newsfirstkannada.com

ಯಮುನಾ ನದಿ ನೀರಿಗೆ ಬೇಸತ್ತ ಜನ.. ಇಂದು ಕೂಡ ಭರ್ಜರಿ ಮಳೆ ಆಗುವ ಸೂಚನೆ.. ದೆಹಲಿ, ಹಿಮಾಚಲ ಪ್ರದೇಶದಲ್ಲಿ ಹೈ ಅಲರ್ಟ್​..!

Share :

16-07-2023

  ಮಳೆ ನೀರಿನಿಂದ ತುಂಬಿದ ನಗರದ ರಸ್ತೆಗಳು, ಸವಾರರ ಪರದಾಟ

  ಸುಪ್ರೀಂಕೋರ್ಟ್​, ರಾಜಘಾಟ್ ಸೇರಿ ಎಲ್ಲೆಡೆ ಯಮುನಾ ನೀರು..!

  ಯಮುನಾ ಬ್ಯಾರೇಜ್​ನ 5 ಗೇಟ್​ ತೆರೆಯಲು ಪ್ರಯತ್ನ- ಡೆಲ್ಲಿ ಸಿಎಂ

ಕೆಲ ಕಾಲ ಬ್ರೇಕ್ ಪಡೆದಿದ್ದ ಮಳೆರಾಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಅಬ್ಬರಿಸಿದ್ದಾನೆ. ಈಗಾಗಲೇ ಯಮುನಾ ನದಿ ಅದ್ವಾನ ಸೃಷ್ಟಿಸಿದ್ದು ಇದರ ಜೊತೆಗೆ ಮಳೆರಾಯ ಮತ್ತೆ ಎಂಟ್ರಿ ಕೊಟ್ಟಿರುವುದು ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ವರುಣಾರ್ಭಟಕ್ಕೆ ಉತ್ತರ ಭಾರತ ತತ್ತರಿಸಿದೆ. ಅದರಲ್ಲೂ ಯಮುನಾ ನದಿ ಉಗ್ರಾವತಾರಕ್ಕೆ ದೆಹಲಿ ಕಂಡು-ಕೇಳರಿಯದಷ್ಟು ಪ್ರವಾಹದ ನೀರಿನಲ್ಲಿ ಸಿಲುಕಿದೆ. ಸುಪ್ರೀಂಕೋರ್ಟ್, ರಾಜಘಾಟ್ ಸೇರಿದಂತೆ ಎಲ್ಲ ಕಡೆ ನೀರು ನುಗ್ಗಿ ಅದ್ವಾನವನ್ನೇ ಸೃಷ್ಟಿಸಿದೆ. ಇದರಿಂದ ನೂರಾರು ಜನರ ಜೀವನ ಅಸ್ತವ್ಯಸ್ತವಾಗಿದೆ.

ದೆಹಲಿಯಲ್ಲಿ ಮತ್ತೆ ಅಬ್ಬರಿಸಿದ ವರುಣ

ಕೆಲ ಸಮಯ ಬ್ರೇಕ್ ಪಡೆದಿದ್ದ ವರುಣ ದೆಹಲಿಯಲ್ಲಿ ಮತ್ತೆ ಅಬ್ಬರಿಸಿದ್ದಾನೆ. ದಾಖಲೆಯ ಮಳೆಯಾಗಿ ಅದಾಗಲೇ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸುವ ಮಳೆ ರೀ ಎಂಟ್ರಿ ಕೊಟ್ಟಿದೆ. ಭಾರೀ ಮಳೆಯ ನಂತರ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತಿದೆ. ತಿಲಕ್ ಸೇತುವೆಯ ರಸ್ತೆಗಳಂತೂ ನೀರಿನಲ್ಲಿ ಮುಳುಗಡೆಯಾಗಿದೆ. ಪರಿಣಾಮ ಕಾರು, ಬೈಕ್​ಗಳಲ್ಲಿ ತೆರಳುತ್ತಿದ್ದ ವಾಹನ ಸವಾರರು ಪರದಾಡುವಂತಾಯ್ತು. ಇದರ ಜೊತೆಗೆ ಐಟಿಓ ರಸ್ತೆಯಲ್ಲೂ ನೀರು ತುಂಬಿತ್ತು. ಇನ್ನು ಭಾರೀ ಮಳೆ ಹಾಗೂ ಪ್ರವಾಹದಿಂದ ದೆಹಲಿಯ ಕಿಸಾನ್ ಘಾಟ್ ಬಳಿಯ ರಸ್ತೆಗಳು ಜಲಾವೃತವಾಗಿವೆ. ಇದೇ ವೇಳೆ ಕೆಲ ಮಕ್ಕಳು ಹಾಗೂ ಮಹಿಳೆಯರು ಅದೇ ನೀರಲ್ಲಿ ಕುಳಿತು ಆಟವಾಡಿದ್ರು.

ಇನ್ನು ದೆಹಲಿಯ ರಾಜಘಾಟ್ ಬಳಿ ಭಾರೀ ಮಳೆ ಪರಿಣಾಮ ಇಡೀ ರಸ್ತೆಗಳೆಲ್ಲ ಹಳ್ಳ-ಕೊಳ್ಳದಂತಾಗಿದ್ದವು. ಅದರಲ್ಲಿ ಸೈಕಲ್ ಆಟೋ ಓಡಿಸುವ ವ್ಯಕ್ತಿಯೊಬ್ಬರು ಮಳೆ ನೀರಲ್ಲಿ ಮುಂದೆ ಹೋಗಲಾಗದೇ ಪರದಾಡಿದ್ರು.

ಇನ್ನು ದೆಹಲಿಯಲ್ಲಿ ಮಳೆರಾಯ ಹಾಗೂ ಯಮುನೆಯ ಉಗ್ರಾವತಾರಕ್ಕೆ ದೆಹಲಿಯ ಬೀದಿ ಬೀದಿಗಳು ಜಲಾವೃತವಾಗಿವೆ. ಎಲ್ಲಿ ನೋಡಿದ್ರೂ ಸ್ವಿಮ್ಮಿಂಗ್ ಫೂಲ್​ನಂತೆ ಭಾಸವಾಗ್ತಿವೆ. ಹೀಗಾಗಿ ಹಿರಿಯರು-ಕಿರಿಯರೆನ್ನದೇ ಎಲ್ಲರೂ ಮಳೆ ನೀರಿನಲ್ಲೇ ಈಜಾಡಿ ಮೋಜು ಮಸ್ತಿ ಮಾಡ್ತಿದ್ದಾರೆ.

ಹರಿಯಾಣದ ಹತ್ನಿ ಕುಂಡ್ ಬ್ಯಾರೇಜ್​ನಿಂದ ಭಾರೀ ಪ್ರಮಾಣದ ನೀರು ಬಿಡುಗಡೆಯಾದ ಪರಿಣಾಮ ಯಮುನಾ ನದಿಯ ನೀರಿನ ಮಟ್ಟ ತೀವ್ರವಾಗಿ ಹೆಚ್ಚಾಗಿದೆ. ಅಲ್ಲದೇ ಯಮುನಾ ಬ್ಯಾರೇಜ್​ನ ಎಲ್ಲ 5 ಗೇಟ್​ಗಳನ್ನು ತೆರೆಯಲು ಪ್ರಯತ್ನಿಸಲಾಗುತ್ತಿದೆ ಅಂತ ಸಿಎಂ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಇನ್ನು ಮಳೆಯಿಂದ ಹಲವು ರಸ್ತೆಗಳು ಜಲಾವೃತವಾಗಿವೆ. ಮಾತ್ರವಲ್ಲದೇ ಹವಾಮಾನ ಇಲಾಖೆಯ ಪ್ರಕಾರ ಇಂದು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಅಂತ ಎಚ್ಚರಿಕೆ ನೀಡಿದೆ. ಮೊದಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ ಅವಾಂತರಗಳನ್ನೇ ಸೃಷ್ಟಿಸಿದ್ರೆ ಈಗ ಈ ಮಳೆಯಿಂದ ಅದು ಮತ್ತಷ್ಟು ಹೆಚ್ಚಾಗಲಿದೆ.

ಪರಿಸ್ಥಿತಿ ಪರಿಶೀಲಿಸಲು ಗವರ್ನರ್​ಗೆ ಕರೆ ಮಾಡಿದ ಪ್ರಧಾನಿ

ಫ್ರಾನ್ಸ್ ಹಾಗೂ ಯುಎಇ ಪ್ರವಾಸದಿಂದ ದೆಹಲಿಗೆ ವಾಪಸ್ಸಾದ ಕೂಡಲೇ ಪ್ರಧಾನಿ ಮೋದಿ ದೆಹಲಿ ಗವರ್ನರ್​ಗೆ ಕರೆ ಮಾಡಿ ಮಳೆ ಹಾನಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಿನಯ್ ಕುಮಾರ್ ಸಕ್ಸೇನಾಗೆ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಓಡಿಶಾದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಭುವನೇಶ್ವರ ಹಾಗೂ ಕಟಕ್ ನಗರಗಳಲ್ಲಿ ವಸತಿ ಪ್ರದೇಶಗಳು ಹಾಗೂ ರಸ್ತೆಗಳಲ್ಲಿ ನೀರು ನಿಂತು ಜನರು ಅಕ್ಷರಶಃ ಪರದಾಡಿದ್ರು. ವಾಹನ ಸವಾರರ ಪಾಡಂತೂ ಹೇಳತೀರದ್ದಾಗಿತ್ತು.

ಉತ್ತರ ಭಾರತದ ಜಲಪ್ರಳಯಕ್ಕೆ 160ಕ್ಕೂ ಅಧಿಕ ಸಾವು

ಉತ್ತರ ಪ್ರದೇಶದಲ್ಲಿ ಸಂಭವಿಸಿದ ಭಯಾನಕ ಜಲಪ್ರಳಯಕ್ಕೆ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಹಿಮಾಚಲಪ್ರದೇಶದಲ್ಲೇ ಅತೀಹೆಚ್ಚು ಸಾವಾಗಿದ್ದು, ಪ್ರವಾಹದಿಂದ 108 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಿಮಾಚಲ ಪ್ರದೇಶದ ಹಲವೆಡೆ ಜಿಟಿ ಜಿಟಿ ಮಳೆಯಾಗುತ್ತಲೇ ಇದ್ದು, ಹವಾಮಾನ ಇಲಾಖೆ ಮುಂದಿನ 5 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಪಾಂಡೋವ್ ಮತ್ತು ಮಂಡಿ ಜಿಲ್ಲೆಗೆ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕೆಂದ್ರ ಸಚಿವ ಅನುರಾಗ್ ಠಾಕೂರ್ ಸಹ ಹಿಮಾಚಲ ಪ್ರದೇಶದಲ್ಲಿ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಉತ್ತರ ಭಾರತದಲ್ಲಿ ಮಳೆ ಹೆಚ್ಚಾಗಿದ್ದರಿಂದ ಜನರು ತತ್ತರಿಸಿದ್ದಾರೆ. ಅದರಲ್ಲೂ ದೆಹಲಿಯಲ್ಲಿ ಮಳೆಯ ಜೊತೆಗೆ ಯಮುನೆಯ ಪ್ರತಾಪ ಜನರನ್ನು ಹಿಂಡಿ ಹಿಪ್ಪೆಯಾಗುವಂತೆ ಮಾಡಿದೆ. ಇಂದು ಕೂಡ ಮಳೆಯಾಗುವ ಎಚ್ಚರಿಕೆ ಹವಾಮಾನ ಇಲಾಖೆ ನೀಡಿರುವುದು ಆತಂಕ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಮುನಾ ನದಿ ನೀರಿಗೆ ಬೇಸತ್ತ ಜನ.. ಇಂದು ಕೂಡ ಭರ್ಜರಿ ಮಳೆ ಆಗುವ ಸೂಚನೆ.. ದೆಹಲಿ, ಹಿಮಾಚಲ ಪ್ರದೇಶದಲ್ಲಿ ಹೈ ಅಲರ್ಟ್​..!

https://newsfirstlive.com/wp-content/uploads/2023/07/DELHI_TODAY_RAIN.jpg

Load More