀರದಲ್ಲಿ ಸುರಿದ ಭಾರೀ ಮಳೆ ಸದ್ಯ ದೆಹಲಿಗೆ ಜಲಕಂಟಕ ತಂದಿಟ್ಟಿದ್ದು, ನೀರಿನ ಮಟ್ಟ ಇನ್ನೂ ಏರುತ್ತಲೇ ಸಾಗಿರೋದು ಆತಂಕ ಮೂಡಿಸಿದೆ.
ರಾಷ್ಟ್ರರಾಜಧಾನಿಯಲ್ಲಿ ಯಮನ ರೂಪ ತಾಳಿರುವ ಯಮುನೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾಳೆ. ಯಮುನೆ ಕಪಿಮುಷ್ಟಿಗೆ ಸಿಲುಕಿ ದೆಹಲಿ ಜನರು ಕಂಗಲಾಗಿದ್ದಾರೆ. ಕೆಂಪು ಕೋಟೆ ಮೇಲೆ ಲಗ್ಗೆ ಇಟ್ಟಿದ್ದ ಯಮುನೆ, ಈಗ ತನ್ನ ಬಾಹುಬಲವನ್ನ ಬೇರೆಡೆಗೂ ಚಾಚಿದ್ದಾಳೆ. ಸಿಕ್ಕ ಸಿಕ್ಕ ಜಾಗಕ್ಕೆ ಲಗ್ಗೆ ಇಟ್ಟು ಚೊಕ್ಕ ಮಾಡುತ್ತಿದ್ದಾಳೆ.
ಕೆಂಪುಕೋಟೆ ಸಂಪರ್ಕಿಸುವ ಎಲ್ಲಾ ರಸ್ತೆಗಳು ಬಂದ್
ಸುಪ್ರೀಂಕೋರ್ಟ್, ಐಟಿಓ, ರಾಜಘಾಟ್, ಕಾಶ್ಮೀರಿ ಮಾರ್ಕೇಟ್, ಗೀತಾ ಕಾಲೋನಿ, ಹಳೆ ಬ್ರೀಡ್ಜ್, ಸಿವಿಲ್ ಲೈನ್ ಸೇರಿದಂತೆ ಹಲವು ಭಾಗಗಳಲ್ಲಿ ಯಮನೆಯ ಪ್ರವಾಹ ಲಗ್ಗೆ ಇಟ್ಟಿದೆ. ಯಮುನೆಯ ಅಬ್ಬರಕ್ಕೆ ದೆಹಲಿಯಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಪ್ರವಾಹದಿಂದ ಪರಾಗಲು ಜನರು ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದಾರೆ. ರಸ್ತೆಗಳು ಬಂದ್ ಆದ ಕಾರಣ ಭಾರೀ ಟ್ರಾಫಿಕ್ ಜಾಮ್ ಸಹ ಉಂಟಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಪ್ರವಾಹದ ಸ್ಥಳದಲ್ಲಿ ಎನ್ಡಿಆರ್ಎಫ್ ಪಡೆ ಬೀಡುಬಿಟ್ಟಿದೆ.

ಯಮುನೆಯ ಪ್ರವಾಹಕ್ಕೆ ಸಿಲುಕಿದ ದೆಹಲಿ ವ್ಯಕ್ತಿಯೋರ್ವ ಮರದ ಕೊಂಬೆ ಮೇಲೆ ಕುಳಿತು 22 ಗಂಟೆ ಕಳೆದಿದ್ದಾನೆ. ಬಳಿಕ ವ್ಯಕ್ತಿಯನ್ನ ಪತ್ತೆ ಹಚ್ಚಿದ ಎನ್ಡಿಆರ್ಎಫ್ ಸಿಬ್ಬಂದಿ ಆತನನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯಮುನಾ ಬಜಾರ್ನಲ್ಲೂ ಯಮುನೆಯ ದರ್ಬಾರ್!
ಯಮುನೆಯ ಪ್ರವಾಹದಿಂದ ದೆಹಲಿಯ ಯಮುನಾ ಬಜಾರ್ ಸಂಪೂರ್ಣ ನೀರಿನಿಂದ ಆವರಿಸಿದೆ. ಆಳೆತ್ತರದ ನೀರಿನಿಂದ ಬಜಾರ್ ಮುಳುಗಡೆಯಾಗಿದೆ.
ವರುಣಾರ್ಭಟಕ್ಕೆ ಉತ್ತರ ಪ್ರದೇಶ ತತ್ತರ
ವರುಣಾರ್ಭಟಕ್ಕೆ ಉತ್ತರ ಪ್ರದೇಶ ಅಕ್ಷರಶಃ ತತ್ತರಿಸಿದೆ. ನದಿಗಳು ಭೋರ್ಗರೆಯುತ್ತಿದ್ದು, ಹಲವೆಡೆ ರಸ್ತೆ ಕುಸಿತವಾಗಿದೆ. ಜನವಸತಿ ಪ್ರದೇಶಕ್ಕೆ ಪ್ರವಾಹದ ನೀರು ಲಗ್ಗೆ ಇಟ್ಟ ಪರಿಣಾಮ ನೋಯ್ಡಾದ ಸೆಕ್ಟರ್ 168 ಪ್ರದೇಶದಲ್ಲಿ ಸಿಲುಕಿದ್ದ ಜನರನ್ನ ಹಾಗೂ ಸಾಕು ಪ್ರಾಣಿಗಳನ್ನ ಸ್ಥಳಾಂತರಿಸಲಾಗಿದೆ.
ಮಳೆ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲೂ ಪರದಾಟ
ನಿರಂತರ ವರ್ಷಧಾರೆಗೆ ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಪರಿಸ್ಥತಿ ನಿರ್ಮಾಣವಾಗಿದೆ. ತುಂಬಿ ಹರಿಯುತ್ತಿರುವ ಕಾಲ್ಜಾನಿ ನದಿ ಗ್ರಾಮಗಳನ್ನೆಲ್ಲ ಮುಳುಗಿಸಿಬಿಟ್ಟಿದೆ. ಮೆಚ್ಪಾರ ಎಂಬಲ್ಲಿ ಪ್ರವಾಹಕ್ಕೆ ತುತ್ತಾಗಿದ್ದ 72 ಜನರನ್ನ ಭಾರತೀಯ ಸೇನೆ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.
ಪ್ರವಾಹದ ಅಬ್ಬರ.. ಅನ್ನ ನೀರಿಗಾಗಿ ಹಾಹಾಕಾರ
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಪಂಜಾಬ್ ಪರಿಸ್ಥಿತಿ ಹೇಳತೀರದ್ದಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆಯೇ ಎನ್ಡಿಆರ್ಎಫ್ ಸಿಬ್ಬಂದಿಗೆ ಸವಾಲಾಗಿದೆ. ಪ್ರವಾಹಕ್ಕೆ ಸಿಲುಕಿರೋ ಜನರು ಅನ್ನ ನೀರಿಗಾಗಿ ಪರದಾಟ ನಡೆಸುತ್ತಿದ್ದು, ಚಂಡೀಗಢದಿಂದ ಸ್ವಯಂ ಸೇವಕರು ಪ್ರವಾಹ ಪೀಡಿತ ಜನರಿಗೆ ಆಹಾರ ಪೊಟ್ಟಣ, ನೀರು ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನ ತಲುಪಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ