ಅಹಮದಾಬಾದ್, ವಡೋದರಾ, ಭರೂಚ್, ಸೂರತ್ನಲ್ಲಿ ಭಾರೀ ಮಳೆ
ಕೆರೆಗಳಂತಾದ ರಸ್ತೆಗಳು, ಮುಂದಿನ ಎರಡ್ಮೂರು ದಿನ ಇದೇ ಪರಿಸ್ಥಿತಿ ನಿರ್ಮಾಣ
ಸರ್ದಾರ್ ಸರೋವರ ಅಣೆಕಟ್ಟಿನ ನೀರಿನ ಮಟ್ಟ ಹೆಚ್ಚಳ, ಜನರಲ್ಲಿ ಆತಂಕ
ಕರ್ನಾಟಕ ಮಾತ್ರವಲ್ಲದೇ ದೇಶದ ಇತರೆ ರಾಜ್ಯಗಳಲ್ಲೂ ಮಳೆ ಅಬ್ಬರ ಜೋರಾಗಿದೆ. ಗುಜರಾತ್ ರಾಜ್ಯದ ಹಲವೆಡೆ ಪ್ರವಾಹ ಹಂತಕ್ಕೆ ತಲುಪಿದೆ. ಮಳೆಯಿಂದಾಗಿ ಕೆಲ ಜಿಲ್ಲೆಗಳು ಮುಳುಗಿ ಹೋಗಿ ಹಲವೆಡೆ ಅನಾಹುತ ಸೃಷ್ಟಿಯಾಗಿದೆ. ಅಹಮದಾಬಾದ್, ವಡೋದರಾ, ಭರೂಚ್, ಆನಂದ, ಸೂರತ್ ಸೇರಿದಂತೆ ಗುಜರಾತ್ ಜಿಲ್ಲೆಗಳ ರಸ್ತೆಗಳು, ಮನೆ ಕೆರೆಗಳಾಗಿ ಮಾರ್ಪಟ್ಟಿದ್ರೆ. ಜನ ಎತ್ತ ಹೋಗಬೇಕು ಅಂತ ಗೊತ್ತಾಗದೇ ಪರದಾಟದಲ್ಲಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ ಸತ್ಯ, ಧರ್ಮ ಹಿನ್ನೆಲೆಯೇ ಬೇರೆ ಇದೆ.. ಜೈಲಿನಿಂದ ವಿಡಿಯೋ ಕಾಲ್ನಲ್ಲಿ ದರ್ಶನ್ ಏನು ಹೇಳಿದ್ರು ಗೊತ್ತಾ?
ಗುಜರಾತ್‌ನಲ್ಲಿ ಇನ್ನೂ 2-3 ದಿನ ಇದೇ ಪರಿಸ್ಥತಿ ಇರುತ್ತೆ ಅಂತ ಭಾರತೀಯ ಹವಾಮಾನ ಇಲಾಖೆ (India Meteorological Department) ಎಚ್ಚರಿಕೆ ಕೊಟ್ಟಿದೆ. ರೆಡ್ ಅಲರ್ಟ್ ಸಹ ಇಲಾಖೆ ಘೋಷಿಸಲಾಗಿದೆ. ಇನ್ನು ಸರ್ದಾರ್ ಸರೋವರ ಅಣೆಕಟ್ಟಿನ ನೀರಿನ ಮಟ್ಟ ಹೆಚ್ಚಾಗಿದೆ. ಧಾರಾಕಾರ ಮಳೆಗೆ ವಡೋದರಾ ನಗರ ಕೆರೆಯಾಗಿದೆ. ಎರಡ್ಮೂರು ಅಡಿಯಷ್ಟು ನೀರು ನಿಂತುಕೊಂಡರು, ಜನ ಆ ನೀರಲ್ಲೇ ತಮ್ಮ ತಮ್ಮ ಕೆಲಸಗಳಿಗೆ ಸಾಗಿದ್ದಾರೆ.
ಖೇಡಾ ಜಿಲ್ಲೆಯ ನಾಡಿಯಾದ್ ನಗರದಲ್ಲೂ ಮಳೆರಾಯ ತನ್ನ ರೌಧ್ರ ನರ್ತನವನ್ನ ತೋರಿಸಿದ್ದಾನೆ. ನಖ್ತ್ರಾನಾ -ಲಖ್ಪತ್ ಹೆದ್ದಾರಿಯಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿ ರಸ್ತೆಯ ಮೇಲೆ ನದಿಯ ನೀರು ಉಕ್ಕಿ ಹರಿದಿದೆ. ಸೂರತ್ ಕೂಡ ಮಳೆಯ ಪ್ರಮಾದದಲ್ಲಿ ಸಿಲುಕಿದೆ. ಅದೆಷ್ಟೋ ಮನೆಗಳಿಗೆ ಮಳೆ ನೀರು ಮುಗ್ಗಿ ಜನರನ್ನ ಬಾಯಿ ಬಾಯಿ ಬಡಿದುಕೊಳ್ಳುವಂತೆ ಮಾಡಿದೆ. ಗುಜರಾತ್ ಜೊತೆಗೆ, ರಾಜಸ್ಥಾನ ಮತ್ತು ಮಧ್ಯ ಮಹಾರಾಷ್ಟ್ರದ ಪ್ರದೇಶಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಮಳೆಯಿಂದ ಉಂಟಾದ ಪ್ರವಾಹವು ಈಗಾಗಲೇ ಗುಜರಾತ್‌ನಲ್ಲಿ ವಿನಾಶಕಾರಿ ಪರಿಣಾಮವನ್ನು ಬೀರಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ