newsfirstkannada.com

‘ಭೀಮ’ನ ಆರ್ಭಟ.. ರೈತರು ಬಿತ್ತನೆ ಮಾಡಿದ ಬೆಳೆಗಳು ನೀರು ಪಾಲು

Share :

23-07-2023

  ಮಾರ್ಕಂಡೇಯ ನದಿ ಅಬ್ಬರಕ್ಕೆ ಜಮೀನು ಜಲಾವೃತ

  ರೈತರು ಬಿತ್ತನೆ ಮಾಡಿದ ತರಕಾರಿ ಬೆಳೆ ನೀರು ಪಾಲು

  ಉಕ್ಕಿ ಹರಿಯುತ್ತಿರುವ ನದಿಯಲ್ಲೇ ಜನರ ದುಸ್ಸಾಹಸ

ರಾಜ್ಯದಲ್ಲಿ ಕೊನೆಗೂ ರಜೆ ಮೂಡ್​ನಿಂದ ಹೊರ ಬಂದಿರೋ ಮಳೆರಾಯ ಹಲವು ಭಾಗಗಳ ಧಗೆಯನ್ನ ತಣಿಸುತ್ತಿದ್ದಾನೆ. ಅಬ್ಬರಿಸಿ ಬೊಬ್ಬಿರಿದು ಅವಾಂತರಗಳನ್ನೂ ಸೃಷ್ಟಿಸಿದ್ದಾನೆ. ಬರಗಾಲದ ಭೀತಿಗೆ ಬೆದರಿ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾನೆ.

ಮಾರ್ಕಂಡೇಯ ನದಿ ಅಬ್ಬರಕ್ಕೆ ಮುಳುಗಿದ ರೈತರ ಬದುಕು

ಪಶ್ಚಿಮಘಟ್ಟ ಧಾರಾಕಾರ ಮಳೆಯಾಗ್ತಿರೋ ಕಾರಣ ಬೆಳಗಾವಿ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ನೀರಿಲ್ಲದೇ ಒಣಗುಟ್ಟುತ್ತಿದ್ದ ಹಳ್ಳ-ಕೊಳ್ಳಗಳು ಅಬ್ಬರಿಸಿ ಬೊಬ್ಬಿರಿಯುತ್ತಿವೆ. ಬೆಳಗಾವಿ ಹೊರವಲಯದ ಮಾರ್ಕಂಡೇಯ ನದಿ ತುಂಬಿ ಹರಿಯುತ್ತಿದ್ದು, ರೈತರ ಜಮೀನುಗಳಿಗೆ ನದಿ ನೀರು ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದೆ. ರೈತರು ಬಿತ್ತನೆ ಮಾಡಿದ ಸೋಯಾ ಬೀನ್, ವಿವಿಧ ತರಕಾರಿ ಬೆಳೆ ನೀರು ಪಾಲಾಗಿದೆ.

ಬೆಳಗಾವಿಯ ಬಳ್ಳಾರಿ ನಾಲೆಯಲ್ಲಿ ಉಕ್ಕಿದ ಜಲಧಾರೆ!

ವರ್ಷಧಾರೆಯ ಅಬ್ಬರಕ್ಕೆ ಬೆಳಗಾವಿ ತಾಲೂಕಿನ ಬಳ್ಳಾರಿ ನಾಲೆಯಲ್ಲಿ ಜಲಧಾರೆ ಉಕ್ಕಿಹರಿಯುತ್ತಿದೆ. ನಾಲೆಯಲ್ಲಿ ಹೂಳು ತುಂಬಿಕೊಂಡ ಪರಿಣಾಮ ರೈತರ ಗದ್ದೆಗೆ ನಾಲೆಯ ನೀರು ನುಗ್ಗಿದೆ. ನೂರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದ ‌ಬೆಳೆದ ಭತ್ತದ ಬೆಳೆ ನೀರುಪಾಲಾಗಿದೆ. ಯಾದಗಿರಿ ಸೇರಿ ರಾಜ್ಯದಾದ್ಯಂತ ನಾಲ್ಕು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭೀಮಾ ನದಿಯ ಹರಿವನ್ನ ಹೆಚ್ಚಿಸಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರೋದ್ರಿಂದ ಯಾದಗಿರಿ ಹೊರವಲಯದ ಕಳಂಗೇಶ್ವರ, ವೀರಾಂಜನೇಯ ದೇವಸ್ಥಾನಗಳಿಗೆ ಜಲದಿಗ್ಭಂದನವಾಗಿದೆ. ನದಿಯ ನೀರಿನಲ್ಲಿ ದೇವಸ್ಥಾನಗಳು ಸಂಪೂರ್ಣ ಮುಳುಗಡೆಯಾಗಿವೆ.

ದೇವಸ್ಥಾನಗಳಿಗೆ ಜಲದಿಗ್ಭಂಧನ ವಿಧಿಸಿದ ‘ಭೀಮಾ’!

ಯಾದಗಿರಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿ ತೀರದಲ್ಲೇ ಜನರು ಸ್ನಾನ ಮಾಡುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಕ್ಷಣದಿಂದ ಕ್ಷಣಕ್ಕೆ ನದಿಯ ನೀರು ಹೆಚ್ಚಳವಾಗುತ್ತಿರುವ ಹಿನ್ನೆಲೆ ನದಿಗೆ ಇಳಿಯದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಿದಿದ್ರೂ ಸಹ ಜನ ಡೋಂಟ್​ ಕೇರ್ ಅಂತಿದ್ದಾರೆ. ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗ್ತಿರುವ ಹಿನ್ನಲೆ ತುಂಗಭದ್ರಾ ನದಿಯ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಹಿನ್ನಲೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರಿನಲ್ಲಿರುವ ಹಮ್ಮಿಗಿ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿದೆ. ಬ್ಯಾರೇಜ್​ನ 12 ಗೇಟ್​​ ಮೂಲಕ ತುಂಗಭದ್ರಾ ನದಿಗೆ ಹೆಚ್ಚಿನ ನೀರನ್ನ ಹರಿಬಿಡಲಾಗಿದೆ. ಹಮ್ಮಿಗಿ ಬ್ಯಾರೇಜ್ ಹಿನ್ನೀರಿನಿಂದ ಗುಮ್ಮಗೋಳ, ಬಿದರಹಳ್ಳಿ, ವಿಠ್ಠಲಾಪುರ ಸೇರಿ ಹಲವು ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ. ಜಿಲ್ಲಾಡಳಿತದಿಂದ 4 ಗ್ರಾಮಗಳ ಜನರನ್ನ ಸ್ಥಳಾಂತರ ಮಾಡಲಾಗಿದೆ.

ಉಡುಪಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಭಾರೀ ‌ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ತೂಪಾನ್ ಎದ್ದಿರುವ ಹಿನ್ನಲೆ ಉಡುಪಿಯ ಕಡಲ ತೀರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ದಡದ ಭೂ ಪ್ರದೇಶ ಸಮುದ್ರ ಪಾಲಾಗುತ್ತಿದೆ.

ಮಲೆನಾಡ ಮಹಾಮಳೆಗೆ ಜಲಪಾತಗಳಿಗೆ ಜೀವಕಳೆ!

ಮಲೆನಾಡಿನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣಾ ಘಟ್ಟ ಪ್ರದೇಶಕ್ಕೆ ಹಚ್ಚ ಹಸಿರಿನ ಬಣ್ಣ ಹಚ್ಚಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಾಳಿ ಸಹಿತಿ ಮಳೆ ಅಬ್ಬರ ಮುಂದುವೆರೆದಿದ್ದು, ಘಟ್ಟ ಪ್ರದೇಶದ ಜಲಪಾತಗಳಿಗೆ ಜೀವಕಳೆ ಬಂದಿದೆ. ವರ್ಷಧಾರೆ ಅಬ್ಬರಕ್ಕೆ ತರೀಕೆರೆ ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಕಲ್ಲತ್ತಗಿರಿ ಜಲಪಾತ ಮೈದುಂಬಿ ಹರಿಯುತ್ತಿದೆ.

ಶಾಲೆಯ ಮೇಲ್ಚಾವಣಿಗೆ ಸಂಕಷ್ಟವಾದ ಜಿಟಿ ಜಿಟಿ ಮಳೆ

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗಂಗಾವತಿ ತಾಲೂಕಿನ ಬಸವನದುರ್ಗ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿಳುತ್ತಿದೆ. ಹೀಗಾಗಿ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು, ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಮತ್ತು ಗಾಳಿಯ ಅಬ್ಬರ ಮುಂದುವರೆದಿದ್ದು, ಭಾಗಮಂಡಲ-ಕರಿಕೆ ನಡುವಿನ ರಸ್ತೆಯ ಹಲವು ಭಾಗಗಗಳಲ್ಲಿ ಭೂ ಕುಸಿತವಾಗಿದೆ. ಭೂ ಕುಸಿತದ ಪರಿಣಾಮ ರಸ್ತೆಗೆ ಬೃಹತ್​ ಮರಗಳು ಉರುಳಿ ಸಂಚಾರ ಬಂದ್ ಆಗಿದೆ. ಇನ್ನೂ ಹೈಸೋಡ್ಲೂರು – ಬಿರುನಾಣಿ ರಸ್ತೆಯಲ್ಲೂ ಮರವೊಂದು ಉರುಳಿ ಸಂಚಾರ ಅಸ್ತವ್ಯಸ್ತವಾಗಿದೆ. ಒಟ್ಟಿನಲ್ಲಿ ಕೊನೆಗೂ ಕರುನಾಡಿನ ಮೇಲೆ ಕರುಣೆ ತೋರಿರುವ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಬರಗಾಲದ ಭೀತಿಗೆ ಬೆದರಿ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಭೀಮ’ನ ಆರ್ಭಟ.. ರೈತರು ಬಿತ್ತನೆ ಮಾಡಿದ ಬೆಳೆಗಳು ನೀರು ಪಾಲು

https://newsfirstlive.com/wp-content/uploads/2023/07/Bheema.jpg

Load More