newsfirstkannada.com

ಇಡೀ ರಾಜ್ಯಾದ್ಯಂತ ಮಳೆಯಿಂದ ಭಾರೀ ಅವಾಂತರ; ಎಲ್ಲೆಲ್ಲಿ ಏನಾಯ್ತು? ಇಲ್ಲಿದೆ ಡೀಟೈಲ್ಸ್​!

Share :

29-07-2023

    ​ಶರತ್​ಗಾಗಿ ಡ್ರೋಣ್ ಕಣ್ಣಿನಿಂದ ತೀವ್ರ​ ಶೋಧ

    ವರುಣನ ಹೊಡೆತಕ್ಕೆ ನೆಲಕಚ್ಚಿದ 283 ಮನೆಗಳು

    ಹರಿಯುವ ನೀರಲ್ಲಿ ಮೀನು ಹಿಡಿದು ಮಕ್ಕಳು ಖುಷ್

ರಾಜ್ಯದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಎಲ್ಲೆಡೆ ಮಳೆರಾಯನ ಆರ್ಭಟಕ್ಕೆ ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಅಲ್ಲಲ್ಲಿ ಮಳೆರಾಯ ಮನೆಗಳನ್ನು ನಾಶ ಮಾಡಿದ್ದಾನೆ. ಆದರೆ ಅಪಾಯ ಅಂತ ಗೊತ್ತಿದ್ದು ಗೊತ್ತಿದ್ದು ಜನರು ಆಪತ್ತಿಗೆ ವೀಳ್ಯದೆಲೆ ಕೊಟ್ಟು ಆಹ್ವಾನಿಸುತ್ತಿದ್ದಾರೆ. ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಎಲ್ಲೆಡೆ ನೀರೋ ನೀರು ಕಂಡುಬರುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ತುಳುಕುತ್ತಿವೆ. ಆದ್ರೆ ಇದೇ ವರುಣನ ಅಬ್ಬರದಿಂದ ಸೃಷ್ಟಡಿಯಾದ ಅವಾಂತರಗಳು, ಅನಾಹುತಗಳು ಜನರ ಜೀವನವನ್ನ ಅಸ್ತವ್ಯಸ್ತ ಮಾಡಿದೆ.

ನಾಲೆಗೆ ಬಿದ್ದ ಕಾರು ಚಾಲಕ ಶವವಾಗಿ ಪತ್ತೆ

ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ವಿಸಿ ನಾಲೆಗೆ ಕಾರು ಬಿದ್ದು ನಾಪತ್ತೆಯಾಗಿದ್ದ ಚಾಲಕ ಲೋಕೇಶ್ ಶವವಾಗಿ ಪತ್ತೆಯಾಗಿದ್ದಾನೆ. ತಡರಾತ್ರಿ ಕಾರ್ಯಾಚರಣೆ ಮಾಡಿ ನಾಲೆಗೆ ಬಿದ್ದಿದ್ದ ಕಾರನ್ನ ಮೇಲೆತ್ತಲಾಗಿತ್ತು. ಆದ್ರೆ, ಚಾಲಕ ಮಾತ್ರ ಪತ್ತೆಯಾಗಿರಲಿಲ್ಲ. ಕಾರು ಬಿದ್ದ ಜಾಗದಿಂದ ಒಂದು ಕಿಲೋ ಮೀಟರ್​ ದೂರದಲ್ಲಿ ಚಾಲಕ ಲೊಕೇಶ್​ ಶವ ಪತ್ತೆಯಾಗಿದೆ. ಸದ್ಯ ಲೋಕೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

6 ದಿನವಾದ್ರೂ ಪತ್ತೆಯಾಗದ ಶರತ್​ಗಾಗಿ ಡ್ರೋಣ್​ ಶೋಧ

ಉಡುಪಿಯ ಕೊಲ್ಲೂರು ಅರಿಶಿಣಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ನೀರು ಪಾಲಾದ ಶರತ್ ಕುಮಾರ್​​ ಪತ್ತೆಗಾಗಿ 6ನೇ ದಿನವೂ ಶೋಧ ಕಾರ್ಯ ಮುಂದುವರಿದಿದೆ. ಭದ್ರಾವತಿ ಮೂಲದ ಶರತ್, ಅರಿಶಿನ ಗುಂಡಿ ಜಲಪಾತದ ಬಳಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದ. ಕಳೆದ 5 ದಿನಗಳಿಂದ ಮಲ್ಪೆ ಮುಳುಗು ತಜ್ಞರ ತಂಡ, ಜ್ಯೋತಿರಾಜ್ ತಂಡ, ಅಗ್ನಿಶಾಮಕ ದಳ, ಮಂಗಳೂರು ಎಸ್​ಡಿಆರ್​ಎಫ್, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಹುಡುಕಾಟ ನಡೆಸಲಾಗಿತ್ತು. ಇವತ್ತು ಡ್ರೋನ್ ಮೂಲಕವೂ ಶರತ್​ಗಾಗಿ ಹುಡುಕಾಟ ನಡೆಸಲಾಗಿದೆ.

ಮನೆ ಗೋಡೆ ಕುಸಿದು ಯುವಕ ಸಾವು

ಭಾರೀ ಮಳೆಯಿಂದ ಬೆಳಗಾವಿಯ ಚಿಕ್ಕೋಡಿ ಪಟ್ಟಣದಲ್ಲಿ ಮನೆ ಗೋಡೆ ಕುಸಿದು ಯುವಕ ಸಾವನ್ನಪ್ಪಿದ್ದಾನೆ. ಗೋಡೆ ಕುಸಿದು ಕಾಶಿನಾಥ ಅಪ್ಪಾಸಾಬ ಸುತಾರ ಮೃತಪಟ್ಟಿದ್ದಾನೆ. ಕುಟುಂಬಕ್ಕೆ ಆಸರೆಯಾಗಬೇಕಿದ್ದ ಬೆಳೆದ ಮಗನನ್ನು ಕಳೆದುಕೊಂಡ ಸುತಾರ್​​ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

ಮಳೆಗೆ ದಾವಣಗೆರೆಯಲ್ಲಿ 30ಕ್ಕೂ ಅಧಿಕ ಮನೆ ಕುಸಿತ

ಇನ್ನು ವರುಣನ ಅಬ್ಬರಕ್ಕೆ ದಾವಣಗೆರೆಯಲ್ಲಿ 30ಕ್ಕೂ ಅಧಿಕ ಮನೆಗಳು ಕುಸಿದಿವೆ. 10 ದಿನಗಳಿಂದ ಸತತ ಮಳೆ ಸುರಿದ ಪರಿಣಾಮ ಹಲವು ಮನೆಗಳು ಕುಸಿದಿದ್ದು ಸೂರು ಕಳೆದುಕೊಂಡ ಜನರು ಕಂಗಾಲಾಗಿದ್ದಾರೆ. ಸತತ ಗಾಳಿ ಮಳೆಯಿಂದ ಕೆಲ ಮನೆಗಳು ಧರಶಾಹಿಯಾಗಿವೆ. ಬಿದ್ದ ಮನೆಯಲ್ಲೇ ಅಂಗೈಯಲ್ಲಿ ಜೀವ ಹಿಡಿದುಕೊಂಡು ಜನರು ವಾಸಿಸುತ್ತಿದ್ದಾರೆ. ಸದ್ಯ ಬಿದ್ದ ಮನೆಗಳ ಸರ್ವೇಗೆ ಕಂದಾಯ ಇಲಾಖೆ ಮುಂದಾಗಿದೆ.

ವರುಣನ ಹೊಡೆತಕ್ಕೆ ನೆಲಕಚ್ಚಿದ 283 ಮನೆಗಳ ಗೋಡೆಗಳು

ಮಳೆರಾಯನ ಹೊಡೆತಕ್ಕೆ ಕಲಬುರಗಿಯ ಅಫಜಲಪುರ, ಶಾಹಬಾದ್ ಕಾಳಗಿಯಲ್ಲಿ 283 ಮನೆಗಳ ಗೋಡೆಗಳು ಹಾಗೂ ಛಾವಣಿಗಳು ನೆಲಕಚ್ಚಿವೆ. ಜೊತೆಗೆ 281 ವಿದ್ಯುತ್ ಕಂಬಗಳು ಧರೆಗುರುಳಿವೆ. ಮಹಾ ಮಳೆಗೆ 35 ವಿದ್ಯುತ್ ಟ್ರಾನ್ಸಫಾರ್ಮರ್ ಕೆಟ್ಟು ಹೋಗಿವೆ. ಸದ್ಯ ಇವುಗಳ ದುರಸ್ತಿಯಲ್ಲಿ ಜೆಸ್ಕಾಂ ಸಿಬ್ಬಂದಿ ಬ್ಯುಸಿಯಾಗಿದ್ದಾರೆ. ಒಂದ್ವೇಳೆ ಭೀಮಾ, ಕಾಗಿಣಾ ನದಿಯಲ್ಲಿ ಪ್ರವಾಹ ಸಂಭವಿಸಿದ್ರೆ 159 ಗ್ರಾಮಗಳು ಸಂಕಷ್ಟಕ್ಕೊಳಗಾಗಲಿವೆ. ಇನ್ನು ಮಳೆ ಅಬ್ಬರಕ್ಕೆ ಜಿಲ್ಲೆಯಲ್ಲಿ 147 ಕಿಲೋ ಮೀಟರ್ ರಸ್ತೆ ಹಾನಿಯಾಗಿದ್ರೆ 84 ಸೇತುವೆಗಳು, 89 ಶಾಲಾ ಕೊಠಡಿಗಳು, 38 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ತಾಲೂಕುವಾರು ತುರ್ತು ನಿರ್ವಹಣಾ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ದವಾಗಿದೆ.

ಹರಿಯೋ ನೀರಲ್ಲಿ ಜೀವದ ಜೊತೆ ಜನರ ಚೆಲ್ಲಾಟ

ಇನ್ನು ಭಾರೀ ಮಳೆಯಿಂದ ಹರಿಯೋ ನೀರಲ್ಲಿ ಜೀವದ ಜೊತೆ ಜನರು ಚೆಲ್ಲಾಟವಾಡ್ತಿದ್ದಾರೆ. ಕಲಬುರಗಿ ಚಿಂಚೋಳಿಯ ಚಂದ್ರಂಪಳ್ಳಿ ಜಲಾಶಯದಲ್ಲಿ ರಭಸವಾಗಿ ಹರಿಯೋ ನೀರಲ್ಲಿ ಮೀನು ಹಿಡಿಯೋಕೆ ತಮ್ಮ ಜೀವವನ್ನು ಪಣಕ್ಕಿಡ್ತಿದ್ದಾರೆ. ಅಪಾಯ ಲೆಕ್ಕಿಸದೆ ಮೀನು ಹಿಡಿಯುತ್ತಿದ್ದಾರೆ. ಎರಡು ಗೇಟ್​ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗ್ತಿದೆ. ಇಂತದ್ರಲ್ಲ ಜಲಾಶಯದ ಅಧಿಕಾರಿಗಳ ಮಾತಿಗೂ ಕೇರ್​ ಮಾಡದೇ ಅಪಾಯ ಅಂತ ಗೊತ್ತಿದ್ದರೂ ಜನರು ಮೀನಿಗಾಗಿ ಹುಚ್ಚಾಟ ಮೆರೆಯುತ್ತಿದ್ದಾರೆ. ಇವರಿಗೆ ಜೀವಕ್ಕಿಂತ ಮೇನೇ ಹೆಚ್ಚಾಗೋಗಿದೆ.

ಹರಿಯುವ ನೀರಿನಲ್ಲಿ ಮೀನು ಹಿಡಿಯುತ್ತಿರುವ ಮಕ್ಕಳು

ರಾಯಚೂರಲ್ಲಿ 10 ದಿನಗಳಿಂದ ಸತತ ಮಳೆ ಹಿನ್ನೆಲೆ ಹಳ್ಳ, ಕೊಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ಕೆರೆ ಕೋಡಿ ಒಡೆದು ಗ್ರಾಮಗಳಲ್ಲಿ ನೀರು ಹರಿಯುತ್ತಿದೆ. ಇದೇ ನೀರಲ್ಲಿ ಮಕ್ಕಳು ಮೀನು ಹಿಡಿಯುತ್ತಿದ್ದಾರೆ. ಒಟ್ಟಾರೆ ಮಳೆರಾಯನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ನಿರಾಶ್ರಿತರ ಕೇಂದ್ರ ತೆರೆದು ಜನರ ಕಷ್ಟಕ್ಕೆ ಸ್ಪಂದಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಡೀ ರಾಜ್ಯಾದ್ಯಂತ ಮಳೆಯಿಂದ ಭಾರೀ ಅವಾಂತರ; ಎಲ್ಲೆಲ್ಲಿ ಏನಾಯ್ತು? ಇಲ್ಲಿದೆ ಡೀಟೈಲ್ಸ್​!

https://newsfirstlive.com/wp-content/uploads/2023/07/rain-23-1.jpg

Load More