newsfirstkannada.com

ರಾಜ್ಯಾದ್ಯಂತ ಭಾರೀ ಮಳೆ; ಮಂಗಳೂರು ಪಂಪ್‌ವೆಲ್ ಜಲಾವೃತ

Share :

03-07-2023

    ರಾಜ್ಯದ ಹಲವು ಕಡೆ ಮಳೆರಾಯನ ಆರ್ಭಟ ಜೋರು

    ಮುಂದಿನ 4 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಸಾಧ್ಯತೆ

    ಧಾರಾಕಾರವಾಗಿ ಸುರಿದ ಮಳೆಗೆ ಪಂಪ್‌ವೆಲ್ ಜಲಾವೃತ

ಬೆಂಗಳೂರು: ರಾಜ್ಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದೆ. ಇಂದು ಸಹ ಸಿಲಿಕಾನ್​​ ಸಿಟಿಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ದಿಢೀರ್‌ ಮಳೆಯಿಂದ ರಸ್ತೆಬದಿ ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ. ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನು, ಕಾರ್ಪೊರೇಷನ್ ಸರ್ಕಲ್​​​, ಶಾಂತಿನಗರ, ಮೆಜೆಸ್ಟಿಕ್, ಕೆ.ಆರ್‌ ಮಾರ್ಕೆಟ್, ವಿಜಯನಗರ, ರಾಜಾಜಿನಗರ, ಶೇಷಾದ್ರಿಪುರಂ, ಬಸವನಗುಡಿ, ಬಾಣಸವಾಡಿ, ಸದಾಶಿವನಗರ, ನಾಯಂಡಹಳ್ಳಿ, ವಸಂತನಗರ, ಹೆಬ್ಬಾಳ, ಮಲ್ಲೇಶ್ವರಂ, ಮೈಸೂರು ರಸ್ತೆ, ಕೋರ ಮಂಗಲ ಸುತ್ತಮುತ್ತ ಹಲವು ಭಾಗಗಳಲ್ಲಿ ಮಳೆಯಾಗಿದೆ.

ಇನ್ನು, ಇದೇ ಮೊದಲ ಬಾರಿಗೆ ಮಂಗಳೂರು ನಗರದ ಪಂಪ್‌ವೆಲ್ (ಮಹಾವೀರ) ವೃತ್ತ ಪೂರ್ಣ ಜಲಾವೃತಗೊಂಡಿದೆ. ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಪಂಪ್‌ವೆಲ್ ಮೇಲ್ಸೇತುವೆ ಅಡಿಭಾಗ ಸುತ್ತಲು ನೀರು ತುಂಬಿದ ಕಾರಣ ಮಂಗಳೂರು- ಬೆಂಗಳೂರು ಸಂಪರ್ಕ ಸ್ಥಗಿತಗೊಂಡಿದೆ.

ಇತ್ತ ವಿಜಯನಗರದ ಹೊಸಪೇಟೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಗೆ ನಗರ ತಗ್ಗುಪ್ರದೇಶಕ್ಕೆ ಮಳೆ ನೀರು ನುಗ್ಗಿದೆ. ಹೊಸಪೇಟೆಯ ಚಪ್ಪರದಳ್ಳಿ, SR ನಗರ, ಬಸವೇಶ್ವರ ಬಡಾವಣೆ, ಇಂದಿರಾ ನಗರ‌, MJ ನಗರ ಸೇರಿದಂತೆ 100ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರ ಪರಿಣಾಮ ಮಳೆಯ ನೀರು ನುಗ್ಗಿ ಸಮಸ್ಯೆ ಉಂಟಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಾದ್ಯಂತ ಭಾರೀ ಮಳೆ; ಮಂಗಳೂರು ಪಂಪ್‌ವೆಲ್ ಜಲಾವೃತ

https://newsfirstlive.com/wp-content/uploads/2023/07/rain-9.jpg

Load More