newsfirstkannada.com

ಮಂಗಳೂರಲ್ಲಿ ಭಾರೀ ಮಳೆ, ಕೊಡಗು ಆರೆಂಜ್ ಅಲರ್ಟ್; ಉಳಿದ ಜಿಲ್ಲೆಗಳ ಸ್ಥಿತಿಗತಿ ಹೇಗಿದೆ?

Share :

05-07-2023

    ರಾಜ್ಯದಲ್ಲಿ ಹಲವೆಡೆ ವರುಣನ ಅರ್ಭಟ ಜೋರಾಗಿದೆ

    ಕರ್ನಾಟಕ ಕರಾವಳಿಯಲ್ಲಿ ಮಳೆ ಬಿರುಸುಗೊಂಡಿದೆ

    ರಾಜ್ಯದಲ್ಲಿ ಸಾವಿನ ಖಾತೆಯನ್ನ ಒಪನ್​ ಮಾಡಿದ ವರುಣ

ಮಳೆ.. ಮಳೆ.. ಮಳೆ.. ರಾಜ್ಯದಲ್ಲಿ ಹಲವೆಡೆ ವರುಣ ಅರ್ಭಟ ಜೋರಾಗಿದೆ. ಮುಂಗಾರು ತಿಂಗಳ ಬಳಿಕ ಆರಂಭವಾದ್ರು ಕೂಡ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಷ್ಟೇ ಅಲ್ಲದೇ. ಉತ್ತರ ಕನ್ನಡವೂ ಸೇರಿದಂತೆ ಸಂಪೂರ್ಣ ಕರ್ನಾಟಕ ಕರಾವಳಿಯಲ್ಲಿ ಮಳೆ ಬಿರುಸುಗೊಂಡಿದೆ. ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ಮಳೆ ಶುರುವಾಗಿ ಕೆಲದಿನಗಳೇ ಆಗಿದ್ರೂ. ಅಷ್ಟರಲ್ಲೇ ವರುಣ ಸಾವಿನ ಖಾತೆಯನ್ನ ಒಪನ್​ ಮಾಡಿದ್ದಾನೆ.

ಮಂಗಳೂರಲ್ಲಿ ಭಾರೀ ಮಳೆಗೆ ಮೊದಲ ಬಲಿ

ಕರಾವಳಿ ಭಾಗದಲ್ಲಿ ಭಾರೀ ಮಳೆಗೆ ಮಂಗಳೂರು ಹೊರ ವಲಯದ ಪಿಲಾರು ಎಂಬಲ್ಲಿ ಮೊದಲ ಬಲಿಯಾಗಿದೆ. ಮನೆ ಸಮೀಪ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ಪಿಲಾರು ಬಳಿಯ ನಿವಾಸಿ 55 ವರ್ಷದ ಸುರೇಶ್ ಗಟ್ಟಿ ಸಾವನ್ನಪ್ಪಿದ್ದಾರೆ. ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇನ್ನು ರಾಜ್ಯಕ್ಕೆ ಲೇಟ್​ ಆಗಿ ಎಂಟ್ರಿ ಕೊಟ್ಟ ವರುಣ ದೇವ. ಅಷ್ಟು ಬೇಗ ಒಂದು ಬಲಿ ಪಡೆದು ಬಿಟ್ಟನಲ್ಲಾ ಅಂತ ಜನ ಮಾತಾಡ್ಕೊಳ್ತಾ ಇದ್ದಾರೆ.

ಕರಾವಳಿ ಭಾಗದಲ್ಲಿ ಮತ್ತೆ ಶಾಲಾ-ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿನ್ನೆಯಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಮಂಗಳೂರು, ಮೂಲ್ಕಿ, ಉಳ್ಳಾಲ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಶಾಲೆಗಳು‌ ಹಾಗೂ‌ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿನ್ನೆ ರಜೆ ಘೋಷಿಣೆ ಮಾಡಿದ್ದರು. ವ್ಯಾಪಕ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿ ಎಚ್ಚರಿಕೆಯನ್ನ ನೀಡಿದೆ. ಇವತ್ತೂ ಸಹ ಭಾರೀ ಮಳೆಯಾಗುವ ಮುಸ್ಸೂಚನೆ ಇರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆಯನ್ನ ಮುಂದುವರೆಸಲಾಗಿದೆ. ಜಿಲ್ಲೆಯ ಎಲ್ಲಾ ಕಡೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆಯನ್ನೂ ನೀಡಿದೆ.

ಉಡುಪಿಯಲ್ಲೂ ರೆಡ್ ಅಲರ್ಟ್.. ಶಾಲಾ-ಕಾಲೇಜಿಗೆ ರಜೆ

ಉಡುಪಿಯಲ್ಲೂ ವರುಣನ ಅಬ್ಬರ ಮುಂದುವರಿದಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ಇವತ್ತು ಎಲ್ಲಾ ಶಾಲಾ-ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ರಜೆ ಘೋಷಿಸಿ ಅದೇಶ ಹೊರಡಿಸಿದ್ದಾರೆ. ಉಡುಪಿ ಮಾತ್ರವಲ್ಲದೇ ಕಾರ್ಕಳ. ಕುಂದಾಪುರ, ಬೈಂದೂರು, ಕಾಪು ಭಾಗದಲ್ಲೂ ಜಡಿ ಮಳೆಯಾಗುತ್ತಿದ್ದು,‌ ಕಡಲ್ಕೊರೆತ ಜೋರಾಗಿದೆ. ಪಡುಬಿದ್ರಿ ಸಮೀಪದ ಕಾಡಿಪಟ್ಟಣ. ಕಡಲ ಬದಿ ಪ್ರದೇಶಗಳಲ್ಲಿ ಕಡಲ್ಕೊರೆತ ಉಂಟಾಗಿದ್ದು, ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಇನ್ನು ಕಡಲ್ಕೊರೆತ ತಡೆಗೆ ಹಾಕಿದ್ದ ಕಲ್ಲು ಬಂಡೆಯ ತಡೆಗೋಡೆ ಸಮುದ್ರ ಪಾಲಾಗಿದ್ದು, ಅಲೆಗಳ ಅಬ್ಬರಕ್ಕೆ ತೆಂಗಿನ ಮರಗಳು ದರೆಗುರುಳಿವೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಸಮುದ್ರ ತೀರದ ಹಾಗೂ ನದಿ ತೀರದಲ್ಲಿ ವಾಸಿಸುವ ನಿವಾಸಿಗಳು ಎಚ್ಚರಿಕೆ ಇರುವಂತೆ ಜಿಲ್ಲಾಡಳಿತ ಎಚ್ಚರಿಕೆಯ ಸೂಚನೆ ನೀಡಿದೆ.

 ಉತ್ತರ ಕನ್ನಡದಲ್ಲಿ ಮಳೆ ಆರ್ಭಟ, ಜನಜೀವನ ಅಸ್ತವ್ಯಸ್ತ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗದೆ. ಉತ್ತರ ಕನ್ನಡ  ಜಿಲ್ಲಾಕೇಂದ್ರ ಕಾರವಾರದಲ್ಲಿ ಬಿಟ್ಟು ಬಿಡದೇ ಸುರಿದ ಮಳೆಗೆ ಕಾರವಾರ ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದೆ. ಭಟ್ಕಳ ಪಟ್ಟಣದ ಸಂಶುದ್ದೀನ್ ವೃತ್ತದಲ್ಲಿ ಜಲ ಮಯವಾಗಿದ್ದು, ಅಂಕೋಲಾ, ಕುಮಟಾ ಹೊನ್ನಾವರದಲ್ಲೂ ಧಾರಾಕಾರ ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಳೆ ನೀರು ನಿಂತ ಹಿನ್ನೆಲೆ ವಾಹನ ಸವಾರರು ಪರದಾಡುವ ಸ್ಥತಿ ನಿರ್ಮಾಣವಾಗಿತ್ತು.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ 3 ದಿನ ಅಂದರೆ ಜುಲೈ 5, 6 ಹಾಗೂ 7 ರಂದು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 115 ರಿಂದ 204 ಮಿಲಿ ಮೀಟರ್​ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಇಳಿಯದಂತೆ ಸೂಚನೆ ನೀಡಿದೆ. ಮಕ್ಕಳು ನದಿ, ಕೆರೆ, ತಗ್ಗು ಪ್ರದೇಶಗಳ ಬಳಿ ಹೋಗದಂತೆ ಪೋಷಕರು, ಶಾಲಾ ಮುಖ್ಯಸ್ಥರು ಕ್ರಮ ವಹಿಸಬೇಕು. ಹಿರಿಯರು ಹೊರಗೆಬರಬಾರದು, ಅನಿವಾರ್ಯವಾದಲ್ಲಿ ಮನೆ ಸದಸ್ಯರ ಜೊತೆ ಹೋಗಬೇಕು.. ಸಾರ್ವಜನಿಕರು ಜಿಲ್ಲಾಡಳಿತದ ನಿರ್ದೇಶನವನ್ನ ಪಾಲಿಸುವಂತೆ ಮನವಿ ಮಾಡಿದೆ. ಇನ್ನು ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಈ ರೀತಿಯ ಕ್ರಮಗಳನ್ನ ಕೈಗೊಂಡಿದೆ.

ಗದಗ ಜಿಲ್ಲೆಯಲ್ಲಿ ಮನೆಗಳಿಗೆ ನುಗ್ಗಿದ ಚರಂಡಿ ನೀರು

ಧಾರಾಕಾರವಾಗಿ ಸುರಿದ‌ ಮಳೆಯಿಂದಾಗಿ, ಮನೆಯೊಳಗೆ ಚರಂಡಿ ನೀರಿನ ಸಮೇತ ಮಳೆ ನೀರು ನುಗ್ಗಿ ಜನರು ಪಜೀತಿ ಪಟ್ಟಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತಿಯು ಚರಂಡಿಗಳನ್ನ ಸ್ವಚ್ಛತೆ ಮಾಡದೇ ಇದ್ದುದರಿಂದ ಈ ಪರಿಸ್ಥಿತಿ ಅಂತ ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್

ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ವಾತವರಣವಿದ್ದು ಬರದ ಛಾಯೆ ಆವರಿಸಿತ್ತು. ಅದ್ರೆ ನಿನ್ನೆಯಿಂದ ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಗಾಳಿಬೀಡು, ವಿರಾಜಪೇಟೆ ಸೇರಿದಂತೆ ವಿವಿಧ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ಭಾರಿಯ ಮಳೆಗೆ ಹೊಲಿಸಿಕೊಂದ್ರೆ ಈ ಭಾರಿ ವಾಡಿಕೆಯ ಮಳೆಯಾಗಿಲ್ಲ. ಆದ್ರೆ ಮುಂಗಾರು ಚುರುಕಾಗಿದ್ದು ಕೃಷಿ ಚಟುವಟಿಕೆಯ ಜೊತೆಗೆ ಕೊಡಗಿನ ರೈತರು ಕೂಡ ನೆಮ್ಮದಿಯ ನಿಟ್ಟೂಸಿರು ಬಿಟ್ಟಿದ್ದಾರೆ. ಉತ್ತಮ ಮಳೆಯಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ಆರೆಂಜ್​ ಅಲರ್ಟ್​ ಘೋಷಿಸಿದೆ.

ಒಟ್ನಲ್ಲಿ, ಒಂದು ತಿಂಗಳು ತಡವಾಗಿ ನೈರುತ್ಯ ಮಾನ್ಸೂನ್ ಮಾರುತಗಳು ರಾಜ್ಯವನ್ನು ಪ್ರವೇಶಿಸಿವೆ. ಕರಾವಳಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮೊದಲ ಬಲಿ ಪಡೆದಿರೋ ಮಳೆರಾಯ.. ಇನ್ನು ಏನ್​.. ಏನ್..​ ಅವಾಂತರಗಳನ್ನ ಸೃಷ್ಟಿಸುತ್ತಾನೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಗಳೂರಲ್ಲಿ ಭಾರೀ ಮಳೆ, ಕೊಡಗು ಆರೆಂಜ್ ಅಲರ್ಟ್; ಉಳಿದ ಜಿಲ್ಲೆಗಳ ಸ್ಥಿತಿಗತಿ ಹೇಗಿದೆ?

https://newsfirstlive.com/wp-content/uploads/2023/07/rain-2-2.jpg

Load More