ಕಳೆದ ಎರಡು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಭೀಕರ ಮಳೆ..!
ಭಾರೀ ಮಳೆಗೆ ಇಡೀ ಬೆಂಗಳೂರು ತತ್ತರ, ಜನಜೀವನ ಅಸ್ತವ್ಯಸ್ತ
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶ
ಬೆಂಗಳೂರು: ಒಂದು ಸಣ್ಣ ಮಳೆ ಬಂದ್ರೆ ಸಾಕು! ನಗರದ ಅಂಡರ್ ಪಾಸ್ಗಳೆಲ್ಲಾ ಜಲಾವೃತವಾಗಿ ಕೆರೆಗಳೆಲ್ಲಾ ರಸ್ತೆಗಳ ಮೇಲೆ ಪ್ರತ್ಯಕ್ಷವಾಗಿಬಿಡುತ್ತೆ. ಅಲ್ಲದೇ ಈಗಾಗಲೇ ಅಂಡರ್ ಪಾಸ್ನಲ್ಲಿ ತುಂಬಿದ್ದ ನೀರಿನಿಂದ ಓರ್ವ ಯುವತಿ ಸಾವನ್ನಪ್ಪಿದ್ದಳು. ಆಗ ದೆಹಲಿ ಮಾದರಿಯಲ್ಲಿ ಅಂಡರ್ಪಾಸ್ಗಳನ್ನ ರೆಡಿ ಮಾಡ್ತೀವಿ ಅಂದಿದ್ದ ಪಾಲಿಕೆ ನಿದ್ದೆಗೆ ಜಾರಿ ಬಿಡ್ತಾ ಅನ್ನೋ ಪ್ರಶ್ನೆ ಕಾಡ್ತಿದೆ.
ಕೆ.ಆರ್ ಸರ್ಕಲ್ ಅವಘಡದ ಬಳಿಕ ಅಂಡರ್ ಪಾಸ್ ಗಳಿಗೆ ಮೇಲ್ಛಾವಣಿ ಅಳವಡಿಕೆಗೆ ಪಾಲಿಕೆ ಮುಂದಾಗಿತ್ತು. ಆದ್ರೆ ಮೊದಲ ಹಂತದಲ್ಲೇ ಆಮೆಗತಿಯ ಕಾಮಗಾರಿಯಲ್ಲಿ ಆಗ್ತಾ ಇದೆ. ಅಲ್ಲದೇ ಈ ಕಾಮಗಾರಿಯೂ ಕಳಪೆ ಅನ್ನೋ ಆರೋಪ ಕೇಳಿ ಬರ್ತಿದೆ.
ಮೊದಲನೇ ಹಂತದ ಕಾಮಗಾರಿಯೇ ತಡವಾದ್ರೆ ಉಳಿದ ಅಂಡರ್ ಪಾಸ್ಗಳ ಕಾಮಗಾರಿ ಯಾವಾಗ ಅನ್ನೋದು ಜನರ ಪ್ರಶ್ನೆ.
ನಗರದಲ್ಲಿ ಒಟ್ಟು 53 ಅಂಡರ್ ಪಾಸ್ಗಳ ಪೈಕಿ 8 ರಿಂದ 10 ಕಡೆ ಗಂಭೀರ ಸಮಸ್ಯೆ ಆಗುವ ಸಾಧ್ಯತೆ ಇದೆ ಅಂತ ಪಾಲಿಕೆ ಅಧಿಕಾರಿಗಳು ಗುರುತಿಸಿದ್ದಾರೆ. ಇವುಗಳಲ್ಲಿ ಕಾವೇರಿ ಜಂಕ್ಷನ್ ಹಾಗೇ ಲೀ ಮೆರಿಡಿಯನ್, ಕೆ.ಆರ್ ವೃತ್ತ ಅಂಡರ್ ಪಾಸ್ ಅಲ್ಲಿ ಮೇಲ್ಛಾವಣಿ ಹೊದಿಸುವ ತೀರ್ಮಾನವಾಗಿದೆ. ಆದ್ರೆ ಸುಮಾರು 32 ಲಕ್ಷ ರೂ ಖರ್ಚು ಮಾಡಿ ಮೇಲ್ಛಾವಣಿ ಹಾಕ್ತೀವಿ ಅಂದಿದ್ದ ಪಾಲಿಕೆ ಅಧಿಕಾರಿಗಳು ಎತ್ತ ಹೋದ್ರೋ ಆ ದೇವರೇ ಬಲ್ಲ.
ಕಿತ್ತು ಹೋದ ಅಂಡರ್ ಪಾಸ್ ಮೇಲ್ಛಾವಣಿ
ಮೇಲ್ಛಾವಣಿ ಹಾಕಿ 4 ತಿಂಗಳು ಆಗಿಲ್ಲ, ಅಂಡರ್ ಪಾಸ್ ಮೇಲ್ಛಾವಣಿ ಸಂಪೂರ್ಣ ಕಿತ್ತು ಹೋಗಲು ಶುರು ಆಗಿದೆ. ಕಂಬಿಗಳು ಬೆಂಡ್ ಆಗಿದೆ. ಒಂದೇ ಮಳೆಗೆ ಮೇಲ್ಛಾವಣಿ ಶೀಟುಗಳು ಗಾಳಿಗೆ ಕಕ್ಕಾಬಿಕ್ಕಿಯಾಗಿವೆ. ಅರ್ಧಬರ್ಧ ಕಾಮಗಾರಿ ಮಾಡಿ ,ಜನ್ರ ದುಡ್ಡನ್ನ ಪೋಲಿ ಮಾಡಿ ,ಪಾಲಿಕೆ ನಿರ್ಲಕ್ಷ್ಯವನ್ನ ಮತ್ತೆ ತೋರಿದೆ.
ಒಟ್ಟಿನಲ್ಲಿ ಮಳೆಗಾಲಕ್ಕೆ ಸಿದ್ಧತೆ ಅಂತಾ ,ಜೀವ ಹೋದ್ಮೆಲೆ ಮಾಡಿರೋ ಕಾಮಗಾರಿ, ಮಳೆ ಬಂದು ಸಿಟಿ ಹೊಳೆಯಾಗಿ ಮುಳುಗಿ ಎದ್ದೇಳೋದ್ರೋಳಗೆ ತನ್ನ ಅಸಲಿ ಮುಖ ಪ್ರದರ್ಶಿಸಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಮಸ್ಯೆ ಸರಿಪಡಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ