newsfirstkannada.com

Karnataka rain: ಬಪ್ಪನಾಡು ದುರ್ಗಾಪರಮೇಶ್ವರಿಗೆ ಜಲದಿಗ್ಬಂಧನ.. ಕರಾವಳಿಯಲ್ಲಿ ಮಳೆ ಏನೆಲ್ಲ ರಗಳೆ ಮಾಡ್ತಿದೆ..?

Share :

07-07-2023

  ಕರಾವಳಿಯಲ್ಲಿ ಮುಂದುವರಿದ ಮಳೆ.. ರಗಳೆ!

  ಭಾರೀ ಮಳೆಗೆ ಐತಿಹಾಸಿಕ ದೇಗುಲ ಜಲಾವೃತ!

  ಪಡುಬಿದ್ರೆ ತೀರದಲ್ಲಿ ತಡೆಗೋಡೆ ಸಮುದ್ರಪಾಲು!

ಇಷ್ಟು ದಿನ ಸುಮ್ಮನಿದ್ದ ವರುಣ ಕೊನೆಗೂ ಕರುನಾಡಿನ ಮೇಲೆ ಕೃಪೆ ತೋರಿದ್ದಾನೆ. ವರುಣಾರ್ಭಟಕ್ಕೆ ಕರಾವಳಿ ಭಾಗ ತೊಯ್ದು ತೊಪ್ಪೆಯಾಗಿದೆ. ತಡವಾಗಿ ಆರಂಭವಾದ ಮುಂಗಾರು ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಒಂದ್ಕಡೆ ಖುಷಿ ಜೊತೆಗೆ ಅವಾಂತರಗಳನ್ನು ಸಹ ಸೃಷ್ಟಿಸಿದೆ.

ರಾಜ್ಯದ ಕರಾವಳಿ ಭಾಗದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ದಕ್ಷಿಣ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮುಲ್ಕಿಯಲ್ಲಿ ಭಾರಿ ಮಳೆಯಿಂದ ಶಾಂಭವಿ ನದಿ ಭೋರ್ಗರೆಯುತ್ತಾ ಹರಿಯುತ್ತಿದೆ. ಪರಿಣಾಮ ಅತಿಕಾರಿಬೆಟ್ಟು ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇಡೀ ಊರಿಗೇ ಊರೇ ಜಲಾವೃತವಾಗಿದ್ದು ಜನ ಮನೆಗಳಿಂದ ಹೊರಬರಲಾಗದ ಸ್ಥಿತಿ ಏರ್ಪಟ್ಟಿದೆ. ನೂರಕ್ಕೂ ಹೆಚ್ಚು ಮನೆಗಳಿಗೆ ವರುಣ ದಿಗ್ಬಂಧನ ವಿಧಿಸಿದ್ದಾನೆ. ಅಡಿಕೆ ಹಾಗೂ ತೆಂಗಿನ ತೋಟಗಳು ಜಲಾವೃತಗೊಂಡಿವೆ.

ಬಪ್ಪನಾಡು ದುರ್ಗಾಪರಮೇಶ್ವರಿಗೆ ಜಲದಿಗ್ಬಂಧನ!

ಭಾರಿ ಮಳೆಗೆ ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲ ಜಲಾವೃತಗೊಂಡಿದೆ. ಪ್ರತಿ ವರ್ಷ ಈ ಅವಧಿಯಲ್ಲಿ ಈ ದೇಗುಲಕ್ಕೆ ಜಲಾವೃತವಾಗಲಿದ್ದು ಈ ಬಾರಿ ತುಸು ಹೆಚ್ಚು ದೇವಸ್ಥಾನಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಪುಷ್ಕರಣಿ ತುಂಬಿದ ಪರಿಣಾಮ ದೇವಸ್ಥಾನದ ಆವರಣ ಹಾಗೂ ಪ್ರಾಂಗಣ ಜಲಾವೃತಗೊಂಡಿದೆ. ದೇವಸ್ಥಾನಕ್ಕೆ ಹೋಗುವ ರಸ್ತೆಯೂ ಜಲಾವೃತಗೊಂಡಿದೆ.. ನೀರು ತುಂಬಿದ ದೇಗುಲದಲ್ಲಿ ಭಕ್ತರು ದೇವರ ದರ್ಶನ ಮಾಡಿದ್ರು.ಇನ್ನು ಸುಳ್ಯದಿಂದ ಕೇರಳದ ಪಾಣತ್ತೂರು ಸಂಪರ್ಕಿಸೋ ಕಲ್ಲಪ್ಪಳ್ಳಿ ರಸ್ತೆಯಲ್ಲಿ ಗುಡ್ಡಕುಸಿದಿದ್ದು ಸಂಚಾರ ಬಂದ್ ಆಗಿತ್ತು. ಮತ್ತೊಂದೆಡೆ ಪುತ್ತೂರಿನಿಂದ ಕಾಸರಗೋಡು ಸಂಪರ್ಕಿಸುವ ಚೇಳ್ಯಡ್ಕ ಸೇತುವೆ ಜಲಾವೃತಗೊಂಡಿದ್ದು ಜನ ಪರದಾಡುವಂತಾಗಿದೆ. ಇನ್ನು ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇವತ್ತು ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ವರುಣನ ಆರ್ಭಟಕ್ಕೆ ಕೃಷ್ಣನೂರು ತತ್ತರ!

ಕೃಷ್ಣನಗರಿ ಉಡುಪಿಯಲ್ಲಿ ಭಾರಿ ಮಳೆಯಿಂದಾಗಿ ಪರಿಸ್ಥಿತಿ ಅಯೋಮಯವಾಗಿದೆ. ನದಿಗಳು ಉಗ್ರನ ರೂಪ ತಾಳುತ್ತಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ತಡೆಗೋಡೆ ಇಲ್ಲದ ಪರಿಣಾಮ ನದಿ ನೀರು ನುಗ್ಗಿದ್ದು ಮನೆಗಳು ಮುಳುಗಿವೆ. ಕೊಡಂಕೂರು ಗ್ರಾಮ ದ್ವೀಪದಂತಾಗಿದ್ದು ಹಲವು ಕುಟುಂಬಗಳು ಅಪಾಯದಲ್ಲಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಸಂತ್ರಸ್ತರನ್ನು ಬೋಟ್​​ನಲ್ಲಿ ರಕ್ಷಿಸುವ ಕೆಲಸ ಮಾಡಿದ್ರು. ಇನ್ನು ಉಡುಪಿ ಪಡುಬಿದ್ರೆ ಬಳಿ ಕಡಲು ಪ್ರಕ್ಷುಬ್ಧಗೊಂಡಿದೆ.. ಕಡಲ ಅಲೆಗಳು ಅಬ್ಬರಿಸುತ್ತಿವೆ. ಅಲೆಗಳ ಅಬ್ಬರ ತಡೆಯಲು ಹಾಕಿದ್ದ ಕಲ್ಲುಬಂಡೆಗಳ ತಡೆಗೋಡೆ ಹಾಗೂ ತೆಂಗಿನಮರಗಳು ಸಮುದ್ರಪಾಲಾಗಿವೆ. ಮತ್ತೊಂದೆಡೆ ಸಂತೆಕಟ್ಟೆ ಬಳಿ ಅಂಡರ್​ಪಾಸ್ ಜಲಾವೃತಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಕುಸಿದು ಬೀಳುವ ಆತಂಕ ಎದುರಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅವಾಂತರ!

ಅತ್ತ ಉತ್ತರ ಕನ್ನಡ ಜಿಲ್ಲೆಯಲ್ಲೂ ಅಬ್ಬರದ ಮಳೆ ಮುಂದುವರಿದಿದೆ. ಕಾರವಾರದ ಬಿಣಗಾ ಗ್ರಾಮವನ್ನ ವರುಣ ಸಂಪೂರ್ಣ ನಡುಗಡ್ಡೆಯಾಗಿದೆ. ಗ್ರಾಮದ ಮನೆಗಳು ಮುಳುಗಿವೆ. ಬಿಣಗಾ ಸೇತುವೆ ಮುಳುಗಿದ್ದು ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಗುಡ್ಡಪ್ರದೇಶದಿಂದ ನೀರು ಹರಿದು ಬರ್ತಿದ್ದು 300ಕ್ಕೂ ಅಧಿಕ ಮನೆಗಳ ಸಂಪರ್ಕ ಬಂದ್ ಆಗಿದೆ. ಜನ ಸಂಕಷ್ಟಕ್ಕೀಡಾಗಿದ್ದಾರೆ. ಮತ್ತೊಂದೆಡೆ ಕೈಗಾ ಬಳಿ ಹೆದ್ದಾರಿ ಕೂಡ ಮುಳುಗಡೆಯಾಗಿದೆ. ಒಟ್ಟಿನಲ್ಲಿ ಲೇಟ್​​ ಆಗಿ ಎಂಟ್ರಿ ಕೊಟ್ಟ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಕರಾವಳಿ ಜಿಲ್ಲೆಗಳಲ್ಲಿ ಇನ್ನೂ 3 ದಿನ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು ಮಳೆ ಅಲರ್ಟ್ ಘೋಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka rain: ಬಪ್ಪನಾಡು ದುರ್ಗಾಪರಮೇಶ್ವರಿಗೆ ಜಲದಿಗ್ಬಂಧನ.. ಕರಾವಳಿಯಲ್ಲಿ ಮಳೆ ಏನೆಲ್ಲ ರಗಳೆ ಮಾಡ್ತಿದೆ..?

https://newsfirstlive.com/wp-content/uploads/2023/07/MNG_RAIN.jpg

Load More