newsfirstkannada.com

ಮಳೆಯ ಆರ್ಭಟಕ್ಕೆ ತತ್ತರ; ವಾಸವಿದ್ದ ಮನೆಗಳ ಮೇಲೆ ಭೂಕುಸಿತ, ನಾಲ್ವರು ಸಾವು

Share :

Published September 1, 2024 at 8:06am

    ವಿಶಾಖಪಟ್ಟಣಂಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಜಲಾವೃತ

    ಬಸ್ ನಿಲ್ದಾಣದಲ್ಲಿ ಮೂರ್ನಾಲ್ಕು ಅಡಿಗಳಷ್ಟು ನಿಂತ ಮಳೆನೀರು

    ಎಂಟಕ್ಕೆ ಏರಿಕೆ ಕಂಡ ಮಳೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ

ಮಳೆಯ ಆರ್ಭಟಕ್ಕೆ ವಿಶಾಖಪಟ್ಟಣಂನ ಜನ ವಸತಿ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಎಲ್ಲೆಲ್ಲೂ ಮಳೆ ನೀರು ಆವರಿಸಿದೆ. ನೀರಲ್ಲಿ ಸಿಲುಕಿದ್ದವರ ರಕ್ಷಣೆ ವೇಳೆ ದೊಡ್ಡ ಅನಾಹುತ ತಪ್ಪಿದೆ. ಜನರನ್ನ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಗಳಿಗೆ ಕರೆತರುವಾಗ ಕೆಲವರು ಕೊಚ್ಚಿ ಹೋಗಿದ್ದಾರೆ. ಈ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಇನ್ನು ಕೆಲವರನ್ನು ಸುರಕ್ಷಿವಾಗಿ ರಕ್ಷಿಸಲಾಗಿದೆ.

ಇದನ್ನೂ ಓದಿ: ಐವರು ಟ್ರೈನಿ ಪೊಲೀಸ್​ ಸಬ್​​ ಇನ್​ಸ್ಪೆಕ್ಟರ್​​ಗಳು ಅರೆಸ್ಟ್​​; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಹೈದರಾಬಾದ್ -ವಿಜಯವಾಡ ಹೆದ್ದಾರಿಯ ರಸ್ತೆ ಮೇಲೆ ಸವಾರರ ಹೆಣಗಾಟದ ಪರಿಸ್ಥಿತಿ ಕೇಳುವವರೇ ಇಲ್ಲದಂತಾಗಿತ್ತು. ಇದಷ್ಟೇ ಅಲ್ಲ, ವಿಶಾಖಪಟ್ಟಣಂನ ಕೆಲ ಕಾಲೋನಿಗಳು ಕೆರೆಗಳಂತೆ ಬಾಸವಾಗ್ತಿತ್ತು. ಮೊಗಲ್ರಾಜಪುರಂ ಕಾಲೋನಿಯಲ್ಲಿ ನಿರಂತರ ಮಳೆಗೆ ಭೂಕುಸಿತ ಭಾರೀ ಹಾನಿಯನ್ನುಂಟು ಮಾಡಿದೆ. ಗುಡ್ಡದ ಮಣ್ಣು ಜರುಗಿ ವಾಸವಿದ್ದ ಮನೆಗಳ ಮೇಲೆ ಬಿದ್ದ ಪರಿಣಾಮ ನಾಲ್ವರು ಬಲಿಯಾಗಿದ್ದಾರೆ. ಮಳೆಯ ಹೊಡೆತಕ್ಕೆ ವಿಶಾಖಪಟ್ಟಣಂನ ಬೀಚ್ ರಸ್ತೆಯಲ್ಲಿರುವ ಕಾಳಿಮಾತಾ ದೇವಸ್ಥಾನದ ಬಳಿಯ ಫುಟ್‌ಪಾತ್ ಛಿದ್ರ ಛಿದ್ರವಾಗಿದೆ.

ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಓಡಾಡೋ ವಿಜಯವಾಡದ ಪಂಡಿತ್ ನೆಹರು ಬಸ್ ನಿಲ್ದಾಣದಲ್ಲಿ ರಸ್ತೆನೇ ಕಾಣದಷ್ಟು ನೀರು ಆವರಿಸಿತ್ತು. ಸುಮಾರು ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತಿದ್ದು, ಅದರಲ್ಲಿ ಬಸ್​ಗಳು ಈಜುತ್ತಿದ್ದಂತೆ ಕಾಣ್ತಿತ್ತು. ಆಂಧ್ರಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಎಂಟು ಜನರು ಪ್ರಾಣ ಕಳೆದುಕೊಂಡಿದ್ದು ಮೃತರ ಕುಟುಂಬಕ್ಕೆ ಆಂಧ್ರ ಸಿಎಂ ಚಂದ್ರಬಾಬುನಾಯ್ಡು ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಒಟ್ಟಾರೆ ನಲುಗಿರೋ ಆಂಧ್ರದಲ್ಲಿ ಇನ್ನೆರಡು ದಿನ ಮಳೆಯಾಗಲಿದೆ. ಆಂಧ್ರಪ್ರದೇಶದ ಜೊತೆಜೊತೆಗೆ ತೆಲಂಗಾಣಕ್ಕೂ ಹೈ ಅಲರ್ಟ್ ಮುನ್ಸೂಚನೆಯನ್ನ ಕೊಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಯ ಆರ್ಭಟಕ್ಕೆ ತತ್ತರ; ವಾಸವಿದ್ದ ಮನೆಗಳ ಮೇಲೆ ಭೂಕುಸಿತ, ನಾಲ್ವರು ಸಾವು

https://newsfirstlive.com/wp-content/uploads/2024/09/Andra-rain1.jpg

Load More