ನರ್ಮದಾ ನದಿಯ ಆರ್ಭಟ.. ಜನರಲ್ಲಿ ಹೆಚ್ಚಿದ ಆತಂಕ
ರೆಹರ್ ನದಿಯ ಆರ್ಭಟ.. ಸೇತುವೆಗಳೆಲ್ಲಾ ಜಲಾವೃತ
ಮಳೆಯಿಂದ ಮನೆಗಳು ಜಲಾವೃತ.. ನೀರಲ್ಲಿ ಜನರ ಆಟ
ಉತ್ತರ ಭಾರತದಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ಮಳೆರಾಯನ ಆರ್ಭಟಕ್ಕೆ ನದಿಗಳು ಭೋರ್ಗರೆದು ಹರಿಯುತ್ತಿವೆ. ನದಿಗಳ ಆರ್ಭಟಕ್ಕೆ ತೀರ ಪ್ರದೇಶದ ಜನರಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ನರ್ಮದಾ ನದಿಯ ಭೋರ್ಗರೆತಕ್ಕೆ ಸೇತುವೆಗಳು ಜಲಾವೃತವಾಗಿವೆ. ಜೊತೆಗೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆರಾಯ ಮತ್ತೆ ಕಾಡಲು ಶುರು ಮಾಡಿದ್ದಾನೆ.

ದೇಶದಲ್ಲಿ ಮಳೆರಾಯನ ಆರ್ಭಟ ಕೊಂಚ ಕಡಿಮೆಯಾಗಿದೆ. ಕೆಲವು ರಾಜ್ಯಗಳಲ್ಲಿ ಆಗಾಗ ಅಬ್ಬರಿಸ್ತಿರೋ ಮಳೆರಾಯ ಭಾರೀ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ನಿರಂತರವಾಗಿ ಸುರಿಯುತ್ತಿರೋ ಮಳೆಗೆ ನದಿಗಳು ಭೋರ್ಗರೆದು ಹರಿಯುತ್ತಿವೆ. ಅದರಲ್ಲೂ ಮಧ್ಯಪ್ರದೇಶದ ಜೀವನದಿ ನರ್ಮದೆಯ ಆರ್ಭಟ ಜೋರಾಗಿದೆ. ಎಲ್ಲೆಲ್ಲೂ ಉಕ್ಕಿ ಹರಿಯುತ್ತಾ ಜನರಲ್ಲಿ ಪ್ರವಾಹದ ಆತಂಕ ಸೃಷ್ಟಿಸಿದ್ದಾಳೆ.
ದಿಂಡೋರಿ ಬಳಿ ಸೇತುವೆ ಮೇಲೆ ಹರಿದ ನದಿ ನೀರು
ಮಧ್ಯ ಪ್ರದೇಶದ ದಿಂಡೋರಿ ಬಳಿ ನರ್ಮದಾ ನದಿ ಭೋರ್ಗರೆದು ಹರಿಯುತ್ತಿದೆ. ನದಿಗೆ ಅಡ್ಡಲಾಗಿ ನಿರ್ಮಿಸಿರೋ ಜಬಲ್ಪುರ್-ಅಮರಕಂತಕ್ರಾಷ್ಟ್ರೀಯ ಹೆದ್ದಾರಿ ಬ್ರಿಡ್ಜ್ಮೇಲೆ ನದಿ ನೀರು ಉಕ್ಕಿ ಹರಿಯುತ್ತಿದೆ. ಮೊದಲು ಸೇತುವೆಗೆ ಹತ್ತಿರವಾಗಿ ಹರಿಯುತ್ತಿದ್ದ ನೀರು ಬಳಿಕ ನದಿಯ ಹರಿವು ಹೆಚ್ಚಳವಾಗಿ ಸೇತುವೆಯ ಮೇಲೆ ನದಿ ನೀರು ಹರಿದಿದೆ. ಇದ್ರಿಂದ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.
ಇತ್ತ ದೇವ್ರಾ ಮತ್ತು ಸಾಕೆತ್ ಸಾಗರ್ಗೆ ಸಂಪರ್ಕ ಕಲ್ಪಿಸೋ ಸೇತುವೆ ಕೂಡಾ ಮುಳುಗಡೆಯಾಗಿದೆ.. ಈ ಪ್ರದೇಶದಲ್ಲಿ ನರ್ಮದಾ ನದಿ ದಾಖಲೆಯ ಮಟ್ಟದಲ್ಲಿ ಹರಿಯುತ್ತಿದ್ದಾಳೆ. ನದಿಯ ಭೋರ್ಗರೆತಕ್ಕೆ ಮಾಂಡ್ಲಾ ಪ್ರದೇಶದಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಇತ್ತ ಉತ್ತರ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಮಳೆಯ ಆರ್ಭಟಕ್ಕೆ ಮನೆಗಳಿಗೆ ನೀರು ಸುಗ್ಗಿದೆ. ಅದೆಷ್ಟೋ ಮನೆಗಳು ಜಲಾವೃತವಾಗಿವೆ. ರಸ್ತೆಗಳೆಲ್ಲಾ ಕೆರೆಯಂತೆ ಭಾಸವಾಗುತ್ತಿವೆ. ಹೀಗೆ ರಸ್ತೆಯಲ್ಲಿ ನಿಂತಿರೋ ನೀರಲ್ಲಿ ಜನರು ಆಟವಾಡಿದ ಪ್ರಸಂಗ ನಡೆದಿದೆ. ಅಲ್ಲದೇ ಕೆಲವರು ರಸ್ತೆಯಲ್ಲಿ ಹರಿಯುತ್ತಿರೋ ಮನೆ ನೀರಲ್ಲಿ ಈಜಾಡುತ್ತಾ ಎಂಜಾಯ್ ಮಾಡಿದ್ದಾರೆ.
ಛತ್ತೀಸ್ಗಢದಲ್ಲಿ ಉಕ್ಕಿ ಹರಿಯುತ್ತಿರೋ ರೆಹರ್ ನದಿ
ಛತ್ತೀಸ್ಗಢದಲ್ಲೂ ಮಳೆರಾಯನ ಆರ್ಭಟ ಮುಂದುವರಿದಿದೆ. ಪರಿಣಾಮ ಹಳ್ಳ-ಕೊಳ್ಳಗಳು, ನದಿಗಳು ಮೈದುಂಬಿ ಹರಿಯುತ್ತಿವೆ. ಛತ್ತೀಸ್ಗಡದ ಸೂರಜ್ಪುರ ಜಿಲ್ಲೆಯಲ್ಲಿ ರೆಹರ್ ನದಿಯ ಆರ್ಭಟ ಮುಂದುವರಿದಿದೆ. ನದಿಗೆ ಅಡ್ಡಲಾಗಿ ಕಟ್ಟಿರೋ ಸೇತುವೆ ಮುಳುಗಡೆಗೆ ಕೆಲವೇ ಅಡಿಗಳಷ್ಟೇ ಬಾಕಿ ಇದೆ.. ನದಿಯ ಕೆನ್ನೀರು ಸೇತುವೆಯನ್ನೇ ಮಗುಚಿ ಹಾಕುವಷ್ಟು ರಭಸವಾಗಿ ಹರಿಯುತ್ತಿದೆ.
ಉತ್ತರಾಖಂಡ್ನ ಹರಿದ್ವಾರದಲ್ಲೂ ಮಳೆಯಾರ್ಭಟ
ಉತ್ತರಾಖಂಡ್ನಲ್ಲೂ ಮಳೆರಾಯನ ಆಟಾಟೋಪ ಮುಂದುವರಿದಿದೆ. ಮಳೆರಾಯನ ಮೊರೆತಕ್ಕೆ ಹರಿದ್ವಾರ ಜಿಲ್ಲೆಯಲ್ಲಿ ರಸ್ತೆಗಳು ನದಿಗಳಂತೆ ಭಾಸವಾಗುತ್ತಿವೆ. ಮಳೆ ನೀರು ರಸ್ತೆಗಳ ಮೇಲೆ ರಭಸವಾಗಿ ಹರಿಯುತ್ತಿದೆ.
ಒಡಿಶಾದಲ್ಲಿ ಭಾರೀ ಮಳೆ. ದೇವರಿಗೂ ಜಲದಿಗ್ಬಂಧನ
ಒಡಿಶಾದಲ್ಲೂ ಮಳೆಯ ಮೊರೆತ ಜೋರಾಗಿದೆ. ಮಿತಿ ಮೀರಿ ಸುರಿಯುತ್ತಿರೋ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಯಿಂದಾಗಿ ಬಾಲನ್ಗಿರ್ನಲ್ಲಿರೋ ಪಟಾಣೇಶ್ವರಿಗೂ ಜಲದಿಗ್ಬಂಧನವಾಗಿದೆ. ಮಳೆ ನೀರಿನಲ್ಲಿ ಪಠಾಣೇಶ್ವರಿ ದೇವರ ವಿಗ್ರಹ ಅರ್ಧ ಮುಳುಗಡೆಯಾಗಿದ್ದು, ಇಡೀ ದೇಗುಲ ನೀರಿನಲ್ಲಿ ಮುಳುಗಡೆಯಾಗಿದೆ.
ಒಟ್ಟಾರೆ, ಉತ್ತರಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಭಾರೀ ಮಳೆಯಿಂದ ನದಿಗಳ ಭೋರ್ಗರೆತ ಜೋರಾಗಿದೆ. ಹೀಗಾಗಿ ಜನರಲ್ಲಿ ಪ್ರವಾಹದ ಆತಂಖ ಶುರುವಾಗಿದೆ.. ಹೀಗೆ ಮಳೆ ಸುರಿಯುತ್ತಿದ್ರೆ ಜನರ ಜೀವನ ಅಕ್ಷರಶಃ ಮುಳುಗಿ ಹೋಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ