ಇಂದು ಕೂಡ ಉದ್ಯಾನ ನಗರದೆಲ್ಲೆಡೆ ಭಾರೀ ಮಳೆಯಾಗುತ್ತಿದೆ
ನಿನ್ನೆ ಮಧಾಹ್ನ ಆರಂಭವಾಗಿದ್ದ ಮಳೆ ತಡರಾತ್ರಿವರೆಗೂ ಸುರಿದಿತ್ತು
3 ದಿನ ಮಳೆ ಆಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಸೂಚನೆ
ಬೆಂಗಳೂರು: ಬೆಳಗ್ಗೆಯಿಂದಲೂ ಉದ್ಯಾನ ನಗರಿಯಲ್ಲಿ ತಂಪು ವಾತಾವರಣ, ಹಾಗೂ ಸ್ವಲ್ಪ ಶೆಕೆ ಇತ್ತು. ಇದರ ಜೊತೆಗೆ ಇದೀಗ ಮಳೆ ಪ್ರಾರಂಭವಾಗಿದ್ದು ವಾಹನ ಸವಾರರು, ವ್ಯಾಪಾರಸ್ಥರು ತೊಂದರೆಗೆ ಒಳಗಾಗಿದ್ದಾರೆ. ರಾಜಧಾನಿಯಲ್ಲಿ ಸೋಮವಾರ ಮಧಾಹ್ನದಿಂದ ಆರಂಭವಾಗಿದ್ದ ಮಳೆ ತಡರಾತ್ರಿವರೆಗೂ ಸುರಿದಿತ್ತು. ಕೊಂಚ ಬಿಡುವು ಕೊಟ್ಟು ವರುಣರಾಯ ಮತ್ತೆ ಆಗಮಿಸಿದ್ದಾನೆ.
ಧಾರಾಕಾರ ಮಳೆಗೆ ಹಲವೆಡೆ ರಸ್ತೆಗಳಲ್ಲಿ ಮಳೆ ನೀರು ಸ್ವಿಮ್ಮಿಂಗ್ ಪೂಲ್ ನಂತೆ ಕಂಡು ಬಂದಿದೆ. ಶೇಷಾದ್ರಿಪುರಂ ರಸ್ತೆಯಲ್ಲಿ ನೀರು ನಿಂತಿದ್ರಿಂದ ವಾಹನ ಸವಾರರು, ಚಾಲಕರು ಹೈರಾಣಾಗಿದ್ದಾರೆ.
ಶಿವಾನಂದ, ಮಲ್ಲೇಶ್ವರಂ, ಹೆಬ್ಬಾಳ, ಟೌನ್ಹಾಲ್, ಶಿವಾಜಿನಗರ, ಮಾರ್ಕೆಟ್, ವಿಧಾನಸೌಧ, ಮೇಖ್ರಿ ಸರ್ಕಲ್, ಅರಮನೆ ರೋಡ್, ಕಾರ್ಪೋರೇಶನ್, ಸುಧಾಮನಗರ, ಕಬ್ಬನ್ ಪಾರ್ಕ್ ಸೇರಿದಂತೆ ನಗರದೆಲ್ಲೆಲ್ಲ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಇದರಿಂದ ವ್ಯಾಪಾರಸ್ಥರು, ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಅಲ್ಲದೇ ಶಾಲೆ ಬೆಲ್ ಬಾರಿಸಿದ ತಕ್ಷಣ ಮನೆಗೆ ತೆರಳಲು ರೆಡಿಯಾಗಿದ್ದ ಮಕ್ಕಳು ಮಳೆಯಿಂದಾಗಿ ಇನ್ನು ಕೆಲವರು ಶಾಲೆಯಲ್ಲಿದ್ದಾರೆ. ಎರಡು ದಿನಗಳಿಂದ ಬೆಂಗಳೂರಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಇನ್ನೂ 3 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಮೊನ್ನೆ ಹೇಳಿತ್ತು.
Rain starts in Bangalore pic.twitter.com/re18i863uL
— Chandramohan S (@chandratumkur) November 7, 2023
ಬೆಂಗಳೂರಿನ ಹೊರವಲಯದಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆಗೆ ಮಳೆ ಆರಂಭವಾಗಿತ್ತು. ಸಂಜೆ 4 ಗಂಟೆ ಬಳಿಕ ಹೆಚ್ಚಾದ ಮಳೆ ಆ ಬಳಿಕ ಜಿಟಿ ಜಿಟಿ ಎಂದು ಸಂಜೆ 7ರವರೆಗೂ ಸುರಿಯಿತು. ನಂತರ ಕೊಂಚ ಬಿಡುವು ಕೊಟ್ಟು ಸುರಿಯಲು ಪ್ರಾರಂಭಿಸಿದ ಮಳೆ ಇಡೀ ರಾತ್ರಿಯೆಲ್ಲ ಬಂದಿದೆ. ಹೀಗಾಗಿ ಆಫೀಸ್ನಿಂದ ಮನೆಗೆ ತೆರಳುತ್ತಿದ್ದವರು ಟ್ರಾಫಿಕ್ನಲ್ಲಿ ಸಿಕ್ಕು ಸಾಕಷ್ಟು ಸಮಸ್ಯೆ ಎದುರಿಸಿ, ಒಂದು ಗಂಟೆ ತಡವಾಗಿ ಮನೆ ಸೇರಿದ್ದಾರೆ. ಇದೇ ರೀತಿ ಇಂದು ಕೂಡ ಉದ್ಯಾನ ನಗರದೆಲ್ಲೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ