newsfirstkannada.com

ಮತ್ತೆ ಬೆಂಗಳೂರು ನಡುಗಿಸಿದ ಮಳೆರಾಯ.. ಇನ್ನೂ ಎಷ್ಟು ದಿನ ಮಳೆ ಬರಲಿದೆ ಗೊತ್ತಾ..?

Share :

13-06-2023

  ರಸ್ತೆಗಳಲ್ಲಿ ಹೋಳೆಯಂತೆ ಹರಿದ ಮಳೆ ನೀರು

  ಟ್ರಾಫಿಕ್​​ ಜಾಮ್​ನಿಂದ ಪರದಾಡಿದ ಸವಾರರು

  ಎಲ್ಲೆಲ್ಲಿ ಎಷ್ಟೆಷ್ಟು ಮಳೆ?

ರಾಜ್ಯದಲ್ಲಿ ಮಳೆ ತನ್ನ ಆರ್ಭಟ ಶುರು ಮಾಡ್ಕೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ತನ್ನ ವೇಗದಿಂದ ಅಬ್ಬರಿಸಿ ಬೊಬ್ಬಿರಿದ ಮಳೆ ರಾಜಧಾನಿ ಜನರನ್ನ ಹಿಂಡಿ ಹಿಪ್ಪೆ ಮಾಡಿದೆ.

ಒಂದು ವಾರ ತಡವಾಗಿ ಕೇರಳ ರಾಜ್ಯಕ್ಕೆ ಮುಂಗಾರಿನ ಆಗಮನ ಆಗಿದೆ. ಜೂನ್​ 1 ನೇ ತಾರೀಖು ಕೇರಳವನ್ನ ಪ್ರವೇಶ ಮಾಡಬೇಕಿದ್ದ ಮುಂಗಾರು ಮಾರುತಗಳು ತಡವಾಗಿ ಎಂಟ್ರಿ ಕೊಟ್ಟಿವೆ. ಆದ್ರೆ ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದ ಮಳೆಯನ್ನ ತಂದಿಲ್ಲವಾದ್ರೂ, ನಿರೀಕ್ಷಿತ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಆಶಾಭಾವನೆ ವ್ಯಕ್ತಪಡಿಸ್ತಿದೆ.

ಸಿಲಿಕಾನ್ ಸಿಟಿಯಲ್ಲಿ‌ ಸಂಜೆ ವೇಳೆಗೆ ಅಬ್ಬರಿಸಿದ ಮಳೆರಾಯ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಮರೆಯಾಗಿದ್ದ ಮಳೆರಾಯ ನಿನ್ನೆ ದಿಢೀರ್​​​ ಎಂಟ್ರಿಕೊಟ್ಟು ಆರ್ಭಟಿಸಿದ್ದಾನೆ. ರಾತ್ರಿ ನಗರದ ವಿವಿಧ ಬಡಾವಣೆಗಳಲ್ಲಿ ಗಂಟೆಗೂ ಹೆಚ್ಚು ಕಾಲ ಒಂದೇ ಸಮನೇ ಮಳೆ ಸುರಿದಿದೆ. ಧಾರಾಕಾರ ಮಳೆಯಿಂದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿದಿದೆ.

ಗುಡುಗು ಮಿಂಚು ಸಹಿತ ಮಳೆರಾಯ ಅಬ್ಬರಿಸಿದ್ದು, ವಸಂತನಗರ, ಹೆಬ್ಬಾಳ, ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೊರೇಷನ್, ಕೆ.ಆರ್ ಮಾರ್ಕೆಟ್, ಸುತ್ತಮುತ್ತಲಿನ ಪ್ರದೇಶ ಸೇರಿ ಬಹುತೇಕ ಬೆಂಗಳೂರಿನಲ್ಲಿ ಗುಡುಗು ಸಹಿತ ಜೋರು ಮಳೆ ಬಿದ್ದಿದೆ.. ಮಳೆಗೆ ಪ್ರಮುಖ ರಸ್ತೆಗಳು, ಅಂಡರ್‌ ಪಾಸ್‌ಗಳಲ್ಲಿ ನೀರು ಉಕ್ಕಿ ಹರಿದಿದೆ. ಪ್ರಮುಖ ರಸ್ತೆಗಳು ಹಾಗೂ ಒಳ ರಸ್ತೆಗಳಲ್ಲಿ ಕಾಲುವೆಗಳು ಜಲಮಯ ಆಗಿತ್ತು. ಕಾಲುವೆಯಿಂದ ಹೊರಬಂದ ನೀರು, ರಸ್ತೆಯಲ್ಲಿ ನದಿಯಂತೆ ಉಕ್ಕಿತು..

ರಸ್ತೆಗಳಲ್ಲಿ ಹೋಳೆಯಂತೆ ಹರಿದ ಮಳೆ ನೀರು

ಮಳೆ ಕಾರಣಕ್ಕೆ ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತು, ವಿಪರೀತ ದಟ್ಟಣೆಗೂ ಕಾರಣ ಆಯ್ತು.. ಕಚೇರಿ ಹಾಗೂ ಇತರೆ ಕೆಲಸ ಮುಗಿಸಿ ಸಂಜೆ ಮನೆಯತ್ತ ಹೊರಟಿದ್ದ ಜನ, ಮಳೆಯಿಂದ ಸಂಕಷ್ಟ ಅನುಭವಿಸಿದ್ರು.. ಕೆಲವೆಡೆ ರಸ್ತೆ ಸಂಚಾರಕ್ಕೆ ತೊಂದರೆಯಾದರೆ, ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗಿತ್ತು. ಬೀದಿ ಬದಿ ವ್ಯಾಪಾರಿಗಳಿಗೆ ಮಳೆಯಿಂದ ತೊಂದರೆ ಉಂಟಾಯಿತು.
ಐಟಿ ಸಿಟಿ.. ಗಾರ್ಡನ್​ ಸಿಟಿ ಬೆಂಗಳೂರು ಕೆಲವೇ ನಿಮಿಷಗಳ ಕಾಲ ಸುರಿದ ಮಳೆಯಿಂದ ರಸ್ತೆಗಳು ಕೆರೆಯಂತಾದ್ವು.. ಇನ್ನು ಅಂಡರ್​ ಪಾಸ್​ಗಳ ಕಥೆಗಳನ್ನ ಅಂತೂ ಹೇಳೋದೇ ಬೇಡ.. ಅಂದಹಾಗೆ ನಿನ್ನೆ ಸುರಿದ ಮಳೆ ದಾಖಲೆಯನ್ನೇ ಬರೆದಿದೆ..

ಎಲ್ಲೆಲ್ಲಿ ಎಷ್ಟೆಷ್ಟು ಮಳೆ?

 • ಸ್ಥಳ ಮಳೆ ಪ್ರಮಾಣ
 • ವರ್ತೂರು 88 ಮಿಲಿ ಮೀಟರ್
 • ಮಾರತ್ತಹಳ್ಳಿ 88.5 ಮಿಲಿ ಮೀಟರ್
 • HAL ಏರ್‌ಪೋರ್ಟ್ (ಪೂರ್ವ) 83.0 ಮಿಲಿ ಮೀಟರ್
 • ಮಹಾದೇವಪುರ 49.0 ಮಿಲಿ ಮೀಟರ್
 • ವನ್ನಾರ್​ಪೇಟೆ (ಪೂರ್ವ ವಲಯ) 41.5 ಮಿಲಿ ಮೀಟರ್
 • ಬೆಳ್ಳಂದೂರು 38.0 ಮಿಲಿ ಮೀಟರ್
 • ಸಂಪಂಗಿರಾಮನಗರ 34.0 ಮಿಲಿ ಮೀಟರ್
 • ವಿವಿ ಪುರ 31.0 ಮಿಲಿ ಮೀಟರ್
 • ಕೋರಮಂಗಲ 30.5 ಮಿಲಿ ಮೀಟರ್
 • ದೊಡ್ಡನೆಕ್ಕುಂದಿ 28 ಮಿಲಿ ಮೀಟರ್
 • ಇನ್ನೂ ಮೂರು ದಿನ ಬೆಂಗಳೂರಲ್ಲಿ ಮಳೆ ಆಟ!

ಕೇವಲ ನಿನ್ನೆಯಷ್ಟಕ್ಕೆ ಮಳೆ ಆಟ ಮುಗಿದಿಲ್ಲ.. ಜೂನ್ 16 ರವರೆಗೆ ನಗರದಲ್ಲಿ ಹೀಗೆ ಜೋರು ಮಳೆಯ ವಾತಾವರಣ ಕಂಡುಬರಲಿದೆ.. ನಿತ್ಯವು ಬೆಳಗ್ಗೆ ಸೂರ್ಯನ ಉರಿ ಪ್ರತಾಪ ದರ್ಶನವಾದ್ರೆ ಸಂಜೆ ನಂತ್ರ ವ್ಯಾಪಕ ಮಳೆಯ ಪ್ರದರ್ಶನವಾಗಲಿದೆ.. ಈ ಕುರಿತು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ ನೀಡಿದೆ. ಒಟ್ಟಾರೆ, ಮುಂಬರುವ ಮಳೆಯ ದಿನಗಳಲ್ಲಿ ಎಚ್ಚರದಿಂದ ಇರಬೇಕು.. ಅದ್ರಲ್ಲೂ ಬೆಂಗಳೂರಿನ ಜನ ಮಳೆ ಬಂದಾಗ ಮೈಯೆಲ್ಲಾ ಕಣ್ಣಾಗಿರಬೇಕು.. ಯಾಕೆಂದ್ರೆ ಇತ್ತೀಚಿಗೆ ಮಳೆ ಅನ್ನೋದು ಬೆಂಗಳೂರಿಗೆ ಶಾಪವಾಗಿ ಪರಿಣಮಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಬೆಂಗಳೂರು ನಡುಗಿಸಿದ ಮಳೆರಾಯ.. ಇನ್ನೂ ಎಷ್ಟು ದಿನ ಮಳೆ ಬರಲಿದೆ ಗೊತ್ತಾ..?

https://newsfirstlive.com/wp-content/uploads/2023/06/BNG_RAIN-4.jpg

Load More