newsfirstkannada.com

ಕರಾವಳಿ ಭಾಗದಲ್ಲಿ ಮುಂಗಾರು ಚುರುಕು; 4 ದಿನ ಭಾರೀ ಮಳೆ ಸುರಿಯುವ ಮುನ್ಸೂಚನೆ

Share :

05-07-2023

    ರಾಜ್ಯದ 6 ಜಿಲ್ಲೆಗಳಲ್ಲಿ 4 ದಿನ ಆರೆಂಜ್ ಅಲರ್ಟ್

    ಕಾಫಿನಾಡಲ್ಲಿ ಮುಂದುವರೆದ ಮಳೆ-ಗಾಳಿ ಅಬ್ಬರ

    ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ

ಕಳೆದೊಂದು ತಿಂಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮುಂಗಾರು ಕರಾವಳಿ ಭಾಗದಲ್ಲಿ ಚುರುಕುಗೊಂಡಿದೆ. ಮಲೆನಾಡು ಭಾಗಗಳಲ್ಲಿ ಕಡೆಗೂ ವರುಣ ದಯೆತೋರಿದ್ದು ಚಿಕ್ಕಮಗಳೂರಲ್ಲಿ ವರ್ಷಧಾರೆಯಾಗಿ ಕೆಲವೆಡೆ ಅವಾಂತರ ಸೃಷ್ಟಿಸಿದೆ. ಹವಾಮಾನ ಇಲಾಖೆ ರಾಜ್ಯದಲ್ಲಿ ಮುಂದಿನ 4 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಕೈ ಕೊಟ್ಟಿದ್ದ ಮುಂಗಾರು ಮತ್ತೆ ಶುರುವಾಗಿದೆ. ಕಳೆದೊಂದು ತಿಂಗಳು ಕಣ್ಣಾಮುಚ್ಚಾಲೆ ಆಡ್ತಿದ್ದ ವರುಣ ಜನರ ಕಷ್ಟವನ್ನ ನೋಡಿ ದಯೆ ತೋರಿದ್ದಾನೆ. ರಾಜ್ಯದ ಹಲವೆಡೆ ಮಳೆ ಅಬ್ಬರಿಸಿದ್ದು ರೈತ ಮಂದಹಾಸ ಬೀರಿದ್ದಾನೆ.

ಕರಾವಳಿಯಲ್ಲಿ ಮುಂಗಾರು ಚುರುಕು.. ಹೆಚ್ಚಿದ ಕಡಲ್ಕೊರೆತ

ಕಳೆದೊಂದು ತಿಂಗಳಿನಿಂದ ಡಲ್​ ಹೊಡೆದಿದ್ದ ಮುಂಗಾರು ಸದ್ಯ ಕರಾವಳಿಯಲ್ಲಿ ಚುರುಕುಗೊಂಡಿದೆ. ಮಂಗಳೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಭಾರೀ ವರ್ಷಧಾರೆ ಪರಿಣಾಮ ಕಡಲ ಕೊರೆತ ಶುರುವಾಗಿದೆ. ಇದರಿಂದ ಕಡಲ ಕಿನಾರೆಗೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಅದರಲ್ಲೂ ಬಟ್ಟಾಪಾಡಿ ಪ್ರದೇಶದಲ್ಲಿ ಕಡಲಕೊರೆತ ತೀವ್ರಗೊಂಡಿದ್ದು ಕ್ಷಣ ಕ್ಷಣವೂ ಭೂಮಿಯನ್ನು ‌ಕಡಲು ನುಂಗುತ್ತಿದೆ. ಹೀಗಾಗಿ ಬಟ್ಟಪ್ಪಾಡಿ ತೀರದ ಜನರಲ್ಲಿ ಆತಂಕ ಜೋರಾಗಿದೆ. ಅಲ್ಲದೇ ಜೋರು ಮಳೆ ಹಿನ್ನೆಲೆ ದ‌‌ಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು ಕೆಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉಡುಪಿಯಲ್ಲಿ ಕಡಲ್ಕೊರೆತ ತಡೆಗೆ ಹಾಕಿದ ತಡೆಗೋಡೆ ಸಮುದ್ರ ಪಾಲು

ಇನ್ನು, ಉಡುಪಿಯಲ್ಲೂ ಮಳೆರಾಯನ ಆರ್ಭಟ ಹೆಚ್ಚಾಗಿದೆ. ಪಡುಬಿದ್ರಿ ಸಮೀಪದ ಕಾಡಿಪಟ್ಣದಲ್ಲಿ ಕಡಲ್ಕೊರೆತ ಹೆಚ್ಚಾಗಿ ತಡೆಗೋಡೆ ಸಮುದ್ರ ಪಾಲಾಗಿದೆ. ಅಲ್ಲದೇ ಅಲೆಗಳ ಅಬ್ಬರಕ್ಕೆ ತೆಂಗಿನ ಮರಗಳು ಧರೆಗೆ ಉರುಳಿವೆ. ಮಣಿಪಾಲ ರಸ್ತೆ ಬದಿಯಲ್ಲಿ ಗುಡ್ಡ ಕುಸಿದಿದ್ರೆ ಬೀಡಿನಗುಡ್ಡೆಯ ನಾಗಬನದ ಬಳಿ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಸದ್ಯ ಉಡುಪಿ ಜಿಲ್ಲೆಯಲ್ಲಿ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ.

ಕಾಫಿನಾಡಲ್ಲಿ ಮುಂದುವರೆದ ಮಳೆ-ಗಾಳಿ ಅಬ್ಬರ

ಇನ್ನು ಕಾಫಿನಾಡಲ್ಲೂ ಮಳೆ-ಗಾಳಿ ಅಬ್ಬರ ಜೋರಾಗಿದೆ. ನಿರಂತರ ಮಳೆಯಿಂದ ವಾಹನಗಳು ನಿಯಂತ್ರಣ ತಪ್ಪುತ್ತಿವೆ. ಮಳೆಯಿಂದ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ರಸ್ತೆಗುರುಳಿದೆ. ಟಿಪ್ಪರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚನ್ನಡ್ಲು ಗ್ರಾಮದಲ್ಲಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಕೆಲ ಕಾಲ ರಸ್ತೆ ಸಂಪರ್ಕ ಅಸ್ತವ್ಯಸ್ತವಾಗಿತ್ತು.

ಚಿಕ್ಕಬಳ್ಳಾಪುರದಲ್ಲಿ ಮಳೆ.. ಸುರಸದ್ಮಗಿರಿ ಬೆಟ್ಟದಲ್ಲಿ ಜಲಪಾತ ಸೃಷ್ಟಿ

ಇನ್ನು ಚಿಕ್ಕಬಳ್ಳಾಪುರದಲ್ಲಿ ಮಳೆರಾಯನ ಅಬ್ಬರವೂ ಜೋರಾಗಿದ್ದು ಗುಡಿಬಂಡೆ ಪಟ್ಟಣದಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ಸುರಸದ್ಮಗಿರಿ ಬೆಟ್ಟದಲ್ಲಿ ಜಲಪಾತ ಸೃಷ್ಟಿಯಾಗಿ ಜಲಪಾತ ನೋಡಲು ಜನ ಮುಗಿಬಿದ್ದಿದ್ದಾರೆ. ಇನ್ನು ರಾಜ್ಯಾದ್ಯಂತ ಮುಂಗಾರು ಮಳೆಯ ಆರ್ಭಟ ಶುರುವಾಗಿದ್ದು ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆಯಂತೆ. 6 ಜಿಲ್ಲೆಗಳಲ್ಲಿ 4 ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜಪೇಟೆ, ಚಿತ್ರದುರ್ಗ, ದಕ್ಷಿಣ ಕನ್ನಡ ಸೇರಿದಂತೆ ಕೆಲವಡೆ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರಾವಳಿ ಭಾಗದಲ್ಲಿ ಮುಂಗಾರು ಚುರುಕು; 4 ದಿನ ಭಾರೀ ಮಳೆ ಸುರಿಯುವ ಮುನ್ಸೂಚನೆ

https://newsfirstlive.com/wp-content/uploads/2023/07/rain-1-1.jpg

Load More