newsfirstkannada.com

×

ಭಾರೀ ಮಳೆಗೆ ಬೆಚ್ಚಿ ಬಿದ್ದ ಹಿಮಾಚಲ ಪ್ರದೇಶ; ಭಾರೀ ಅವಾಂತರ; ಎಲ್ಲೆಲ್ಲಿ ಏನಾಯ್ತು?

Share :

Published August 13, 2023 at 6:48am

Update August 13, 2023 at 6:40am

    ವರುಣಾರ್ಭಟಕ್ಕೆ ಮತ್ತೊಮ್ಮೆ ಬೆಚ್ಚಿಬಿದ್ದ ಹಿಮಾಚಲ ಪ್ರದೇಶ

    ಜಲಾವೃತವಾದ ಹೆದ್ದಾರಿಯಲ್ಲಿ ವಾಹನ ಸವಾರರ ಪರದಾಟ

    ಬಿಯಾಸ್ ಭೋರ್ಗರೆತ.. ಹಲವಡೆ ಭೂ ಕುಸಿತದ ಅನಾಹುತ

ವರುಣಾರ್ಭಟಕ್ಕೆ ಹಿಮಾಚಲ ಪ್ರದೇಶ ಮತ್ತೊಮ್ಮೆ ತತ್ತರಿಸಿದೆ. ಅದರಲ್ಲೂ ಮಂಡಿ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ನದಿಗಳು ಭೋರ್ಗರೆಯುತ್ತಿದ್ದು, ಬೆಟ್ಟ, ಗುಡ್ಡಗಳು ಕುಸಿಯುತ್ತಿವೆ. ನದಿಯ ಭೋರ್ಗರೆತ. ನೀರಿನಂತೆ ಹರಿದು ಬಂದ ಗುಡ್ಡ ಮಣ್ಣು. ಪ್ರವಾಹದ ನೀರಲ್ಲಿ ಮುಳುಗಿರುವ ಹೆದ್ದಾರಿಗಳು. ಹಿಮಾಚಲ ಪ್ರದೇಶದಲ್ಲಿ ಮಳೆರಾಯ ಸೃಷ್ಟಿರುವ ಅವಾಂತರ ಅಲ್ಲಿನ ಜನರನ್ನು ಬೆಚ್ಚಿ ಬಿಳಿಸುತ್ತಿವೆ.

ವರುಣಾರ್ಭಟಕ್ಕೆ ಬೆಚ್ಚಿಬಿದ್ದ ಹಿಮಾಚಲ ಪ್ರದೇಶ
ಬಿಯಾಸ್ ಭೋರ್ಗರೆತ.. ಹಲವಡೆ ಭೂ ಕುಸಿತ

ಜೂನ್​ ತಿಂಗಳಲ್ಲಿ ಸಂಭವಿಸಿದ ಮೇಘಸ್ಫೋಟಕ್ಕೆ ಹಿಮಾಚಲದಲ್ಲಿ ಅಲ್ಲೋಲ ಕಲ್ಲೋಲವಾಗಿತ್ತು. ಆ ಆಘಾತದಿಂದಲೇ ಇನ್ನೂ ಹೊರ ಬಂದಿಲ್ಲ. ಇದೀಗ ಮತ್ತೆ ಮಳೆರಾಯ ಹಿಮಾಚಲದಲ್ಲಿ ಅಬ್ಬರಿಸುತ್ತಿದ್ದಾನೆ. ಅದರಲ್ಲೂ ಮಂಡಿ ಜಿಲ್ಲೆಯಲ್ಲಿ ಜಲ ಪ್ರವಾಹ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಹಿಮಾಚಲದ ಬಿಯಾಸ್​ ನದಿಯ ಭೋರ್ಗರೆತ ನದಿ ತೀರದ ಜನರು ಎದೆಯನ್ನು ಗಢಗಢ ನಡುಗಿಸಿದೆ. ಜಿಲ್ಲೆಯಲ್ಲಿ ಹಲವು ಭಾಗಗಳಲ್ಲಿ ನದಿಯ ನೀರು ಜನವತಿ ಪ್ರದೇಶಗಳಿಗೂ ನುಗ್ಗಿದೆ. ಮೊಣಕಾಲುದ್ದದ ನೀರಲ್ಲೇ ಮಂಡಿ ಜಿಲ್ಲೆಯ ಜನರು ಜೀವನ ಸಾಗಿಸುವಂತಾಗಿದೆ. ಪ್ರವಾಹ ನೀರಲ್ಲಿ ವಾಹನಗಳು ಮುಳುಗಿ ಹೋಗಿವೆ.

ಜಲಾವೃತವಾದ ಹೆದ್ದಾರಿಯಲ್ಲೇ ವಾಹನ ಸಂಚಾರ
ಪದೇ ಪದೇ ಭೂಕುಸಿತದಿಂದ ಹೆದ್ದಾರಿ ಸಂಚಾರ ಸ್ಥಗಿತ

ಗುಡ್ಡದ ಮಣ್ಣು ಹೇಗೆ ಕುಸಿಯುತ್ತಿದೆ. ಇನ್ನು ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯ 6ನೇ ಮೈಲಿ ಬಳಿ ಆಲ್ಟೋ ಕಾರಿನಲ್ಲಿ ಮೇಲೆ ಕಲ್ಲು ಬಿದ್ದು, 5 ವರ್ಷದ ಮಗು ಸಾವನ್ನಪ್ಪಿದೆ. ಕಾರಿನಲ್ಲಿದ್ದ ಕುಟುಂಬದ ಸದಸ್ಯರು ಗಾಯಗೊಂಡಿದ್ದಾರೆ. ಇನ್ನು 9ನೇ ಮೈಲಿ ಬಳಿಯೂ ಮತ್ತೊಂದು ಸ್ಥಳದಲ್ಲಿ ಗುಡ್ಡ ಕುಸಿದ್ದು ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಮಂಡಿ ಜಿಲ್ಲೆಯ ಹಲವು ಭಾಗಗಳಲ್ಲಿ ಇದೇ ರೀತಿ ಭೂ ಕುಸಿತ ಸಂಭವಿಸಿದೆ. ಬಿಲಾಸ್​ಪುರ ಏಮ್ಸ್​ ಗೇಟ್​ ಬಳಿ ಗುಡ್ಡದ ಮಣ್ಣು ನೀರಿನಂತೆ ಹರಿದು ಬಂದಿದೆ.

ಗುಡ್ಡ ಕುಸಿತದಿಂದ ಕಂದಕದಲ್ಲಿ ಸಿಲುಕಿದ ಬಸ್​

ಸುಂದರ್​ ನಗರತದ ಶಿಮ್ಲಾ ಮತ್ತು ಡೆಹಾರ್​ ರಸ್ತೆಯಲ್ಲಿ ಭಾರೀ ದುರಂತವೊಂದು ತಪ್ಪಿದೆ. ಏಕಾಏಕಿ ರಸ್ತೆ ಕುಸಿತ ಪರಿಣಾಮ 12 ಜನ ಪ್ರಯಾಣಿಕರಿಂದ ಹಿಮಾಚಲ ಪ್ರದೇಶದ ಸಾರಿಗೆ ಬಸ್​ ಹಳ್ಳದಲ್ಲಿ ಸಿಲುಕಿಕೊಂಡಿದೆ. ಬಸ್​ನಲ್ಲಿದ್ದ ಜನರಿಗೆ ಸಣ್ಣ ಪುಟ್ಟಗಾಯಗಾಳಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಪರಿಶಿಲನೆ ನಡೆಸಿದ್ರು. ರಸ್ತೆ ಕುಸಿತದಿಂದ ಶಿಮ್ಲಾ ಮತ್ತು ಡೆಹಾರ್ ನಡುವಿನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಗುಡ್ಡದ ಮೇಲಿಂದ ಉರುಳಿ ಬಂದ ಬಂಡೆಕಲ್ಲುಗಳು

ಇನ್ನು ಥಾಚಿ ಕಣಿವೆಯ ಗೆಹ್ರು ನಲ್ಲಾ ಪ್ರದೇಶದಲ್ಲಿ ಬೆಟ್ಟದ ಮೇಲಿಂದ ಬೃಹದಾಕಾರದ ಬಂಡೆಗಳನ್ನು ಉರುಳಿ ಬಂದಿವೆ. ಒಟ್ಟಾರೆ ಮಂಡಿ ಜಿಲ್ಲೆಯ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿರುವ ಪರಿಣಾಯ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಗುಡ್ಡಗಳು ಕೂಡ ಕುಸಿಯುತ್ತಿವೆ. ಇನ್ನು 2 ದಿನಗಳ ಕಾಲ ಹಿಮಾಚಲದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಅಲ್ಲಿನ ಜನರ ಜೀವವನ್ನು ಕೈಯಲ್ಲಿಡಿದು ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಮಳೆಗೆ ಬೆಚ್ಚಿ ಬಿದ್ದ ಹಿಮಾಚಲ ಪ್ರದೇಶ; ಭಾರೀ ಅವಾಂತರ; ಎಲ್ಲೆಲ್ಲಿ ಏನಾಯ್ತು?

https://newsfirstlive.com/wp-content/uploads/2023/08/rain.jpg

Load More