newsfirstkannada.com

VIDEO: ತೇಲುವ ಕಾರುಗಳು, ಕೊಚ್ಚಿ ಹೋದ ಸೇತುವೆಗಳು; ಹಿಮಾಚಲ ಪ್ರದೇಶದಲ್ಲಿ ಒಂದೊಂದು ದೃಶ್ಯವೂ ರಣಭೀಕರ

Share :

Published July 9, 2023 at 4:31pm

Update July 9, 2023 at 4:35pm

    ಧಾರಾಕಾರ ಮಳೆಯಿಂದ ನದಿಯಲ್ಲಿ ತೇಲಿ ಹೋಗುತ್ತಿವೆ ಕಾರುಗಳು

    ರೆಡ್ ಅಲರ್ಟ್ ಘೋಷಣೆ, ಕೊಚ್ಚಿ ಹೋಗಿವೆ ರಾಷ್ಟ್ರೀಯ ಹೆದ್ದಾರಿ

    ಪ್ರವಾಸಹಕ್ಕೆ ದೇವಸ್ಥಾನ, ಆಟ್-ಬಂಜಾರ್‌ ಸೇತುವೆ ಮುಳುಗಡೆ

ಶಿಮ್ಲಾ: ಕಳೆದ ಮೂರು ದಿನಗಳಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟಕ್ಕೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ಅಲ್ಲಿನ ಜನರ ಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ. ರಣಭೀಕರ ಮಳೆಗೆ ನದಿಗಳಲ್ಲಿ ಕಾರು ಹಾಗೂ ಬೈಕ್​ಗಳು ಕೊಚ್ಚಿ ಹೋಗುತ್ತಿರೋ ದೃಶ್ಯಗಳು ಸರ್ವೇ ಸಾಮಾನ್ಯವಾಗಿವೆ.

ಹಿಮಾಚಲ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಬಿಯಾಸ್ ನದಿಯು ಪ್ರವಾಹದಿಂದ ಬೋರ್ಗರೆಯುತ್ತಿದೆ. ಕುಲುವಿನಲ್ಲಿ ನದಿ ಪ್ರವಾಹದಿಂದ ರಾಷ್ಟ್ರೀಯ ಹೆದ್ದಾರಿ 3ರ ಭಾಗ ಸಂಪೂರ್ಣ ಕೊಚ್ಚಿ ಹೋಗಿದ್ದು ಮಂಡಿಯಿಂದ ಕುಲು ಕಡೆಗೆ ಸಂಚಾರ ನಿರ್ಬಂಧಿಸಲಾಗಿದೆ. ಇನ್ನು ಮನಾಲಿಯ ಬಹಾಂಗ್​​ನಲ್ಲಿ ಪ್ರವಾಹದಿಂದಾಗಿ ರಸ್ತೆ ಬದಿಯ ಕಟ್ಟಡವೊಂದು ಬ್ಯಾಂಕ್ ಎಟಿಎಂ ಸಹಿತ ಕೊಚ್ಚಿ ಹೋದ ದೃಶ್ಯ ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ.

ಇನ್ನು, ಭಾರಿ ಮಳೆಗೆ ಬಿಯಾಸ್ ನದಿಯು ಬೋರ್ಗರೆದು ಹರಿಯುತ್ತಿದ್ದು ರಸ್ತೆಗಳೆಲ್ಲಾ ಕೊಚ್ಚಿ ಹೋಗಿ, ವಸತಿ ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದೆ. ಜಿಲ್ಲೆಯ ಪಂಚವಕ್ತ್ರ ದೇಗುಲವು ನದಿ ನೀರಿನಲ್ಲಿ ಬಹುತೇಕ ಮುಳುಗಿ ಹೋಗಿದ್ದು ಪ್ರಾಕೃತಿಕ ಮುನಿಸಿಗೆ ಈ ದೃಶ್ಯವು ಸಾಕ್ಷಿಯಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗೆ ನದಿಗಳು ಉಕ್ಕಿ ಹರಿದು ಪ್ರವಾಹ ಉಂಟಾಗಿದೆ. ಬಿಯಾಸ್ ನದಿ ಪ್ರವಾಹದಿಂದ ಕುಲುವಿನಲ್ಲಿ ವಸತಿ ಪ್ರದೇಶಗಳಿಗೆ ನದಿ ನೀರು ನುಗ್ಗಿ ಮನೆಗಳೆಲ್ಲಾ ಮುಳುಗಿ ಹೋಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಅಣೆಕಟ್ಟುಗಳ ಗೇಟುಗಳನ್ನು ಓಪನ್ ಮಾಡಲಾಗಿದೆ. ಅಲ್ಲಿನ ಜನರನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬಿಯಾಸ್ ನದಿ ಭೀಕರವಾಗಿ ಹರಿಯುತ್ತಿರುವುದರಿಂದ ಆಟ್-ಬಂಜಾರ್‌ಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ.

ಇನ್ನು, ದೆಹಲಿ, ಹರಿಯಾಣ, ಚಂಡೀಗಢ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಜುಲೈ 9 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ಹಿಮಾಚಲ ಪ್ರದೇಶದ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆಯಾಗಿದೆ.

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಭಾರೀ ಮಳೆಯ ಆರ್ಭಟಕ್ಕೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿದೆ. ಈ ಮಧ್ಯೆ ನದಿಯ ರಭಸಕ್ಕೆ ಸಿಲುಕಿಕೊಂಡ ಕಾರು ಕೊಚ್ಚಿ ಹೋಗಿವೆ. ನದಿ ನೀರಿನಲ್ಲಿ ವಾಹನಗಳೆಲ್ಲಾ ಕೊಚ್ಚಿ ಹೋಗುತ್ತಿದ್ದು ಅಪಾರ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ತೇಲುವ ಕಾರುಗಳು, ಕೊಚ್ಚಿ ಹೋದ ಸೇತುವೆಗಳು; ಹಿಮಾಚಲ ಪ್ರದೇಶದಲ್ಲಿ ಒಂದೊಂದು ದೃಶ್ಯವೂ ರಣಭೀಕರ

https://newsfirstlive.com/wp-content/uploads/2023/07/himachala-temple-4.png

Load More