newsfirstkannada.com

Karnataka Rain: ನಾಲ್ಕು ರೆಡ್​.. ಐದು ಆರೆಂಜ್.. ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​.. ಮಳೆ ಆರ್ಭಟದ 10 ಫೋಟೋಗಳು..!

Share :

27-07-2023

  15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಮಹಾ ಮಳೆ

  ಅತ್ತ ಮುಂಗಾರು ಅವಾಂತರ..ಇತ್ತ ಬೆಳೆಗಳಿಗೆ ರೋಗ

  ಭೀಮೆಗೆ ಆವೇಶ.. ದೇಗುಲಗಳು ಜಲಾವೃತ

ರಾಜ್ಯದಲ್ಲಿ ಅಬ್ಬರದ ಮಳೆಗೆ ನದಿಗಳು.. ಜಲಾಶಯಗಳು.. ಕೆರೆ-ಕಟ್ಟೆಗಳು.. ಉಕ್ಕಿ ಹರಿದಿವೆ.. ಎಲ್ಲೆಲ್ಲೂ ನೀರು ಭೋರ್ಗರೆಯುತ್ತಿದ್ದು, ಈ ವರ್ಷ ಬರಗಾಲನಾ? ಅಂತ ಆಲೋಚನೆಯಲ್ಲಿದ್ದ ಕರುನಾಡಿನ ಜನರ ಆತಂಕ ದೂರ ಮಾಡಿದೆ. ಆದ್ರೆ ಅವಾಂತರಗಳ ಸರಮಾಲೆಯನ್ನೇ ತನ್ನ ಕೊರಳಿಗೆ ಹಾಕಿಕೊಂಡು ವರುಣದೇವ ರೌದ್ರನರ್ತನ ಆಡುತ್ತಿದ್ದಂತೆ ಕಾಣ್ತಿದೆ.

ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ.. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿಗೆ ರೆಡ್ ಅಲರ್ಟ್​ ಘೋಷಿಸಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಡಗು, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​ ನೀಡಿದೆ.. ಬಾಗಲಕೋಟೆ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯಪುರ, ರಾಯಚೂರು, ಚಾಮರಾಜನಗರ, ಹಾಸನಕ್ಕೆ ಯೆಲ್ಲೋ ಅಲರ್ಟ್​ ನೀಡಲಾಗಿದೆ.

ತುಂಗಭದ್ರಾ, ಆಲಮಟ್ಟಿ ಭರ್ತಿಗೆ ಕೆಲವೇ ಟಿಎಂಸಿ ಬಾಕಿ

ಕಲ್ಯಾಣದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ ತುಂಬಿದೆ.. ಭಾರೀ ಮಳೆ ಕಾರಣ ಟಿಬಿ ಡ್ಯಾಂಗೆ ಒಳಹರಿವು ಹೆಚ್ಚಾಗಿದೆ.. ಆದ್ರೆ, ನಿರಂತರ ಮಳೆಗೆ ಜನ ಮಾತ್ರ ಕಂಗಾಲಾಗಿದ್ದಾರೆ.

ತುಂಗಭದ್ರಾ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಶೇ.70ರಷ್ಟು ಭರ್ತಿಯಾಗಿದೆ. ಆಲಮಟ್ಟಿ ಡ್ಯಾಂ 123.01 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.. ಸದ್ಯ 87.355ಟಿಎಂ‌ಸಿ ನೀರು ಸಂಗ್ರಹವಾಗಿದ್ದು, ರೈತರು ಖುಷ್​​ ಆಗಿದ್ದಾರೆ.

ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯ

ಭೀಮೆಗೆ ಆವೇಶ.. ದೇಗುಲಗಳು ಜಲಾವೃತ

ಇತ್ತ, ಭೀಮಾ ನದಿಗೂ ಆವೇಶ ಬಂದಿದೆ.. ಕಲಬುರಗಿ ಜಿಲ್ಲೆಯ ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್​ ಭರ್ತಿ ಆಗಿದ್ದು, 45 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.. ಇದರಿಂದ ಯಾದಗಿರಿ ತೀರದ ವಿರಾಂಜನೇಯ, ಕಂಗಳೇಶ್ವರ ದೇಗುಲಗಳು ಸಂಪೂರ್ಣ ಜಲಾವೃತವಾಗಿದೆ. ಇತ್ತ, ಬಿಸಿಲೂರಿನ ಜಲಪಾತ ಯಾದಗಿರಿ ಜಿಲ್ಲ್ಲೆ ಸೂರಗ್ ಫಾಲ್ಸ್​ನಲ್ಲಿ ಜಲರಾಶಿ ಉಕ್ತಿದೆ.

ಭೀಮಾ ನದಿ
ಭೀಮಾ ನದಿ

ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆ ಮುಳುಗಡೆ

ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿವೆ. ದೂದಗಂಗಾ, ವೇದಗಂಗಾ ನದಿಗೆ ಅಡ್ಡಲಾಗಿರುವ ಬ್ರಿಡ್ಜ್​ಗಳ ಮೇಲೆ ನೀರು ಹರಿತಿದೆ. ಚಿಕ್ಕೋಡಿ, ರಾಯಬಾಗ ತಲಾ ಒಂದು, ನಿಪ್ಪಾಣಿಯ 7 ಸೇತುವೆಗಳು ಜಲಾವೃತ ಆಗಿವೆ.. ಸಂಚಾರ ಬ್ಯಾನ್​ ಮಾಡಲಾಗಿದೆ.

ಮುಳುಗಿದ ಸೇತುವೆ
ಮುಳುಗಿದ ಸೇತುವೆ

ಅಪಾಯ ಮಟ್ಟ ಮೀರಿದ ಕೃಷ್ಣೆ.. ಬೈಕ ಸವಾರರ ಹುಚ್ಚಾಟ

ಬೆಳಗಾವಿಯ ಹಿರಣ್ಯಕೇಶಿ ನದಿಯ ಒಳಹರಿವು ಏರಿಕೆಯಾಗಿದೆ.. ಅಪಾಯ ಮಟ್ಟ ಮೀರಿ ನದಿ ಹರಿಯುತ್ತಿದ್ದು, ಕೆಲವು ಬೈಕ್​​ ಸವಾರರು ಹುಚ್ಚಾಟ ನಡೆಸಿದ್ದಾರೆ. ಹುಕ್ಕೇರಿ ಪೊಲೀಸರ ನಿರ್ಲಕ್ಷ್ಯತನವೂ ಇದರಲ್ಲಿ ಎದ್ದು ಕಾಣಿಸ್ತಿದೆ.

ಬೈಕ್ ಸವಾರನ ದುಸ್ಸಾಹಸ
ಬೈಕ್ ಸವಾರನ ದುಸ್ಸಾಹಸ

ಇದು ಹಾವೇರಿ ಜಿಲ್ಲೆ ಸವಣೂರಿನ ಹೊವಿನಶಿಗ್ಲಿ ಗ್ರಾಮದ ದೃಶ್ಯ. ಮಳೆಗೆ ಮನೆಯೊಂದು ನೆಲಸಮಗೊಂಡ ದೃಶ್ಯ ಮೊಬೈಲ್​​ನಲ್ಲಿ ಸೆರೆ ಆಗಿದೆ.. ಗಂಗವ್ವ ನಾಗಪ್ಪ ಕಟಗಿ ಎಂಬುವರ ಮನೆ ಧರೆಗುರುಳಿದ್ದು ರೈತ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ.

ಮನೆಗೆ ಹಾನಿ
ಮನೆಗೆ ಹಾನಿ

ಸೋರುತಿದೆ ಐತಿಹಾಸಿಕ ಲಕ್ಷ್ಮೇಶ್ವರದ ಸೋಮೇಶ್ವರ ದೇಗುಲ

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಐತಿಹಾಸಿಕ ಸೋಮೇಶ್ವರ ದೇಗುಲ ಸಂಪೂರ್ಣ ಸೂರುತ್ತಿದೆ.. ಇದು ಇಲ್ಲಿಗೆ ಬರೋ ಭಕ್ತರ ಕಳವಳಕ್ಕೆ ಕಾರಣವಾಗಿದೆ.. ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್ ಇದೇ ಜಿಲ್ಲೆಯವರಾಗಿದ್ದು, ಈ ಬಗ್ಗೆ ಗಮನ ಹರಿಸಬೇಕು ಅಂತ ಭಕ್ತರು ಒತ್ತಾಯಿಸ್ತಿದ್ದಾರೆ.

ಸೋರುತಿರುವ ದೇಗುಲ
ಸೋರುತಿರುವ ದೇಗುಲ

ಅತ್ತ ಮುಂಗಾರು ಅವಾಂತರ.. ಇತ್ತ ಬೆಳೆಗಳಿಗೆ ರೋಗ ಬಾದೆ
ಬಾಗಲಕೋಟೆ ಜಿಲ್ಲೆಯ ರೈತರ ಬೆಳೆಗಳಿಗೆ ವಿವಿಧ ರೋಗಗಳ ಕಾಟ‌‌ ಶುರುವಾಗಿದೆ.‌. ಹೆಸರು ಬೆಳೆ ಬದಲಾಗಿ ಮಳೆ ವಿಳಂಬದಿಂದ ಮೆಕ್ಕೆಜೋಳಕ್ಕೆ ವಾಲಿದ್ದ ರೈತರಿಗೀಗ ರೋಗಬಾಧೆ ಕಾಡ್ತಿದೆ.. ಔಷಧಿ ಸಿಂಪಡಿಸಿದ್ರೂ, ಮಳೆಯಿಂದ ನಿಯಂತ್ರಣ ಆಗ್ತಿಲ್ಲ.. ಇದು ಚಿತ್ರದುರ್ಗದ ಭರಮಸಾಗರ ಹೋಬಳಿಯಲ್ಲಿನ ದೃಶ್ಯ.. ಕಳೆದ 8 ದಿನದಿಂದ ಮಳೆ ಆಗ್ತಿದ್ದು, ಮೆಕ್ಕೆಜೋಳ ಬೆಳೆ ಸಂಪೂರ್ಣ ಜಲಾವೃತವಾಗಿದೆ.. ಮಳೆ ಆಟಕ್ಕೆ ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ..

ರೋಗ ಹಿಡಿದ ಬೆಳೆಗಳು
ರೋಗ ಹಿಡಿದ ಬೆಳೆಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Rain: ನಾಲ್ಕು ರೆಡ್​.. ಐದು ಆರೆಂಜ್.. ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​.. ಮಳೆ ಆರ್ಭಟದ 10 ಫೋಟೋಗಳು..!

https://newsfirstlive.com/wp-content/uploads/2023/07/Aganashini.jpg

Load More