newsfirstkannada.com

×

ರಾಜ್ಯದಲ್ಲಿ ಇನ್ನೆಷ್ಟು ದಿನ ಮಳೆ? ಹವಾಮಾನ ಇಲಾಖೆ ಕೊಟ್ಟ ಸೂಚನೆಯೇನು?

Share :

Published July 29, 2023 at 6:25am

    ಮಳೆಯಿಂದ ಜಲಾಶಯಗಳು ತುಂಬಿ ತುಳುಕಾಟ

    ಶ್ರೀಕಂಠನಿಗೂ ಜಲದಿಗ್ಬಂಧನ ವಿಧಿಸಿದ ವರುಣ

    ‘ಕಪಿಲೆ’ಯ ಭೋರ್ಗರೆತಕ್ಕೆ ಬೆಚ್ಚಿಬಿದ್ದ ಜನ!

ಬೆಂಗಳೂರು: ಕರುನಾಡಿನಲ್ಲಿ ಮೇಘರಾಜನ ನರ್ತನ ಮುಂದುವರಿದಿದೆ. ಸತತವಾಗಿ ಸುರಿಯುತ್ತಿರೋ ಮಳೆಗೆ ಭೂತಾಯಿಯ ಒಡಲು ತೊಯ್ದು ತೊಪ್ಪೆಯಾಗಿದೆ. ಜಲಾಶಯಗಳ ನೀರಿನ ಮಟ್ಟ ಕ್ಷಣಕ್ಕೂ ಏರಿಕೆಯಾಗುತ್ತಿದೆ. ನದಿಗಳ ಆರ್ಭಟಕ್ಕೆ ಸೇತುವೆಗಳು ಮುಳುಗಡೆಯಾಗಿವೆ. ಹಲವೆಡೆ ಜಲಮಾತೆ ದೇವರಿಗೂ ಜಲದಿಗ್ಬಂಧನ ವಿಧಿಸಿಬಿಟ್ಟಿದ್ದಾಳೆ.

ಮಳೆರಾಯನ ಆರ್ಭಟ.. ‘ಕಪಿಲೆ’ಯ ಭೋರ್ಗರೆತ!
ಸೇತುವೆ ಮುಳುಗಡೆ.. ಶ್ರೀಕಂಠನಿಗೂ ಜಲದಿಗ್ಬಂಧನ

ಕೇರಳ ಭಾಗದಲ್ಲಿ ಭಾರೀ ಮಳೆಯಿಂದ ಕಪಿಲಾ ನದಿಯ ತಕಧಿಮಿತ ಮಿತಿ ಮೀರಿದೆ. ಮೈಸೂರಿನ ಹೆಚ್‌.ಡಿ. ಕೋಟೆ ಬಳಿಯ ಕಬಿನಿ ಡ್ಯಾಂನಲ್ಲಿ ಹೊರ ಹರಿವು ಹೆಚ್ಚಳವಾಗಿದೆ. ಜಲಾಶಯದಿಂದ ಹೆಚ್ಚು ನೀರನ್ನ ನದಿಗೆ ಬಿಟ್ಟಿರೋದ್ರಿಂದ ಹೆಚ್.ಡಿ. ಕೋಟೆ-ಸರಗೂರು ಸೇತುವೆ ನದಿಯ ನೀರು ಹರಿಯುತ್ತಿದೆ. ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಳವಾಗಿದ್ದು, ಕಪಿಲಾ ನದಿಗೆ ನೀರು ಬಿಡಲಾಗಿದೆ. ಪರಿಣಾಮ ನದಿಯ ಮಧ್ಯದಲ್ಲಿರೋ 16 ಕಾಲು ಮಂಟಪ ಕೂಡಾ ಮುಳುಗಡೆಯಾಗಿದೆ. ಅಲ್ಲದೇ ಶ್ರೀಕಂಠೇಶ್ವರ ದೇವಸ್ಥಾನದ ಬಳಿಯಲ್ಲಿರೋ ಸ್ನಾನಘಟ್ಟ ಕೂಡಾ ಜಲಾವೃತವಾಗಿದೆ. ಹೀಗಾಗಿ ಶ್ರೀಕಂಠೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಮೈಕ್‌ ಮೂಲಕ ನದಿಗೆ ತೆರಳದಂತೆ ಮನವಿ ಮಾಡಿದೆ. ಆದ್ರೂ ಭಕ್ತರು ಅಪಾಯವನ್ನೂ ಲೆಕ್ಕಿಸದೇ ನದಿಯಲ್ಲಿ ಸ್ನಾನ, ಪೂಜೆ-ಪುನಸ್ಕಾರಗಳಕ್ಕೆ ತೆರಳುತ್ತಿದ್ದಾರೆ.

‘ಕಾಗಿಣಾ’ ನದಿಯ ನರ್ತನ.. ಸೇತುವೆ ಮುಳುಗಡೆ

ಉತ್ತರ ಕರ್ನಾಟಕದಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದ ಕಲಬುರಗಿ ಜಿಲ್ಲೆಯ ಮಳಖೇಡ ಬಳಿ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ‌ ಮುಳುಗಡೆಯಾಗಿದೆ. ಪರಿಣಾಮ, ಸೇಡಂ-ಕಲಬುರಗಿ-ಹೈದ್ರಾಬಾದ್​ನ ಸಂಪರ್ಕ ಕಡಿತಗೊಂಡಿದೆ. ಮತ್ತೊಂದೆಡೆ ಕಲಬುರಗಿಯಲ್ಲಿ ದಂಡೋತಿ ಬಳಿಯ ಸೇತುವೆ ಜಲಾವೃತವಾಗಿದೆ. ಇಲ್ಲಿಯೂ ಕೂಡಾ ಕಾಗಿಣಾ ನದಿಯ ಅಬ್ಬರಕ್ಕೆ ಸೇತುವೆ ಮುಳುಗಿದ್ದು, ಕಲಬುರಗಿ- ಚಿತ್ತಾಪುರ ಮಾರ್ಗ ಮಧ್ಯದ ವಾಹನ ಸಂಚಾರ ಸ್ಥಗಿತಗೊಂಡಿದೆ. ಬ್ರಿಡ್ಜ್‌ ಸಂಪರ್ಕ ಕಡಿತದಿಂದ ಶಾಲಾ ಮಕ್ಕಳು, ರೈತರು, ವಾಹನ ಸವಾರರು ಪರದಾಡುವಂತಾಗಿದೆ.

ರಾಯಚೂರಲ್ಲಿ ಮಳೆಯ ಮೊರೆತ.. ನೀರಲ್ಲಿ ಮಕ್ಕಳಾಟ

ಬಿಸಿಲನಾಡು ರಾಯಚೂರಿನಲ್ಲೂ ಕಳೆದ 10 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜಿಲ್ಲೆಯ ಹಳ್ಳ, ಕೊಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ಇನ್ನೂ ಜಿಲ್ಲೆಯ ಡೊಂಗರಾಂಪುರದ ಕೆರೆ ಕೋಡಿ ಹರಿದು ಗ್ರಾಮಗಳಿಗೆ ನೀರು ನುಗ್ಗಿದೆ. ಹೀಗೆ ಹರಿಯೋ ನೀರಿನಲ್ಲಿ ಮಕ್ಕಳು ಆಟವಾಡುತ್ತಾ ಎಂಜಾಯ್‌ ಮಾಡ್ತಿದ್ದಾರೆ. ನೀರಿನಲ್ಲಿ ಮೀನು ಹಿಡಿಯುತ್ತಾ ಜಾಲಿ ಮೂಡ್‌ನಲ್ಲಿದ್ದಾರೆ. ಆದ್ರೆ, ಸ್ವಲ್ಪ ಯಾಮಾರಿದ್ರೂ ಅಪಾಯವಂತೂ ಕಟ್ಟಿಟ್ಟ ಬುತ್ತಿ.

ಮಾಯದಂತ ಮಳೆ.. ಮದಗದ ಕೆರೆಗೆ ಜೀವಕಳೆ

ಏಲಕ್ಕಿ ನಾಡು ಹಾವೇರಿಯಲ್ಲಿ ಸುರಿದಿರೋ ಮಾಯದಂತ ಮಳೆಗೆ ಮಾಸೂರಿನ ಬಳಿ ಮದಗದ ಕೆರೆಗೆ ಜೀವಕಳೆ ಬಂದಿದೆ. ಐತಿಹಾಸಿಕ ಕೆರೆಗೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ. ಹೀಗೆ ಮೈದುಂಬಿರೋ ಕೆರೆಯ ನೋಟ ನಯನ ಮನೋಹರವಾಗಿದೆ. ಈ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡ್ತಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ಮಳೆರಾಯನ ಆರ್ಭಟಕ್ಕೆ ಭತ್ತಿ ಹೋಗಿದ್ದ ಹಳ್ಳಕೊಳ್ಳಗಳು ಭೋರ್ಗರೆದು ಹರಿಯುತ್ತಿವೆ. ಕೆರೆಗಳಿಗೂ ಜೀವಕಳೆ ಬಂದಿದೆ. ಜಲಾಶಯಗಳು ತುಂಬಿ ತುಳುಕುತ್ತಿವೆ. ಆದ್ರೆ, ಅಲ್ಲಲ್ಲಿ ವರುಣನ ಹೊಡೆತಕ್ಕೆ ಕೆಲವು ಅವಾಂತರಗಳೂ ಸೃಷ್ಟಿಯಾಗಿವೆ. ಇನ್ನೂ ಒಂದು ವಾರಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ. ಹೀಗಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಬೇಕು ಎಂದು ಹವಾಮಾನ ಇಲಾಖೆ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಇನ್ನೆಷ್ಟು ದಿನ ಮಳೆ? ಹವಾಮಾನ ಇಲಾಖೆ ಕೊಟ್ಟ ಸೂಚನೆಯೇನು?

https://newsfirstlive.com/wp-content/uploads/2023/07/dam-4.jpg

Load More