newsfirstkannada.com

ಧೋ ಎಂದು ಸುರಿದ ಮಳೆ ಬೆಂಗಳೂರು ತತ್ತರ.. ಎಲ್ಲೆಲ್ಲಿ ಏನಾಯ್ತು..? ನೋಡಿ ಈ ಅವಸ್ಥೆ..!

Share :

07-11-2023

    ಇಡೀ ದಿನ ಧೋ ಎಂದು ಸುರಿದ ಜೋರು ಮಳೆ

    ಭಾರೀ ಮಳೆಗೆ ಇಡೀ ಬೆಂಗಳೂರು ಸಿಟಿ ತತ್ತರ..!

    ಮನೆ ಮತ್ತು ಹೋಟೆಲ್​ಗಳಿಗೆ ನುಗ್ಗಿದ ಮಳೆ ನೀರು

ಬೆಂಗಳೂರು: ನಿನ್ನೆ ಸಂಜೆ ಶುರುವಾದ ಮಳೆ ರಾತ್ರಿಯಿಡಿ ಸುರಿದು. ಇವತ್ತು ಕೂಡ ಮುಂದುವರಿದಿದೆ. ರಸ್ತೆಗಳೆಲ್ಲಾ ಜಲಾವೃತವಾದ್ರೆ, ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡುವಂತಾಗಿದೆ. ಅಂಗಡಿ-ಆಸ್ಪತ್ರೆಗಳಿಗೂ ಜಲದಿಗ್ಬಂಧನವಾಗಿದೆ.‌ ಮನೆ ಮುಂದೆ ನಿಲ್ಲಿಸಿದ ಕಾರು-ಬೈಕು ಮುಳುಗಿ ಹೋಗಿದೆ. ಬೆಳಗ್ಗೆಯಾದ್ರೂ ಮನೆಗೆ ಬಂದ ನೀರು ಹೊರಹಾಕಲು ಜನರು ಪರದಾಡಿದ್ರು.

ಸಹಕಾರ ನಗರದ ಸಿಟಿ ಮಾರ್ಕೆಟ್ ಹಿಂಭಾಗ ಇರುವ ಈ ಬೇಬಿ ಕೇರ್ ಶಾಪ್ ಸ್ಥಿತಿ ಇದು. ಅಂಗಡಿ ತುಂಬ ನೀರು ತುಂಬಿದೆ.‌ ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.‌ ಬೆಳಗ್ಗೆಯೆಲ್ಲ ನೀರು ಹೊರಹಾಕಿ ಮಾಲೀಕರು ಸುಸ್ತಾಗಿ ಹೋಗಿದ್ದಾರೆ. ಪ್ರತಿ ಬಾರೀ ಮಳೆ ಬಂದಾಗಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಂತೆ.‌ ಹೀಗಾಗಿ, ಡ್ರೈನೇಜ್ ನೀರು ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ ಅಂತ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹಕಾರ‌ ನಗರ ಮುಖ್ಯ ರಸ್ತೆಯಲ್ಲಿರುವ ದೊಣ್ಣೆ ಬಿರಿಯಾನಿ ಹೊಟೇಲ್ ಸ್ಥಿತಿ ಇದು. ನೀರಿನಿಂದ ಇಡೀ ಹೊಟೇಲ್ ಜಲಾವೃತವಾಗಿದೆ. ಇನ್ನೂ ಸಹಾಕಾರ ನಗರದ ಜೆ. ಬ್ಲಾಕ್ ನ 40ಕ್ಕೂ ಹೆಚ್ಚು ಅಂಗಡಿ-ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳು ಗೋಳಾಡುವಂತಾಗಿತ್ತು.

ಒಟ್ನಲ್ಲಿ ಇವತ್ತು ಕೂಡ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ವಿಧಾನಸೌಧ, ಗಾಂಧಿನಗರ, ಕಾರ್ಪೊರೇಷನ್ ಸರ್ಕಲ್, ಮೆಜೆಸ್ಟಿಕ್, ಮೇಕ್ರಿ ಸರ್ಕಲ್ ಸುತ್ತಮುತ್ತ ಟ್ರಾಫಿಕ್​ ಜಾಮ್​ ಕೂಡ ಉಂಟಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧೋ ಎಂದು ಸುರಿದ ಮಳೆ ಬೆಂಗಳೂರು ತತ್ತರ.. ಎಲ್ಲೆಲ್ಲಿ ಏನಾಯ್ತು..? ನೋಡಿ ಈ ಅವಸ್ಥೆ..!

https://newsfirstlive.com/wp-content/uploads/2023/11/BNG_RAIN-4.jpg

Load More