/newsfirstlive-kannada/media/post_attachments/wp-content/uploads/2024/08/RAIN-17.jpg)
ಬೆಂಗಳೂರು: ನಿನ್ನೆ ಬೆಳ್ಳಂಬೆಳಗ್ಗೆ ಸುರಿದ ಮಳೆಗೆ ಸಿಲಿಕಾನ್​​ ಸಿಟಿಯ ದೃಶ್ಯವೇ ಬದಲಾಗಿತ್ತು. ರಸ್ತೆ ಪೂರ್ತಿ ನೀರು ತುಂಬಿ ಕೆರೆಗಳಂತಾಗಿತ್ತು. ಅಂಡರ್​ ಪಾಸ್​​ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಮಳೆಯಿಂದಾಗಿ ಬೆಂಗಳೂರು ಜನರು ಸಂಕಟ ಪಡುತ್ತಿರುವ ದೃಶ್ಯವನ್ನು ಸರ್ಕಾರಕ್ಕೆ ಮನಮುಟ್ಟುವಂತೆ ನ್ಯೂಸ್​ಫಸ್ಟ್​ ವಾಹಿನಿ ಬಿತ್ತರಿಸಿತ್ತು. ಆದರೀಗ ಮುಂದಿನ 4 ದಿನ ಮಳೆಯಾಗಲಿದೆ ಎಂಬ ಮುನ್ಸೂಚನೆ ದೊರೆತಿದೆ. ಹವಾಮಾನ ಇಲಾಖೆ ಮಳೆ ಬರಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ನಾಲ್ಕು ದಿನ ಮಳೆಯಾಗಲಿದೆಯಂತೆ. ಆಗಸ್ಟ್ 16ರವರೆಗೆ ಸಿಲಿಕಾನ್ ಸಿಟಿಯಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದಿದೆ. ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಹೇಳಿದೆ.
ಇದನ್ನೂ ಓದಿ: ಅಪಾಯದಲ್ಲಿ ತುಂಗಭದ್ರಾ ಡ್ಯಾಂ.. ಇಂದು ಬಾಗಿನ ಅರ್ಪಿಸಬೇಕಿದ್ದ ಬದಲು ಮುರಿದ ಗೇಟ್​ ವೀಕ್ಷಣೆಗೆ ಬರಲಿರೋ ಸಿಎಂ
ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಎರಡು ದಿನದ ನಂತರ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಿದೆ. ಸದ್ಯ ಹವಾಮಾನ ಇಲಾಖೆಯಿಂದ ಮಳೆಯ ಕುರಿತಾಗಿ ಮಾಹಿತಿ ನೀಡಿದ್ದು, ಜನರು ಎಚ್ಚರಿಕೆಯಿಂದ ಇರಬೇಕಿದೆ.
ನಿನ್ನೆ ಬೆಳಗ್ಗೆ ಸುರಿದ ಮಳೆಯಿಂದಾಗಿ ಬ್ರ್ಯಾಂಡ್​ ಬೆಂಗಳೂರಿನ ಚಿತ್ರಣವೇ ಬದಲಾಗಿತ್ತು. ನೀರು ಇಂಗಿ ಹೋಗಲು ಜಾಗವಿಲ್ಲದೆ, ರಾಜ ಕಾಳುವೆಯಲ್ಲಿ ಸರಿಯಾಗಿ ನೀರು ಹರಿಯದೆ ರಸ್ತೆ ತುಂಬೆಲ್ಲಾ ನೀರು ನಿಂತಿತ್ತು. ಆದರೀಗ ಮುಂದಿನ 4 ದಿನ ಸತತ ಮಳೆಯಾದರೆ ಬೆಂಗಳೂರಿನ ಪರಿಸ್ಥಿತಿ ಬಗ್ಗೆ ಜನರು ಯೋಚಿಸಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us