newsfirstkannada.com

9 ಜನರ ಬಲಿ ಪಡೆದ ಮಳೆರಾಯ.. ಭರ್ಜರಿ ಮಳೆಯಿಂದ ಎಲ್ಲೆಲ್ಲಿ ಏನೆಲ್ಲ ಆಗೋಯ್ತು..!

Share :

Published June 29, 2024 at 7:02am

  ಉತ್ತರ ಭಾರತದ ರಾಜ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ

  ದೆಹಲಿಯಲ್ಲಿ ವರುಣಬ್ಬರ.. ರಸ್ತೆಗಳು ಜಲಾವೃತ

  ಕೇರಳದ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ

ಉತ್ತರ ಭಾರತದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಬಹುತೇಕ ನಗರಗಳು ಮುಳುಗಿದೆ.

ವಾರದ ಹಿಂದಷ್ಟೆ ಬಿಸಿಲ ಬೇಗೆಗೆ ಉತ್ತರ ಭಾರತದ ನೆಲ ಕಾದ ಹಂಚಿನಂತಾಗಿತ್ತು. ಅಯ್ಯೋ ಭಾಸ್ಕರ.. ಏನಪ್ಪಾ ನಿನ್ನ ಬಿಸಿಲ ಬೇಗೆ.. ಅಂತಾ ಅದೆಷ್ಟೋ ಮಂದಿ ಪ್ರಾಣ ಕೂಡ ಬಿಟ್ಟಿದ್ರು.. ಬೆಂದು ಬಸವಳಿದಿದ್ದ ಉತ್ತರ ಭಾರತದ ಜನರಿಗೆ ವರುಣ ದೇವ ಕಾಡಲು ಶುರು ಮಾಡಿದ್ದಾನೆ.

ಇದನ್ನೂ ಓದಿ:ಇವತ್ತು ವಿಶ್ವಕಪ್​​ ಫೈನಲ್.. ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ವಿರಾಟ್ ಕೊಹ್ಲಿ ಔಟ್​​..?

ದೆಹಲಿ
ನೋಡ ನೋಡ್ತಿದ್ದಂತೆ ನಿರ್ಮಾಣ ಹಂತದ ಕಟ್ಟಡವೊಂದು ದೆಹಲಿಯಲ್ಲಿ ಕುಸಿದು ಬಿದ್ದಿದೆ. ಸುರಿದ ಒಂದೇ ಒಂದು ಮಳೆಗೆ ಭಾರತದ ರಾಜಧಾನಿಯ ಹಲವು ಭಾಗಗಳು ಜಲಾವೃತವಾಗಿವೆ. ಇನ್ನೂ ನೀರಲ್ಲಿ ಲಕ್ಷಗಟ್ಟಲೆ ಬೆಲೆ ಬಾಳುವ ಕಾರುಗಳು ಮುಳುಗಿ ಹೋಗಿವೆ. ದೆಹಲಿಯ ರೋಹಿಣಿ ಸೆಕ್ಟರ್ 18 ಮೆಟ್ರೋ ನಿಲ್ದಾಣದ ಬಳಿ ಪಾರ್ಕ್​ ಮಾಡಿದ್ದ ಕಾರಿನ ಕೆಳಗೆ ಮಣ್ಣು ಕುಸಿದಿದ್ದು, ಹಳ್ಳ ನಿರ್ಮಾಣವಾಗಿದೆ.. ಕಾರು ಕೂಡ ಆ ಹಳ್ಳದಲ್ಲಿ ಅರ್ಧ ಮುಳುಗಿದೆ. ಇದುವರೆಗೂ ದೆಹಲಿಯಲ್ಲಿ ಮಳೆ ಸಂಬಂಧಿತ ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.

ರಾಜಸ್ಥಾನದಲ್ಲಿ ಮಳೆಯ ಆರ್ಭಟ, ಸಾವಿನ ಆಟ​
ರಾಜಸ್ಥಾನದ ಬಾನ್ಸೂರಿನಲ್ಲಿ ಭಾರಿ ಮಳೆಯ ಆರ್ಭಟಿಸಿದೆ, ಭಾರೀ ಮಳೆಯಿಂದ ತಾಪಮಾನ ಕುಸಿದಿದೆ, ರೈತರು ಖಾರಿಫ್ ಬೆಳೆಗೆ ತಯಾರಿ ಆರಂಭಿಸಿದ್ದಾರೆ, ರೈತರಿಗೆ ಹೊಸ ಹುರುಪು ಬಂದಿದೆ. ಆದರೆ ರಾಜಸ್ಥಾನದಲ್ಲಿ ಒಂದೇ ಮಳೆಗೆ ಸಾವು ನೋವು ಸಂಭವಿಸಿದೆ. ಜುಂಜುನುನಲ್ಲಿ ವಿದ್ಯುತ್ ಆಘಾತದಿಂದ ಓರ್ವ ಸಾವನ್ನಪ್ಪಿದ್ದು, ರಸ್ತೆ ಮೇಲೆ ಹರಿಯುತ್ತಿದ್ದ ಮಳೆ ನೀರಿನಲ್ಲಿ ಶವ ಕೊಚ್ಚಿ ಹೋಗಿದೆ.. ಧೋಲ್ಪುರ್ ನಗರದಲ್ಲಿ ಆಸ್ಪತ್ರೆ ಮನೆಗಳಿಗೆ ನೀರು ನುಗ್ಗಿ ಕೆರೆಗಳಾಗಿ ಮಾರ್ಪಟ್ಟಿದೆ. ಸ್ವರೂಪಗಂಜ್ ಪಟ್ಟಣದಲ್ಲಿ ರಸ್ತೆಗಳು ಮುಳುಗಿದ್ದು, ಪ್ರಯಾಣಿಕರು ಪರದಾಡಿದ್ದಾರೆ.

ಕೇರಳದ ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯನ್ನೂ ನೀಡಲಾಗಿದೆ. ಸಮುದ್ರದ ಪ್ರಕ್ಷುಬ್ಧತೆ ಹೆಚ್ಚಾಗುವ ಸಾಧ್ಯತೆಯಿದ್ದು, ಮೀನುಗಾರಿಕಾ ಸಮುದ್ರಕ್ಕಿಳಿಯದಂತೆ ಅಧಿಕಾರಿಗಳು ಸೂಚನೆ ಕೊಡಲಾಗಿದೆ.

ಇದನ್ನೂ ಓದಿ:ಮನೆ ದೇವರ ಪೂಜೆಗೆ ಹೊರಟಿದ್ದ 13 ಮಂದಿ ದಾರುಣ ಸಾವು.. ಕರುಳು ಚುರ್ ಎನ್ನುತ್ತೆ ಈ ಘೋರ ದುರಂತ

ಮರಾಠ ರಾಜ್ಯ ಮಹಾರಾಷ್ಟ್ರದಲ್ಲೂ ಮಳೆಯ ರೌದ್ರನರ್ತನ
ಹವಾಮಾನ ಇಲಾಖೆ ಪ್ರಕಾರ ಥಾಣೆ, ಮುಂಬೈ, ಪಾಲ್ಘರ್, ಸಿಂಧುದುರ್ಗ, ರಾಯಗಡ, ರತ್ನಗಿರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಹಾಗೆಯೇ ಮಧ್ಯಮ ಮಹಾರಾಷ್ಟ್ರದ ಪುಣೆ, ಸತಾರಾ ಮತ್ತು ಇಡೀ ವಿದರ್ಭ, ಖಂಡೇಶ್ ಮತ್ತು ಮರಾಠವಾಡದಲ್ಲಿ ಛತ್ರಪತಿ ಸಂಭಾಜಿನಗರ, ಜಲ್ನಾ, ಬೀಡ್, ಪರ್ಭಾನಿ, ನಾಂದೇಡ್ ಮತ್ತು ಹಿಂಗೋಲಿ ಜಿಲ್ಲೆಗಳಲ್ಲೂ ವರುಣನ ಸಂಚಾರ ಕಂಡುಬಂದಿದೆ.

ಹಿಮಾಚಲವನ್ನೂ ಆವರಿಸುತ್ತದ ನೈಋತ್ಯ ಮಾನ್ಸೂನ್
ಹಿಮಾಚಲ ಪ್ರದೇಶದಲ್ಲಿರೋ ಶಿಮ್ಲಾದ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಕೆಲ ಪಟ್ಟಣದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವಾರು ವಾಹನಗಳು ಹಾನಿಯಾಗಿದೆ. ನೈಋತ್ಯ ಮಾನ್ಸೂನ್ ಐದು ದಿನಗಳ ನಂತರ ಎಂಟ್ರಿಯಾಗಿದ್ರೂ ರಿಸಲ್ಟ್​ ಮಾತ್ರ ಭಯಾನಕವಾಗಿದೆ. ಮನೆಗಳು ಮತ್ತು ಗುಡಿಸಲುಗಳು ಕೊಚ್ಚಿ ಹೋಗಿದೆ.

ಒಟ್ಟಾರೆ ಮಳೆರಾಯ ಇನ್ನು ಏಳು ದಿನಗಳ ಕಾಲ ಉತ್ತರ ಭಾರತದಲ್ಲಿ ತನ್ನ ಪರಾಕ್ರಮವನ್ನು ಮುಂದುವರೆಸುತ್ತಾನೆ ಅಂತ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆಯಾ ಸರ್ಕಾರಗಳು ಮಳೆ ಅವಘಡ ಎದುರಿಸಲು ಸರ್ವಸನ್ನದ್ಧ​ ಆಗಿವೆ.

ಇದನ್ನೂ ಓದಿ:ಕೊಹ್ಲಿ ವಿರುದ್ಧ ಜನ ಭಾರೀ ಆಕ್ರೋಶ.. ಆದರೂ ಸ್ನೇಹಿತನ ಬಿಟ್ಟು ಕೊಡದ ಕ್ಯಾಪ್ಟನ್ ರೋಹಿತ್ ಶರ್ಮಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

9 ಜನರ ಬಲಿ ಪಡೆದ ಮಳೆರಾಯ.. ಭರ್ಜರಿ ಮಳೆಯಿಂದ ಎಲ್ಲೆಲ್ಲಿ ಏನೆಲ್ಲ ಆಗೋಯ್ತು..!

https://newsfirstlive.com/wp-content/uploads/2024/06/RAIN-29.jpg

Load More