ವರುಣನ ಕೃಪೆಯಿಂದ ನಾಡಿನೆಲ್ಲೆಡೆ ನದಿಗಳಿಗೆ ಜೀವಕಳೆ
ತುಂಬಿದ ತುಂಗಭದ್ರಾ.. 23 ಟಿಎಂಸಿಯಷ್ಟು ನೀರು ಸಂಗ್ರಹ..!
ಹೆದ್ದಾರಿಗಳ ಮೇಲೆ ಮಳೆರಾಯನ ಸರ್ಜಿಕಲ್ ಸ್ಟ್ರೈಕ್ ಹೇಗಿದೆ?
ನಿನ್ನೆ ಭಾನುವಾರ ರಜೆ. ಆದ್ರೆ, ವರುಣನಿಗೆ ಮಾತ್ರ ಬಿರುಸಿನ ಕೆಲಸ. ಧೋ ಎಂದು ಸುರಿದು ಜನರನ್ನ ಸಂಕಷ್ಟಕ್ಕೆ ತಳ್ಳಿದ್ದಾನೆ. ವಾರದಿಂದ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕವಾಗಿ ಮಳೆ ಸುರಿಯುತ್ತಿದೆ. ಮಲೆನಾಡು-ಕರಾವಳಿ ಭಾಗವಂತೂ ಮನೆಯಿಂದ ಹೊರಕ್ಕೆ ಕಾಲಿಡಲು ಸಾಧ್ಯವಾಗ್ತಿಲ್ಲ.
ಮುನಿದು ಮರೆಯಾಗಿದ್ದ ಮಳೆರಾಯ, ನಾಡಿಗೆ ಭರ್ಜರಿ ಲಗ್ಗೆ ಹಾಕಿದ್ದಾನೆ. ರಾಜ್ಯದ ಎಲ್ಲೆಲ್ಲೂ ವರುಣೋದಯವಾಗಿದ್ದು, ನೀರಿನ ಆರ್ಭಟ ಕಾಣಿಸ್ತಿದೆ. ಸಮುದ್ರದ ಆಲಿಂಗನಕ್ಕೆ ಹಳ್ಳ-ಕೊಳ್ಳಗಳು ಸಂಭ್ರಮದಿಂದ ತಳಕು ಬಳುಕಿನ ಹೆಜ್ಜೆ ಹಾಕ್ತಿವೆ. ಇತ್ತ, ಸಮುದ್ರಕ್ಕೂ ಆವೇಶ. ಬಂದ ಅತಿಥಿಯನ್ನ ಬಾಚಿ ತಬ್ತಿದೆ. ಕರಾವಳಿಯಲ್ಲಿ ಮಳೆ ಕೆರಳಿ ನಿಂತಂತೆ ಕಾಣಿಸ್ತಿದ್ರೆ, ಮಲೆನಾಡು, ಮಳೆನಾಡಾಗಿ ಬದ್ಲಾಗಿದೆ. ರಾಜ್ಯದ ಹಲವೆಡೆ ವರುಣನ ವಿರಾಟ ದರ್ಶನ, ಹಲವು ಅವಾಂತರಗಳಿಗೆ ಜನ್ಮ ನೀಡಿದೆ.
ಕಾಫಿನಾಡಲ್ಲಿ ನದಿಗಳ ವೀರಾವೇಶ, ರಸ್ತೆ ಸಂಪರ್ಕ ಸ್ತಬ್ಧ
ಕಾಫಿನಾಡಲ್ಲಿ ವರುಣ ಅರ್ಭಟಿಸ್ತಿದ್ದು, ಮಲೆನಾಡಿನ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ನದಿಗಳು ರೋಷಾವೇಶದ ರೂಪ ತಾಳಿವೆ. ಕುದುರೆಮುಖ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ತುಂಗಾ ಭದ್ರಾ ಅಪಾಯದ ಮಟ್ಟ ಮೀರಿದ್ದು, ಹೆಬ್ಬಾಳೆ ಸೇತುವೆಯನ್ನ ಕಪಿಮುಷ್ಠಿಗೆ ಪಡೆದಿದೆ. ಇದ್ರಿಂದ ಹೊರನಾಡು ಕಳಸ ಸಂಪರ್ಕ ಕಡಿತವಾಗಿದೆ. ಶೃಂಗೇರಿ ಪಟ್ಟಣದ ಕುರುಬಗೆರಿ ಸೇರಿ ಸುತ್ತಮುತ್ತ ರಸ್ತೆಗಳು ಜಲಾವೃತ ಆಗಿವೆ.. ಇತ್ತ, ಅನ್ನಪೂರ್ಣೇಶ್ವರಿ ದರ್ಶನಕ್ಕೆ ಬಂದ ಭಕ್ತರು ಪರದಾಟ ನಡೆಸಿದ್ರು. ಇನ್ನು, ಉಸ್ತುವಾರಿ ಸಚಿವ ಜಾರ್ಜ್ ಜಿಲ್ಲೆಯ ಹಲವು ಪ್ರದೇಶಕ್ಕೆ ಭೇಟಿ ನೀಡಿ ಅವಲೋಕಿಸಿದ್ರು.
ವರುಣನ ಕೃಪೆಗೆ ಸೆಡುವಿನೊಂದಿಗೆ ಉಕ್ಕಿದ ಕೃಷ್ಣೆ
ಬೆಳಗಾವಿ ಮತ್ತು ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಮಳೆ ಅಬ್ಬರಿಸ್ತಿದ್ದು, ಕೃಷ್ಣೆಯ ಒಡಲು ಭರ್ತಿ ಆಗಿದೆ. 96 ಸಾವಿರ ಕ್ಯೂಸೆಕ್ ಒಳ ಹರಿವಿನ ಪ್ರಮಾಣ ದಾಖಲಾಗಿದೆ. ಚಿಕ್ಕೋಡಿ ವಿಭಾಗದ 7 ಸೇತುವೆಗಳು ಯಥಾಸ್ಥಿತಿ ಮುಳುಗಡೆ ಆಗಿವೆ.
ಬತ್ತಿದ್ದ ವರದಾ ನದಿಗೆ ವರದಾಗಿ ಬಂದ ಮಳೆರಾಯ
ಹಾವೇರಿ ಜಿಲ್ಲೆಯಾದ್ಯಂತ ನಾಲ್ಕೈದು ದಿನದಿಂದ ಭಾರಿ ಮಳೆ ಆಗ್ತಿದೆ. ಮಳೆರಾಯ ಆರ್ಭಟಕ್ಕೆ ವರದಾ ನದಿ ತುಂಬಿ ಹರಿಯುತ್ತಿದೆ. ಕೊಳೂರು ಸಂಪರ್ಕ ಕಲ್ಪಿಸೋ ಬ್ರೀಜ್ ಕಂ ಬ್ಯಾರೇಜ್ ಸೇತುವೆಯನ್ನ ಮುಳುಗಿಸಿದೆ. ಜಿಲ್ಲಾ ಕೇಂದ್ರಕ್ಕೆ ಬರಲು ಬೇರೆ ಮಾರ್ಗವನ್ನ ಅನುಸರಿಸ್ತಿದ್ದಾರೆ.
ವಾರದಲ್ಲೇ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ
ಇತ್ತ, ಕಲ್ಯಾಣ ಕರ್ನಾಟಕದ 4 ಜಿಲ್ಲೆ ಹಾಗೂ 3 ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಇದೀಗ ಕಳೆ ಬಂದಿದೆ. ಕಳೆದ ಒಂದೂವರೆ ತಿಂಗಳಿಂದ ಖಾಲಿಯಾಗಿದ್ದ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗಿದ್ದು, 23 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಸಮುದ್ರದ ರೀತಿ ದಡಕ್ಕೆ ಅಲೆಗಳು ಅಪ್ಪಳಿಸ್ತಿವೆ. ಜಲಾಶಯದ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಹಾಕ್ತಿದ್ದಾರೆ.
ಕೆರಳಿದ ಕಡಲಿನ ಮುಂದೆ ಪ್ರವಾಸಿಗರ ಸೆಲ್ಫಿ ಹುಚ್ಚಾಟ
ಉಡುಪಿಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ನದಿಗಳು ಮೈತುಂಬಿ ಹರಿಯುತ್ತಿದೆ. ಕಡಲು ಪ್ರಕ್ಷುಬ್ಧಗೊಂಡು ಅಬ್ಬರಿಸ್ತಿದೆ. ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸ್ತಿವೆ. ಇಷ್ಟಾದ್ರೂ ದೂರದ ಊರುಗಳಿಂದ ಉಡುಪಿಗೆ ಆಗಮಿಸುವ ಪ್ರವಾಸಿಗರು ಮಾತ್ರ ಹುಚ್ಚಾಟ ತೋರುತ್ತಿದ್ದಾರೆ. ಮಲ್ಪೆ ಪಕ್ಕ ಪಡುಕರೆಗೆ ಕಡಲ ತೀರಕ್ಕೆ ಸೆಲ್ಪಿ ಗೀಳಿಗೆ ಬಿದ್ದಿದ್ದಾರೆ.
ಹಳಿಯಾಳದಲ್ಲಿ ಮಳೆಗೆ ಮುಳುಗಿದ ಸೇತುವೆಗಳು
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಭಾರೀ ಮಳೆಯಿಂದ ಸೇತುವೆಗಳ ಮೇಲೆ ನೀರು ಉಕ್ಕಿ ಹರಿಯುತ್ತಿವೆ.. ತಾಲೂಕಿನ ಚಬ್ಬಲಗೇರಿ ಗ್ರಾಮದ ಸಂಪರ್ಕ ಕಡಿತ ಆಗಿದೆ.
ಹೆದ್ದಾರಿಗಳ ಮೇಲೆ ಮಳೆರಾಯನ ಸರ್ಜಿಕಲ್ ಸ್ಟ್ರೈಕ್
ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಲೋಂಡಾ ಬಳಿ ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿತ ಆಗಿದೆ. ರಸ್ತೆಯುದ್ದಕ್ಕೂ ಮಣ್ಣು ಕುಸಿಯುತ್ತಿದ್ದು, ರಸ್ತೆ ಮಧ್ಯೆ ಬಿರುಕು ಕಾಣಿಸಿದೆ. ಯಾವುದೇ ಕ್ಷಣದಲ್ಲೂ ರಸ್ತೆಯ ಅರ್ಧ ಭಾಗ ನೀರು ಪಾಲಾಗುವ ಸಾಧ್ಯತೆ ಇದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 69ರಲ್ಲೂ ಗುಡ್ಡ ಕುಸಿತ ಆಗಿದೆ.. ಶಿರಸಿ ದೇವಿಮನಿ ಘಾಟ್‌ನ ರಾಗಿಹೊಸಳ್ಳಿ ಸಮೀಪ ಈ ಘಟನೆ ನಡೆದಿದ್ದು, ಗುಡ್ಡ ಕುಸಿತದ ಮಣ್ಣಿನಲ್ಲಿ ಸಿಲುಕಿದ ಬಸ್ ಸಿಲುಕಿ ಪ್ರಯಾಣಿಕರು ಪರದಾಡಿದ್ರು.
ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರು ಬ್ಲಾಕ್
ಕೊಡಗು ಜಿಲ್ಲೆ ಸೋಮವಾರಪೇಟೆ ಪ್ರವಾಸಿತಾಣ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರು, ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ರು. ಸೇತುವೆ ಮುಳುಗಿ ದಿಕ್ಕು ತೋಚದಂತಾಗಿದ್ದವರನ್ನ ಅಗ್ನಿಶಾಮಕ ದಳ ರಕ್ಷಿಸಿದೆ. ಹಗ್ಗದ ಸಹಾಯದಿಂದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದಿದೆ..
ನಿರಂತರ ಮಳೆಗೆ ಮನೆಯ ಮೇಲ್ಚಾವಣಿ ಕುಸಿತ
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಘಟನೆ ಮನೆಯ ಹಿಂಭಾಗ ಕುಸಿದಿದೆ.. ದನಗಳಿಗೆ ಮೇವು ಹಾಕುವ ವೇಳೆ ಏಕಾಏಕಿ ಮೇಲ್ಚಾವಣಿ ಕುಸಿದಿದೆ.. ಒಂದು ಎಮ್ಮೆ, ಮೂರು ಮೇಕೆಗಳು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದು, ಮಣ್ಣಿನಲ್ಲಿ ಸಿಲುಕಿದ್ದ ಹಿರಯಮ್ಮ ಎಂಬ ಮಹಿಳೆಯ ರಕ್ಷಣೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ