newsfirstkannada.com

ಮಹಾರಾಷ್ಟ್ರದಲ್ಲಿ ಮಲಗಿದವರ ಮೇಲೆ ಗುಡ್ಡ ಕುಸಿತ; ಮೃತರ ಸಂಖ್ಯೆ 86ಕ್ಕೆ ಏರಿಕೆ

Share :

23-07-2023

    ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಗುಡ್ಡ ಕುಸಿತ ಪ್ರಕರಣ

    ಭಾರೀ ಭೂಕುಸಿತದಲ್ಲಿ ಸಾವಿನ ಸಂಖ್ಯೆ 86ಕ್ಕೆ ಏರಿಕೆ

    ವರುಣನ ಆರ್ಭಟಕ್ಕೆ ಹಲವು ಕಡೆಗಳಲ್ಲಿ ಪ್ರವಾಹ ಭೀತಿ

ರಾಯಗಢ: ಮಹಾರಾಷ್ಟ್ರದ ಐರ್ಶಲ್​ವಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಸಾವನ್ನಪ್ಪಿರುವವರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ ಒಟ್ಟು 229 ಜನ ಅಪಾಯದಲ್ಲಿ ಸಿಲುಕಿದ್ರು. ಇದರಲ್ಲಿ 111 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, 86 ಮಂದಿ ಕಾಣೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಬುಡಕಟ್ಟು ಸಮುದಾಯ ವಾಸಿಸುತ್ತಿದ್ದ ಗ್ರಾಮದಲ್ಲಿದ್ದ ಗುಡ್ಡವೊಂದು ಕುಸಿದು ಮನೆಗಳ ಮೇಲೆ ಬಿದ್ದಿದೆ. ಕಳೆದ ಬುಧವಾರ ರಾತ್ರಿ ದುರ್ಘಟನೆ ಸಂಭವಿಸಿದ ಪರಿಣಾಮ ಭಾರಿ ಅನಾಹುತ ನಡೆದಿದೆ. ರಕ್ಷಣಾಕಾರ್ಯ ನಿನ್ನೆವರೆಗೆ ನಡೆದಿದ್ದು 86 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಲಾಗಿದೆ.

ಇದನ್ನು ಓದಿ: ಭೀಕರ ಗುಡ್ಡ ಭೂಕುಸಿತ.. ಒಂದೇ ಕುಟುಂಬದ 9 ಮಂದಿ ಸೇರಿ ಒಟ್ಟು 25 ನಿವಾಸಿಗಳು ಸಾವು.. ಇನ್ನೂ 86 ಜನ ಮಿಸ್ಸಿಂಗ್

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯು ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ‌ಮಹಾರಾಷ್ಟ್ರ ಕೈಗಾರಿಕಾ ಸಚಿವ ಉದಯ್ ಸಾಮಂತ್  ಘೋಷಣೆ ಮಾಡಿದ್ದಾರೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲು ಸರ್ಕಾರದ ನಿರ್ಧಾರ ಮಾಡಿದೆ.

ಇನ್ನು, ಮಹಾರಾಷ್ಟ್ರದ ರಾಯಗಢ ಜಿಲ್ಲೆ ಸೇರಿದಂತೆ ಇನ್ನು ಹಲವು ಕಡೆಗಳಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ. ನಿಷೇಧಾಜ್ಞೆ ಜುಲೈ 23 ರಿಂದ ಆಗಸ್ಟ್ 6ರವರೆಗೆ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದ್ದಾರೆ. ಭೀಕರ ಮಳೆಗೆ ರಸ್ತೆಗಳು ನದಿಯಂತಾಗಿದೆ. ಕಾರು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಇದರ ಜೊತೆಗೆ ಜುಲೈ 27ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹೀಗಾಗಿ ಗುಜರಾತ್‌ನ ಜುನಾಗಡ್, ಜಾಮ್‌ನಗರ, ದೇವಭೂಮಿ ದ್ವಾರಕಾ, ಕಚ್, ಸೂರತ್‌ನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾರಾಷ್ಟ್ರದಲ್ಲಿ ಮಲಗಿದವರ ಮೇಲೆ ಗುಡ್ಡ ಕುಸಿತ; ಮೃತರ ಸಂಖ್ಯೆ 86ಕ್ಕೆ ಏರಿಕೆ

https://newsfirstlive.com/wp-content/uploads/2023/07/rain-8-2.jpg

Load More