ನಗರದ ಹಲವು ಅಂಡರ್‌ಪಾಸ್‌ಗಳಲ್ಲಿ ನೀರೋ ನೀರು
ಎಡಬಿಡದೆ ಸುರಿದ ಮಳೆಗೆ ವಾಹನ ಸವಾರರು ಪರದಾಟ
ದಕ್ಷಿಣ ಒಳನಾಡಿಗೆ 3 ದಿನ ಯಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ಹಲವು ಅವಾಂತರಗಳೇ ಸೃಷ್ಟಿಯಾಗಿದೆ. ಬೆಂಗಳೂರಲ್ಲಿ ಒಂದು ಗಂಟೆ ಮಳೆ ಬಂದ್ರೂ ಸಾಕು ಜನ ಜೀವನವೇ ಅಲ್ಲೋಲ ಕಲ್ಲೋಲ ಆಗಿಬಿಡುತ್ತೆ. ಆದರೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ರಾಜ್ಯ ರಾಜಧಾನಿಯ ಜನರಿಗೆ ಸಂಕಷ್ಟ ತಂದೊಡ್ಡಿದ್ದಾನೆ.
ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಆರ್ಭಟ
ನಿನ್ನೆ ಸಂಜೆಯಿಂದ ಸುರಿದ ಭಾರೀ ಮಳೆಗೆ ಶ್ರೀರಾಂಪುರ ಅಂಡರ್ ಪಾಸ್ ಜಲಾವೃತವಾಗಿತ್ತು. ನೀರು ನಿಂತಿದ್ರೂ ಕೂಡ ಅದರಲ್ಲೇ ವಾಹನ ಸವಾರರು ಸಂಚರಿಸಿದ್ದರು. ಅಪಾರ ಪ್ರಮಾಣ ನೀರು ನಿಂತಿದ್ದರಿಂದ ಬೈಕ್ ಸವಾರರು ಪರದಾಡುವಂತ ಪರಿಸ್ಥಿತಿ ಎದುರಾಯ್ತು.
ನಗರದ ಹಲವು ಅಂಡರ್‌ಪಾಸ್‌ಗಳಲ್ಲಿ ನೀರೋ ನೀರು
ನಗರದ ಹಲವು ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿ ಸಾಕಷ್ಟು ಅವಾಂತರ ಸೃಷ್ಟಿಸಿತ್ತು. ಬಾಣಸವಾಡಿ ಬಳಿಯ ಲಿಂಗರಾಜಪುರಂ ಫ್ಲೈ ಓವರ್ ಕೂಡ ಜಲಾವೃತವಾಗಿದೆ. ಫ್ರೆಜರ್ ಟೌನ್‌ನಿಂದ ಹೆಣ್ಣೂರು ಮುಖ್ಯ ರಸ್ತೆಯ ಮೇಲ್ಸೇತುವೆ ಕೂಡ ನೀರಿನಿಂದ ಆವೃತವಾಗಿತ್ತು. ಇನ್ನು, ಕುರುಬರಹಳ್ಳಿಯಲ್ಲಿ ನೀರು ಭಾರೀ ಮಳೆಯಿಂದಾಗಿ ಮನೆ ನೀರು ನುಗ್ಗಿ ಕುಟುಂಬಸ್ಥರು ಪರದಾಡುವಂತಾಯ್ತು. ಪೀಠೋಪಕರಣಗಳು, ಗ್ಯಾಸ್, ದಿನಸಿ ವಸ್ತುಗಳೆಲ್ಲಾ ನೀರು ಪಾಲಾಗಿದ್ದು, ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ರಾತ್ರಿಯೆಲ್ಲಾ ನೀರು ಹೊರಹಾಕುವಲ್ಲಿ ನಿರತರಾಗಿದ್ದರು.
ಮಳೆ ಅಬ್ಬರಕ್ಕೆ ಧರೆಗುರುಳಿದ ಮರಗಳು
ನಗರದ ನಾಲ್ಕು ಕಡೆಗಳಲ್ಲಿ ಮಳೆಗೆ ಮರಗಳು ಧರೆಗುರುಳಿವೆ. ಬೆಂಗಳೂರು ಪೂರ್ವ ವಲಯ ಹಾಗೂ ಮಹದೇವಪುರ ವಲಯದಲ್ಲಿ ಒಂದೊಂದು ಮರಗಳು ಬಿದ್ದಿದ್ದು, ಬೆಂಗಳೂರು ದಕ್ಷಿಣದಲ್ಲಿ ಎರಡು ಮರಗಳು ಧರೆಗುರುಳಿವೆ. ಅಷ್ಟೇ ಅಲ್ಲದೇ, ರಸ್ತೆಯಲ್ಲಿ ಡ್ರೈನೇಜ್ ನೀರು ನಿಂತಿದ್ದು ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು.
ಬಿಬಿಎಂಪಿ ವಾರ್ ರೂಂಗೆ ಡಿ.ಕೆ ಶಿವಕುಮಾರ್ ಭೇಟಿ
ಮಳೆ ಹಾನಿ ಪರಿಸ್ಥಿತಿ ಅವಲೋಕನಕ್ಕೆ ಖುದ್ದು ಫೀಲ್ಡಿಗಿಳಿದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಬಿಬಿಎಂಪಿ ವಾರ್ ರೂಂಗೆ ಭೇಟಿ ಕೊಟ್ಟಿದ್ದರು. ಸ್ಥಳದಲ್ಲೇ ಕುಳಿತು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ವಲಯವಾರು ಅಧಿಕಾರಿಗಳ ಜೊತೆಗೆ ದೂರವಾಣಿ ಮೂಲಕ ಸಮಸ್ಯೆ ಕೇಳಿದ್ದರು. ಅಲ್ಲದೇ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಕೂಡ ಮಾಹಿತಿ ನೀಡಿದ್ದರು. ಏನು ಸಮಸ್ಯೆ ಆಗದಂತೆ ಅಧಿಕಾರಿಗಳು ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ಇನ್ನು, ಬೆಂಗಳೂರಿನಲ್ಲಿ ಮಳೆಹಾನಿ ಸಮಸ್ಯೆ ಕೇಳೋಕೆ ವಾರ್ ರೂಂನಲ್ಲಿ ಕೇವಲ ಇಬ್ಬರೇ ಸಿಬ್ಬಂದಿ ಮಾತ್ರ ಇದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಂದಾಗ ಇಬ್ಬರೇ ಸಿಬ್ಬಂದಿ ಇರೋದು ಕಂಡುಬಂತು. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲೂ ಕೂಡ ಮಳೆಯಾಗಿದೆ. ದಾವಣಗೆರೆ ಹಲವೆಡೆ ಕೂಡ ವ್ಯಾಪಕವಾಗಿ ಮಳೆ ಸುರಿದಿದ್ದರಿಂದ, ಚನ್ನಗಿರಿ ತಾಲೂಕು ಕೃಷಿ ಇಲಾಖೆ ಸಂಪೂರ್ಣವಾಗಿ ಜಲಾವೃತವಾಗಿದೆ. ಇತ್ತ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನಾದ್ಯಂತ ಗುಡುಗು ಸಹಿತ ಸುರಿದ ಮಳೆಗೆ 30ಕ್ಕೂ ಅಧಿಕ ಕುರಿಗಳು ಬಲಿಯಾಗಿವೆ.
ಮಳೆ ಬರುತ್ತೆ ಎಂದು ಮುಂಚೆ ಗೊತ್ತಿತ್ತು. ಹೀಗಾಗಿ ಈ ಬಗ್ಗೆ ಮೀಟಿಂಗ್ ಮಾಡಿದ್ದೇನೆ. ನಮ್ಮ ಅಧಿಕಾಗಳಿಗೆ ಮಾಹಿತಿ ನೀಡಿದ್ದೇವೆ. ಜೊತೆಗೆ ಅಲರ್ಟ್ ಆಗಿರಲು ಹೇಳಿದ್ದೇವೆ. ಮರಗಳು ಉರುಳಿದರೆ, ಟ್ರಾಫಿಕ್ ಜಾಮ್ ಆದರೆ ಎಲ್ಲ ಅಧಿಕಾರಿಗಳು ನೋಡಿ ಕೊಳ್ಳುತ್ತಾರೆ. ಎಲ್ಲೆಲ್ಲಿ ಮಳೆ ನೀರಿನಿಂದ ಸಮಸ್ಯೆ ಎದುರಾಗುತ್ತೆ ಅಲ್ಲಿ ಹೆಚ್ಚಿನ ಗಮನಹರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ-ಡಿಸಿಎಂ ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿ
ತುಮಕೂರಿನಲ್ಲೂ ಕೂಡ ವರುಣನ ಆರ್ಭಟಕ್ಕೆ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಯ್ತು. ಅಂತರಸನಹಳ್ಳಿ ಅಂಡರ್ ಬ್ರಿಡ್ಜ್ ಸಂಪೂರ್ಣವಾಗಿ ಜಲಾವೃತವಾಗಿತ್ತು. ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್‌ನಲ್ಲಿ ಆ್ಯಂಬುಲೆನ್ಸ್ ಸೇರಿ ಹಲವು ವಾಹನಗಳು ಸಿಲುಕಿದ್ದವು. ನೀರಿನಲ್ಲಿ ವಾಹನಗಳು ಕೆಟ್ಟು ನಿಂತಿದ್ದು, ಆಟೋ, ಕಾರನ್ನ ತಳ್ಳಿಕೊಂಡು ಹೋಗೋಬೇಕಾಯ್ತು. ಹುಬ್ಬಳ್ಳಿಯಲ್ಲೂ ಎಡೆಬಿಡದೇ ಸುರಿದ ಮಳೆಗೆ ರಸ್ತೆಗಳ ತುಂಬೆಲ್ಲಾ ನೀರು ನಿಂತು ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಶಾಲಾ ಕಾಲೇಜು ಮಕ್ಕಳು ಪರದಾಡುವಂತಾಯ್ತು. ಇನ್ನು, ರಣ ಬಿಸಲಿಗೆ ತತ್ತರಿಸಿದ್ದ ಗದಗದಕ್ಕೆ ವರುಣ ತಂಪೆರೆದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ರಾಜ್ಯದಲ್ಲಿ ಒಂದು ವಾರ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಮುಂದಿನ 3 ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಲ್ಲಿ ಮಳೆ ಸಾಧ್ಯತೆ ಇರಲಿದೆ. ಕರಾವಳಿಗೆ ಇವತ್ತು ಯಲ್ಲೋ ಅಲರ್ಟ್ ಇದ್ದು, ದಕ್ಷಿಣ ಒಳನಾಡಿಗೆ ಮೂರು ದಿನ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಒಟ್ಟಿನಲ್ಲಿ ಒಂದೆಡೆ ಮಳೆರಾಯ ಸಂತಸ ತಂದರೆ, ಮತ್ತೊಂದೆಡೆ ಸಾಕಷ್ಟು ಅವಾಂತರಗಳನ್ನೇ ಸೃಷ್ಠಿ ಮಾಡಿರೋದಂತೂ ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ