newsfirstkannada.com

Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮತ್ತೆ ಮಳೆರಾಯನ ಆರ್ಭಟ.. ಸೇತುವೆಗಳು, ದೇವಾಲಯಗಳು ಮುಳುಗಡೆ.. ಅಲ್ಲಲ್ಲಿ ಸಂಪರ್ಕ ಕಡಿತ.. ಎಲ್ಲೆಲ್ಲಿ ಏನೇನು ಆಯಿತು..?

Share :

22-07-2023

  ಭಾರೀ ಮಳೆಗೆ ಚಿಕ್ಕಮಗಳೂರಲ್ಲಿ ಅವಾಂತರ

  ಚಿಕ್ಕೋಡಿ ಉಪವಿಭಾಗದ ಏಳು ಸೇತುವೆ ಜಲಾವೃತ

  ಉಡುಪಿಯಲ್ಲಿ ವರುಣನ ಅಬ್ಬರ.. ಕಡಲ್ಕೊರೆತ

ರಾಜ್ಯದಲ್ಲಿ ಮುಂಗಾರು ಲೇಟ್​ ಆಗಿ ಎಂಟ್ರಿ ಕೊಟ್ಟರೂ ಆರ್ಭಟ ಮಾತ್ರ ಜೋರಾಗಿದೆ. ಉತ್ತರ ಒಳನಾಡಿಗಳಲ್ಲಿ ವರುಣ ತೀವ್ರಗೊಂಡಿದ್ದಾನೆ. ದಕ್ಷಿಣ ಒಳನಾಡಿಗಳಲ್ಲಿ ಚುರುಕುಗೊಂಡಿದ್ದಾನೆ. ಕಾರಾವಳಿ ಭಾಗಳಲ್ಲಿ ತನ್ನ ನರ್ತನ ಶುರು ಮಾಡಿದ್ದಾನೆ. ಹಲವೆಡೆ ಅವಾಂತರಗಳನ್ನೂ ಸೃಷ್ಟಿಸಿಬಿಟ್ಟಿದ್ದಾನೆ.

ಭಾರೀ ಮಳೆಗೆ ಚಿಕ್ಕಮಗಳೂರಲ್ಲಿ ಅವಾಂತರ

ಕಳೆದೆರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಿರಂತರ ಮಳೆಯಾಗುತ್ತಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಸೀತಾಪುರ ಗ್ರಾಮದಲ್ಲಿ ನಟೇಶ್ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದು, ಮನೆ ಸಂಪೂರ್ಣ ನಾಶವಾಗಿದೆ. ಘಟನಾ ಸ್ಥಳಕ್ಕೆ ಸ್ಥಳಕ್ಕೆ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆ ಅಬ್ಬರ.. ಶಿಥಿಲಾವಸ್ಥೆಗೆ ತಲುಪಿದ ಗಣಪತಿ ದೇಗುಲ

ಕಾಫಿ ನಾಡು ಚಿಕ್ಕಮಗಳೂರಿನ ಪುಣ್ಯಕ್ಷೇತ್ರಗಳ ಸಾಲಿನಲ್ಲಿರುವ ವರ್ತೆ ಗಣಪತಿ ದೇವಸ್ಥಾನ ಶಿಥಿಲಾವಸ್ಥೆ ಹಂತಕ್ಕೆ ತಲುಪಿದ್ದು, ಧರೆಕುಸಿತದ ಭೀತಿ ಎದುರಾಗಿದೆ. ಇತಿಹಾಸವಿರೋ ದೇವಸ್ಥಾನ ಇದು, ಜನರ ಭಕ್ತಿ ನಂಬಿಕೆಯಿರುವ ದೇವಸ್ಥಾನವನ್ನು ಕುಸಿತದಿಂದ ತಡೆಯಲು ಮೊದಲೇ ಎಚ್ಚೆತ್ತುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಚಿಕ್ಕೋಡಿ ಉಪವಿಭಾಗದ ಏಳು ಸೇತುವೆ ಜಲಾವೃತ

ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ‌ 7 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ. ದೂದಗಂಗಾ ನದಿಯ ಮಲಿಕವಾಡ – ದತ್ತವಾಡ, ವೇದಗಂಗಾ ನದುಗೆ ಅಡ್ಡಲಾಗಿರುವ ‌ಜತ್ರಾಟ – ಭೀವಶಿ, ಬೋಜ – ಕಾರದಗಾ, ಬಾರವಾಡ – ಕುನ್ನೂರು, ಸಿದ್ನಾಳ – ಅಕ್ಕೋಳ, ಮಮದಾಪೂರ – ಹುನ್ನರಗಿ, ಭೋಜವಾಡಿ – ಕುನ್ನೂರ ಸೇತುವೆಯ ಎರಡು ಬದಿಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರಕ್ಕೆ ನಿಷೇಧ ಏರಲಾಗಿದೆ.

ಉಡುಪಿಯಲ್ಲಿ ವರುಣನ ಅಬ್ಬರ.. ಕಡಲ್ಕೊರೆತ

ಉಡುಪಿಯಲ್ಲಿ ವರುಣನ ಅಬ್ಬರ ಮತ್ತೆ ಶುರುವಾಗಿದ್ದು, ಜಿಲ್ಲೆಯಾದ್ಯಂತ ‌ಉತ್ತಮ ಮಳೆಯಾಗಿದೆ. ಕಡಲಲ್ಲಿ ಎದ್ದ ತೂಫಾನ್ ಇನ್ನೂ ಕಡಿಮೆಯಾಗದ ಕಾರಣ ನಾಲ್ಕು ದಿನದಿಂದ ನಾಡದೋಣಿ ಮೀನುಗಾರರು ಕಡಲಿಗೆ ಇಳಿದಿಲ್ಲ. ಅಲ್ಲದೇ ಜಿಲ್ಲೆಯ ಹಲವೆಡೆ ಕಡಲ್ಕೊರೆತ ಕೂಡ ಉಂಟಾಗಿದೆ. ಪಡುಬಿದ್ರಿ ಬೀಚ್‌ನಲ್ಲಿ ಕಡಲ್ಕೊರೆತಕ್ಕೆ ಬೀಚ್ ಬದಿಯ ಅಭಿವೃದ್ಧಿ ಕಾಮಗಾರಿಗಳು, ಸಮುದ್ರ ಪಾಲಾಗುತ್ತಿದೆ.

ಕೆರೆಯಂತಾದ ಬಸ್ ನಿಲ್ದಾಣಗಳು, ಸವಾರರ ಪರದಾಟ

ಗಡಿ ಜಿಲ್ಲೆ ಬೀದರ್‌ನಲ್ಲಿ ನಾಲ್ಕೈದು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಬಸವಕಲ್ಯಾಣ ಬಸ್ ನಿಲ್ದಾಣ ಕೆರೆಯಂತಾಗಿಬಿಟ್ಟಿದೆ.

ಮೇಘಾರ್ಭಟಕ್ಕೆ ಕಲಬುರಗಿ ಜಿಲ್ಲೆ ಮಂದಿ ಹೈರಾಣು

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಳ್ಳ- ಕೊಳ್ಳಗಳು ಉಕ್ಕಿ ಹರಿದಿವೆ. ಇನ್ನು ಜಿಲ್ಲಯ ಬೆನಕನಹಳ್ಳಿ ಗ್ರಾಮಕ್ಕೆ ಪಕ್ಕದ ನಾಲಾ ನೀರು ನುಗ್ಗಿದ್ದು, ಮನೆಯಿಂದ ಹೊರ ಬಾರದಂತೆ ಗ್ರಾಮಸ್ಥರಿಗೆ ನಾಲಾ ನೀರು ಜಲದಿಗ್ಬಂಧನ ಹಾಕಿದೆ. ಗ್ರಾಮದ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ದಿನಸಿ ವಸ್ತುಗಳು ನೀರುಪಾಲಾಗಿದ್ದು, ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾದೆ.

ಭಾರೀ ಮಳೆ.. ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ

ಕಳೆದ ಮೂರ್ನಾಲ್ಕು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಖಾನಾಪುರ ತಾಲೂನಾದ್ಯಂತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇವತ್ತು ಒಂದು ದಿನ ರಜೆ ಘೋಷಿಸಲಾಗಿದೆ. ಇನ್ನು ಚಿಕಲೆ, ಪಾರವಾಡ ಹಾಗೂ ಚಿಗುಲೆ ವಾಟರ್ ಫಾಲ್ಸ್​ಗಳನ್ನು ಹೊರತುಪಡಿಸಿ ತಾಲೂಕಿನ ಇತರೆ ಎಲ್ಲಾ ಫಾಲ್ಸ್​ಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮುಂದುವರಿದ ಮಳೆ

ವಿಜಯಪುರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ.. ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರ್ತಿದೆ. 31.484 ಟಿಎಂಸಿ ಇದ್ದ ನೀರಿನ ಮಟ್ಟ ಇದೀಗ 41.036 ಟಿಎಂಸಿಗೆ ಏರಿಕೆಯಾಗಿದೆ.. ಅಲ್ಲದೆ ಕೃಷ್ಣೆ ಹಾಗೂ ಘಟಪ್ರಭಾ ನದಿಯಲ್ಲಿ ಒಳಹರಿವು ಕೂಡ ಏರಿಕೆಯಾಗಿದೆ.

ಭೀಮಾ ನದಿಗೆ ನೀರು‌ ಬಿಟ್ಟ ಹಿನ್ನೆಲೆ ಫುಲ್ ಅಲರ್ಟ್

ಯಾದಗಿರಿ ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗ್ತಿರುವ ಹಿನ್ನಲೆ ಭೀಮಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತ್ತಿ ಬ್ಯಾರೇಜ್ ನಿಂದ 45 ಸಾವಿರ ಕ್ಯೂಸೆಕ್ ನೀರು ಹಾಗೂ ಯಾದಗಿರಿ ಜಿಲ್ಲೆಯ ಗುರುಸಣಗಿ ಬ್ಯಾರೇಜ್ ನಿಂದಲೂ 25 ಸಾವಿರ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ.. ಇನ್ನು, ಭೀಮಾ ನದಿಗೆ ನೀರು ಬಿಟ್ಟ ಹಿನ್ನಲೆ ನದಿ ತೀರದ ಗ್ರಾಮಗಳಲ್ಲಿ ಫುಲ್ ಅಲರ್ಟ್​ ಆಗಿದ್ದು, ಬಟ್ಟೆ ತೊಳೆಯಲು, ಪಂಪ್ ಸೆಟ್ ಹಾಕಲು, ಜಾನುವಾರುಗಳನ್ನು ತೆಗೆದುಕೊಂಡು ನದಿ ತೀರಕ್ಕೆ ಹೋಗದಂತೆ ಡಂಗುರ ಸಾರಿ ಎಚ್ಚರಿಕೆ ನೀಡಲಾಗಿದೆ.

ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಲ್ಲಿ ಇಂದು ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಕೂಡ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದೇನೆ ಇರಲಿ ನಿಧಾನವಾಗಿ ಎಂಟ್ರಿ ಕೊಟ್ಟಿರೋ ವರುಣ ತನ್ನ ಆರ್ಭಟ ಮಾತ್ರ ಜೋರಾಗಿಸಿರೋದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮತ್ತೆ ಮಳೆರಾಯನ ಆರ್ಭಟ.. ಸೇತುವೆಗಳು, ದೇವಾಲಯಗಳು ಮುಳುಗಡೆ.. ಅಲ್ಲಲ್ಲಿ ಸಂಪರ್ಕ ಕಡಿತ.. ಎಲ್ಲೆಲ್ಲಿ ಏನೇನು ಆಯಿತು..?

https://newsfirstlive.com/wp-content/uploads/2023/07/RAIN-2-7.jpg

Load More